ETV Bharat / state

ನಗರ ಪೊಲೀಸ್​​ ಆಯುಕ್ತರನ್ನು ಭೇಟಿಯಾದ ಕಾಂಗ್ರೆಸ್​​​​​ನ ಮುಸ್ಲಿಂ ಮುಖಂಡರು

author img

By

Published : Aug 18, 2020, 3:43 PM IST

Updated : Aug 18, 2020, 7:16 PM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಶಾಸಕರಾದ ಜಮೀರ್ ಅಹಮದ್​, ಹ್ಯಾರೀಸ್, ತನ್ವೀರ್ ಸೇಠ್ ಸೇರಿದಂತೆ ಹಲವರು ಬೆಂಗಳೂರು ಪೊಲೀಸ್​​ ಆಯುಕ್ತರನ್ನು ಭೇಟಿ ಮಾಡಿ ನಿಷೇಧಾಜ್ಞೆ ಕುರಿತು ಚರ್ಚೆ ನಡೆಸಿದರು.

congress leaders visit to police commissioner
ಆಯುಕ್ತರನ್ನು ಭೇಟಿಯಾದ ಕಾಂಗ್ರೆಸ್​​​​​ನ ಮುಸ್ಲಿಂ ಮುಖಂಡರು

ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​​​ನ ಮುಸ್ಲಿಂ ಮುಖಂಡರು ನಗರ ಪೊಲೀಸ್​​​ ಆಯುಕ್ತ ಕಮಲ್​​ ಪಂತ್​ ಅವರನ್ನು ಭೇಟಿಯಾಗಿ ಜಾರಿಯಾಗಿರುವ ನಿಷೇಧಾಜ್ಞೆ ಕುರಿತು ಮಾತುಕತೆ ನಡೆಸಿದರು.

ಸಿಎಂ ಇಬ್ರಾಹಿಂ, ಮಾಜಿ ಶಾಸಕ ರೋಷನ್ ಬೇಗ್ (ಸದ್ಯ ಬಿಜೆಪಿ ಸೇರಿದ್ದಾರೆ), ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಶಾಸಕರಾದ ಜಮೀರ್ ಅಹಮದ್​, ಹ್ಯಾರೀಸ್, ತನ್ವೀರ್ ಸೇಠ್, ಮೌಲಾನಾ ಝೂಲ್ಫಿ ಖರ್ ನೂರಿ ಇದ್ದರು.

ಕೊರೊನಾ ಕಾರಣ ಪ್ರಮುಖರನ್ನು ಮಾತ್ರ ಕಚೇರಿಯೊಳಗೆ ಬಿಡಲಾಯಿತು. ಈ ಕುರಿತು ರೋಷನ್ ಬೇಗ್ ಮಾತನಾಡಿ, ಗಲಭೆಯಲ್ಲಿ ಭಾಗಿಯಾದವರನ್ನು ಬಂಧಿಸಿ, ಅಮಾಯಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಆಯುಕ್ತರ ಬಳಿ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಎರಡೂ ಠಾಣೆಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವ ಜನರು ಮುಂಜಾನೆ ತರಕಾರಿ, ದಿನಸಿ ವಸ್ತುಗಳನ್ನು ತರಲು ಬಹಳ ಕಷ್ಟಪಡುತ್ತಿದ್ದಾರೆ. ಎಲ್ಲಿ ನಮಗೂ ಲಾಠಿ ಏಟು ಬೀಳುತ್ತದೋ ಎಂದು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ, ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದೇವೆ ಎಂದು ತಿಳಿಸಿದರು.

Last Updated : Aug 18, 2020, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.