ETV Bharat / state

ಮುನಿರತ್ನ ಸ್ಪರ್ಧೆ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು - Congress complains news

ಮುನಿರತ್ನ ನಕಲಿ ವೋಟರ್ ಐಡಿ ಕಾರ್ಡ್ ಸೃಷ್ಟಿ ಮಾಡಿದ್ದಾರೆ. ಅಲ್ಲದೇ ಅವರ ಆದಾಯ ಎರಡು ವರ್ಷದಲ್ಲಿ ದುಪ್ಪಟ್ಟು ಆಗಿದೆ. ಒಂದೇ ವರ್ಷದಲ್ಲಿ ಶೇ.70 ರಷ್ಟು ಆದಾಯ ಹೆಚ್ಚಾಗಿದೆ. ಜನಪ್ರತಿನಿಧಿ ಕಾಯಿದೆ ವಿರುದ್ಧ ಅಭ್ಯರ್ಥಿ ನಡೆದುಕೊಂಡಿದ್ದು, ಚುನಾವಣಾ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್​ ನಾಯಕರು ಚುನಾವಣಾ ಕಣದಿಂದ ಅವರನ್ನ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

BJP's Munirathna spent more than EC cap, alleges Congress
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದ ಕಾಂಗ್ರೆಸ್ ನಿಯೋಗ
author img

By

Published : Nov 2, 2020, 6:28 PM IST

Updated : Nov 2, 2020, 6:53 PM IST

ಬೆಂಗಳೂರು: ಚುನಾವಣಾ ಅಕ್ರಮ ನಡೆಸಿರುವ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಸ್ಪರ್ಧೆಯನ್ನ ಅನರ್ಹಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಪಕ್ಷದ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದ ಕಾಂಗ್ರೆಸ್ ನಿಯೋಗ, ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.

ಮುನಿರತ್ನ ನಕಲಿ ವೋಟರ್ ಐಡಿ ಕಾರ್ಡ್ ಸೃಷ್ಟಿ ಮಾಡಿದ್ದಾರೆ. ಅಲ್ಲದೇ ಅವರ ಆದಾಯ ಎರಡು ವರ್ಷದಲ್ಲಿ ದುಪ್ಪಟ್ಟು ಆಗಿದೆ. ಒಂದೇ ವರ್ಷದಲ್ಲಿ ಶೇ.70 ರಷ್ಟು ಆದಾಯ ಹೆಚ್ಚಾಗಿದೆ. ಜನಪ್ರತಿನಿಧಿ ಕಾಯಿದೆ ವಿರುದ್ಧ ಅಭ್ಯರ್ಥಿ ನಡೆದುಕೊಂಡಿದ್ದು, ಚುನಾವಣಾ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಚುನಾವಣಾ ಕಣದಿಂದ ಮುನಿರತ್ನ ಅವರನ್ನ ಅನರ್ಹ ಮಾಡಿ ಅಂತ ದೂರು ಸಲ್ಲಿಸಿದ್ದೇವೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದ ಕಾಂಗ್ರೆಸ್ ನಿಯೋಗ

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಜತೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿ.ಎಸ್. ಉಗ್ರಪ್ಪ, ಹೆಚ್​.ಎಂ. ರೇವಣ್ಣ ನಿಯೋಗದಲ್ಲಿದ್ದರು. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಸುದ್ದಿಗೋಷ್ಠಿ ನಡೆಸಿ ಮುನಿರತ್ನ ಅಕ್ರಮ ನಡೆಸಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಚುನಾವಣಾ ಆಯೋಗಕ್ಕೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದರು. ಅದೇ ಪ್ರಕಾರ ದೂರು ಸಲ್ಲಿಸಲಾಯಿತು.

Last Updated : Nov 2, 2020, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.