ದೇವನಹಳ್ಳಿ: ಏಷ್ಯಾದ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ- 2023 ಯಲಹಂಕದ ಏರ್ಫೋರ್ಸ್ ಸ್ಟೇಷನ್ನಲ್ಲಿ ಫೆಬ್ರವರಿ 13 ರಿಂದ 17 ರವರೆಗೆ ನಡೆಯಲಿದೆ. ಸುರಕ್ಷತೆಯ ದೃಷ್ಟಿಯಿಂದ ಪಕ್ಕದಲ್ಲಿಯೇ ಇರುವ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸೇವೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದ್ದು, ಇದರಿಂದಾಗಿ ನಿಲ್ದಾಣದಲ್ಲಿ ಜನದಟ್ಟನೆ ಉಂಟಾಗಿದೆ. ಕೆಲವು ಪ್ರಯಾಣಿಕರು ತಮ್ಮ ವಿಮಾನಗಳನ್ನೂ ಮಿಸ್ ಮಾಡಿಕೊಂಡಿದ್ದಾರೆ.
-
Hello @pratbrat, we have highlighted your concern with our operations team to look into it at the earliest. Further, there will be a phased transition of airlines that will operate their flights from T2. Over the next few months, additional domestic airlines will move into T2.
— BLR Airport (@BLRAirport) February 9, 2023 " class="align-text-top noRightClick twitterSection" data="
">Hello @pratbrat, we have highlighted your concern with our operations team to look into it at the earliest. Further, there will be a phased transition of airlines that will operate their flights from T2. Over the next few months, additional domestic airlines will move into T2.
— BLR Airport (@BLRAirport) February 9, 2023Hello @pratbrat, we have highlighted your concern with our operations team to look into it at the earliest. Further, there will be a phased transition of airlines that will operate their flights from T2. Over the next few months, additional domestic airlines will move into T2.
— BLR Airport (@BLRAirport) February 9, 2023
ಏರ್ ಶೋ ನಡೆಯುವ ಮುನ್ನವೇ ಫೆಬ್ರವರಿ 8 ರಿಂದ 17ರವರೆಗೆ ವಿಮಾನ ನಿಲ್ದಾಣದ ವಾಣಿಜ್ಯ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತೀಕ್ ಶ್ರೀವಾತ್ಸವ್ ಎಂಬ ಪ್ರಯಾಣಿಕ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಫೆಬ್ರವರಿ 9ರ ಮುಂಜಾನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜನದಟ್ಟನೆಯಿಂದ ಪ್ರಯಾಣಿಕರ ಗದ್ದಲ, ಕೂಗಾಟ ಪ್ರಾರಂಭವಾಗಿತ್ತು. ಕೆಲವು ಪ್ರಯಾಣಿಕರು ತಮ್ಮ ವಿಮಾನಗಳನ್ನು ತಪ್ಪಿಸಿಕೊಂಡಿದ್ದಾರೆ. ಟರ್ಮಿನಲ್ 2 ಗೆ ವಿಮಾನ ಸೇವೆಯನ್ನು ವಿಸ್ತರಿಸುವುದು ಹೇಗೆ, ಈ ಬಗ್ಗೆ ನಿಮ್ಮ ಯೋಜನೆಗಳೇನು? ವಿಮಾನ ನಿಲ್ದಾಣದ ಅಧಿಕಾರಿಗಳು ನಿಜವಾಗಿಯೂ ಏನಾದರೂ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ನಿಮ್ಮ ಕಾಳಜಿಯನ್ನು ಪರಿಗಣಿಸಲಾಗಿದೆ. ಹಂತ ಹಂತವಾಗಿ ಟರ್ಮಿನಲ್ 2 ಸೇವೆಯನ್ನು ವಿಸ್ತರಿಸಲಾಗುತ್ತಿದೆ. ಮುಂದಿನ ಕೆಲವು ತಿಂಗಳಲ್ಲಿ ಸಂಪೂರ್ಣವಾಗಿ ದೇಶಿಯ ವಿಮಾನಯಾನ ಸೇವೆಯನ್ನು ಟರ್ಮಿನಲ್ 2ನಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಏರ್ ಶೋ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಿಮಾನಗಳ ಸೇವೆಗಳು ವ್ಯತ್ಯಯವಾಗುವ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದ್ದು, ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು ಈ ಬಗ್ಗೆ ಯೋಜಿತ ಪ್ರಯಾಣದ ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಏರ್ ಶೋ: ಯಲಹಂಕ ವಾಯುನೆಲೆಯಲ್ಲಿ ಉಕ್ಕಿನ ಹಕ್ಕಿಗಳ ತಾಲೀಮು- ವಿಡಿಯೋ