ETV Bharat / state

ಅನುದಾನ ರಹಿತ ಶಾಲೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಗೆ ಸಿಎಂ ಸೂಚನೆ - ಅನುದಾನರಹಿತ ಶಾಲೆಗಳಿಗೆ ಹಣ ಬಿಡುಗಡೆ

ಇಂದು ರಾಜ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಸಿಎಂ ಭೇಟಿ‌ ಮಾಡಿ ಚರ್ಚೆ ನಡೆಸಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಉಳಿಸಿಕೊಂಡಿರುವ ಆರ್​ಟಿಇ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

CM Yediyurappa orders to release fund to non aided schools
ಅನುದಾನರಹಿತ ಶಾಲೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಗೆ ಸಿಎಂ ಸೂಚನೆ
author img

By

Published : May 16, 2020, 4:42 PM IST

ಬೆಂಗಳೂರು: ಅನುದಾನ ರಹಿತ ಶಾಲೆಗಳಿಗೆ ಹಂತ ಹಂತವಾಗಿ ಆರ್​​ಟಿಇ ಹಣ ಬಿಡುಗಡೆ ಮಾಡಲು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ರಾಜ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರಿಂದ ಸಿಎಂ ಭೇಟಿ

ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಸಿಎಂ ಭೇಟಿ‌ ಮಾಡಿ ಚರ್ಚೆ ನಡೆಸಿದರು‌. ಈ ವೇಳೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಉಳಿಸಿಕೊಂಡಿರುವ ಆರ್​ಟಿಇ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅನುದಾನ ರಹಿತ ಶಿಕ್ಷಕರಿಗೆ ಕೋವಿಡ್​​​ನಿಂದ ಸಂಬಳ ಆಗದೆ ಇರುವುದರಿಂದ ಅವರಿಗೆ ಸಹ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದರು.

order copy
ಸಿಎಂ ಹೊರಡಿಸಿರುವ ಆದೇಶದ ಪ್ರತಿ

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿ ರಹಿತ ಸಾಲವನ್ನು ನೀಡಬೇಕು. ಬಡ ಶಿಕ್ಷಕರಿಗೆ ದಿನಸಿ ಕಿಟ್ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಸಿಎಂ ಈಗಾಗಲೇ ಆರ್​​ಟಿಇ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ಬಡ ಶಿಕ್ಷಕರಿಗೆ ಕಿಟ್ ಕೊಡಲು ಕೂಡಲೇ‌ ನಿರ್ದೇಶನ ನೀಡಲಾಗುವುದು. ಉಳಿದ ಬೇಡಿಕೆಗಳನ್ನು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.