ETV Bharat / state

ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ: ಹಲವು ಮಹತ್ವದ ವಿಚಾರಗಳ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿದೆ.

ಕಾಂಗ್ರೆಸ್ ಶಾಸಕಾಂಗ ಸಭೆ
ಕಾಂಗ್ರೆಸ್ ಶಾಸಕಾಂಗ ಸಭೆ
author img

By

Published : Jul 27, 2023, 8:54 PM IST

ಬೆಂಗಳೂರು : ನಗರದ ಖಾಸಗಿ ಹೋಟೆಲ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಪುಟ ಸದಸ್ಯರು ಶಾಸಕರು ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಮೇಲೆ ಚರ್ಚೆ ನಡೆಯಲಿದ್ದು, ಶಾಸಕರಿಂದ ವಿಶೇಷ ಮಾಹಿತಿ ಸಲಹೆ ಹಾಗೂ ಸೂಚನೆಯನ್ನು ಸಿಎಂ ಪಡೆಯಲಿದ್ದಾರೆ.

ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಚಿವ ಸಂಪುಟ ಸಭೆ ಮುಗಿಸಿ ಕಾಂಗ್ರೆಸ್ ನಾಯಕರು ಶಾಸಕಾಂಗ ಸಭೆಗೆ ಆಗಮಿಸಿದ್ದು, ಈಗಾಗಲೇ ಜಾರಿಗೆ ಬಂದಿರುವ ವಿವಿಧ ಭಾಗ್ಯ ಯೋಜನೆಗಳ ಸಾಧಕ ಬಾದಕ ಹಾಗೂ ಜನರಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ಶಾಸಕರ ಮೂಲಕ ಸಿಎಂ ಹಾಗೂ ಡಿಸಿಎಂ ಸ್ವೀಕರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರುವ ಇತರ ಭಾಗ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಸಮಾಲೋಚಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜನರ ಪ್ರತಿಕ್ರಿಯೆ ಯಾವ ರೀತಿ ಲಭಿಸುತ್ತಿದೆ ಎಂಬುದರ ಮಾಹಿತಿ ಕಲೆ ಹಾಕುತ್ತಿರುವ ರಾಜ್ಯ ನಾಯಕರು, ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಸಹ ಗಂಭೀರ ಚಿಂತನೆ ನಡೆಸಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಗೆಲ್ಲಲೇಬೇಕು ಎಂಬ ಪಣಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರು ಮುಂಬರುವ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಕುರಿತು ಸಲಹೆ ಸೂಚನೆ ನೀಡುತ್ತಿದ್ದಾರೆ.

ಚುನಾವಣೆ ಗೆಲ್ಲುವುದಕ್ಕೆ ಸಿದ್ಧತೆ : ಪ್ರತಿಯೊಬ್ಬ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಯೋಜನೆಗಳು ಹಾಗೂ ಹೊಸದಾಗಿ ಆರಂಭಿಸಿರುವ ಐದು ಭಾಗ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ.

ಜೊತೆಗೆ ನಮ್ಮ ಸರ್ಕಾರ ಅಧಿಕಾರದಲ್ಲಿದೆ ಎಂದು ಯಾವುದೇ ಕಾರಣಕ್ಕೂ ಮುಂದಿನ 5 ವರ್ಷ ನಾವೇ ಶಾಸಕರು ಎಂದು ಮೈ ಮರೆಯಬೇಡಿ. ಈಗಿನಿಂದಲೇ ಜನಸೇವೆಯಲ್ಲಿ ತೊಡಗಿ ಮುಂದಿನ ಚುನಾವಣೆ ಗೆಲ್ಲುವುದಕ್ಕೆ ಸಿದ್ಧತೆ ಆರಂಭಿಸಿಕೊಳ್ಳಿ. ಶಾಸಕರು ಗೆದ್ದಿರುವ ಕ್ಷೇತ್ರಗಳತ್ತ ಗಮನಹರಿಸುವ ಜೊತೆಗೆ ಸೋತಿರುವ ಕ್ಷೇತ್ರದಲ್ಲಿಯೂ ವಿಶೇಷ ಗಮನ ಹರಿಸಬೇಕಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ನಾಯಕರು ಗೆದ್ದು ಬರುವಂತೆ ಸಿದ್ಧತೆ ಮಾಡಬೇಕಿದೆ. ಸದಾ ಜಾಗೃತರಾಗಿದ್ದು, ಪ್ರತಿಪಕ್ಷಗಳ ನಡೆಯತ್ತಾ ಗಮನ ಹರಿಸಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಶಾಸಕರಿಗೆ ಸೂಚನೆ ನೀಡಿದ್ದಾರೆ.

ಅದು ಸಾಧ್ಯವಿಲ್ಲ.. ಆದರೂ ಎಚ್ಚರಿಕೆಯಿಂದಿರಿ: ಸಿಂಗಪುರ್​ನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ನಡೆಸುತ್ತಿರುವ ಪ್ರಯತ್ನದ ವಿಚಾರ ಸಹ ಪ್ರಸ್ತಾಪವಾಗಿದ್ದು, ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ ಎಂದು ಸಿಎಂ ವಿವರಿಸಿದ್ದಾರೆ. ಆದರೂ ಸರ್ಕಾರವನ್ನು ಪತನಗೊಳಿಸಲು ಸಾಕಷ್ಟು ಶಕ್ತಿಗಳು ಪ್ರಯತ್ನಿಸುತ್ತಿದ್ದು ಅವರ ಪ್ರಯತ್ನದ ಬಗ್ಗೆ ಒಂದು ಎಚ್ಚರಿಕೆಯ ದೃಷ್ಟಿ ಇರಿಸುವಂತೆ ಶಾಸಕರಿಗೆ ಸೂಚಿಸಲಾಗಿದೆ.

ಸಲೀಂ ಅಹ್ಮದ್ ಹೇಳಿದೇನು? : ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿದ್ದು, ಯಾವ ಶಾಸಕರು ಅಸಮಾಧಾನಗೊಂಡಿಲ್ಲ. ಅಧಿವೇಶನ ಸಮಯದಲ್ಲಿ ಶಾಸಕಾಂಗ ಸಭೆ ಕರೆಯಬೇಕಿತ್ತು. ರಾಹುಲ್ ಗಾಂಧಿ ಅವರು ಬಂದ ಕಾರಣ ಸಭೆ ಮುಂದೂಡಲಾಗಿತ್ತು. ಯಾವ ಶಾಸಕರು ಅಸಮಾಧಾನದಿಂದ ಪತ್ರ ಬರೆದಿಲ್ಲ. ಶಾಸಕಾಂಗ ಸಭೆ ಕರೆಯಲು ಮಾತ್ರ ಪತ್ರ ಬರೆದಿದ್ದು, ಮುಂದೂಡಿದ್ದ ಸಭೆ ಇಂದು ನಡೆಯಲಿದೆ ಎಂದು ಸಭೆಗೂ ಮುನ್ನ ಹೇಳಿದರು.

ಇದನ್ನೂ ಓದಿ : ಪಿಡಿಒ ವರ್ಗಾವಣೆ ಸಂಬಂಧ ರೇವಣ್ಣ ಬಳಿ ಯಾವ ಪೆನ್ ಡ್ರೈವ್ ಇದೆ ಕೊಡಲಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.