ETV Bharat / state

ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ?: ಕಾಂಗ್ರೆಸ್ ಟ್ವೀಟೇಟು - K S Eshwarappa tweet against congress

ಚಡ್ಡಿ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಾಯಕರ ತಿಕ್ಕಾಟ ಮುಂದುವರಿದಿದ್ದು, ಕಾಂಗ್ರೆಸ್ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಚಡ್ಡಿ 'ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, ಅದಕ್ಕೆ ತಿರುಗೇಟು ನೀಡಿರುವ ಈಶ್ವರಪ್ಪ, ಆರ್‌ಎಸ್‌ಎಸ್ ತಂಟೆಗೆ ಬರಬೇಡಿ. ಹುಷಾರ್ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ..

congress-and-k-s-eshwarappa-tweet-war
ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ?: ಕಾಂಗ್ರೆಸ್
author img

By

Published : Jun 4, 2022, 9:13 PM IST

ಬೆಂಗಳೂರು : ಚಡ್ಡಿ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಾಯಕರ ತಿಕ್ಕಾಟ ಮುಂದುವರಿದಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್, ಕೆ.ಎಸ್. ಈಶ್ವರಪ್ಪ ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ. 'ಚಡ್ಡಿ' ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ? ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ? ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..? ಎಂದು ಟ್ವೀಟ್ ಮಾಡಿದೆ.

  • '@ikseshwarappa ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ.

    'ಚಡ್ಡಿ' ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ?
    ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ?

    ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..? pic.twitter.com/bBnWsGTxOI

    — Karnataka Congress (@INCKarnataka) June 4, 2022 " class="align-text-top noRightClick twitterSection" data=" ">

ಚಡ್ಡಿ ವಿಚಾರವಾಗಿ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಯನ್ನು ಖಂಡಿಸಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ಟ್ವೀಟ್ ಮಾಡಿದ್ದು, ರಾವಣ, ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ. ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ. ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ. ಚಡ್ಡಿಗೆ ನೀವು ಬೆಂಕಿ ಹಚ್ಚಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಆರ್‌ಎಸ್‌ಎಸ್ ತಂಟೆಗೆ ಬರಬೇಡಿ. ಹುಷಾರ್ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದೆರಡು ದಿನಗಳಿಂದ ಚಡ್ಡಿ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ಗಂಜಿ ಗಿರಾಕಿ ಈಶ್ವರಪ್ಪ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿರುವ ಕಾಂಗ್ರೆಸ್, ಲೋಕೋದ್ಧಾರಕ್ಕಾಗಿ ಈಶ್ವರ ವಿಷ ನುಂಗಿ ವಿಷಕಂಠನಾದ. ಆದರೆ, 40% ಕಮಿಷನ್‌ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಷ ನುಂಗುವಂತೆ ಮಾಡಿದ ಪ್ರಾಣಕಂಟಕ ಗಂಜಿಗಿರಾಕಿ ನೀವು. ಕೈಜಾರಿ ಹೋಗಿರುವ ಮಂತ್ರಿಗಿರಿಗಾಗಿ ಆರ್‌ಎಸ್‌ಎಸ್‌ಗೆ ಅದೆಷ್ಟು ಬಕೆಟ್ ಹಿಡಿಯುತ್ತೀರಿ? ನೀವು ಬಕೆಟ್ ಅಲ್ಲ ಹಂಡೆ ಹಿಡಿದರೂ ಜನರ ವಿಶ್ವಾಸದ ಪಾತ್ರೆ ತುಂಬುವುದಿಲ್ಲ ಎಂದು ಲೇವಡಿ ಮಾಡಿದೆ.

  • ಲೋಕೋದ್ಧಾರಕ್ಕಾಗಿ ಈಶ್ವರ ವಿಷ ನುಂಗಿ ವಿಷಕಂಠನಾದ. ಆದರೆ 40% ಕಮಿಷನ್‌ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಷ ನುಂಗುವಂತೆ ಮಾಡಿದ ಪ್ರಾಣಕಂಟಕ ಗಂಜಿಗಿರಾಕಿ ನೀವು.

    ಕೈ ಜಾರಿ ಹೋಗಿರುವ ಮಂತ್ರಿಗಿರಿಗಾಗಿ ಆರೆಸ್ಸೆಸ್‌ಗೆ ಅದೆಷ್ಟು ಬಕೆಟ್ ಹಿಡಿಯುತ್ತೀರಿ?

    ನೀವು ಬಕೆಟ್ ಅಲ್ಲ ಹಂಡೆ ಹಿಡಿದರೂ ಜನರ ವಿಶ್ವಾಸ ಪಾತ್ರೆ ತುಂಬುವುದಿಲ್ಲ.

ಓದಿ : 'ಚಡ್ಡಿ' ಸುಟ್ಟ ಮೇಲೆ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ವಾಕ್ಸಮರದ ಕಾವು..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.