ಬೆಂಗಳೂರು: ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರದ್ದುಪಡಿಸಿ ನಿವಾಸದಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬದಲಿಗೆ ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಮೂಲಕ ಹೊಸ ಸಂಪ್ರದಾಯಕ್ಕೆ ಬಿಜೆಪಿ ನಾಂದಿ ಹಾಡಿದೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಿಗದಿಯಾಗಿದ್ದ ಸಭೆಗಳನ್ನು ನಡೆಸುವ ಹೊಣೆಯನ್ನು ಡಿಸಿಎಂ ಹೆಗಲಿಗೆ ವಹಿಸಲಾಗಿದೆ. ಸಿಎಂ ನಡೆಸಬೇಕಿದ್ದ ಸಭೆಗಳ ಜವಾಬ್ದಾರಿಯನ್ನು ಡಿಸಿಎಂಗೆ ಹಸ್ತಾಂತರ ಮಾಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಸಭೆಗಳನ್ನ ರದ್ದುಗೊಳಿಸಿ ಇವತ್ತಿನ ಸಭೆ, ಕಾರ್ಯಕ್ರಮ ರದ್ದುಗೊಳಿಸಿ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲೇ ಉಳಿಯಲು ನಿರ್ಧಾರಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೃಷ್ಣಾದಲ್ಲಿ ನಡೆಯಬೇಕಿದ್ದ ಸಭೆಗಳನ್ನು ರದ್ದುಪಡಿಸುವ ನಿರ್ಧಾರ ಬದಲಿಸಿ ಕೊನೆ ಕ್ಷಣದಲ್ಲಿ ಸಭೆ ನಡೆಸಲು ಡಿಸಿಎಂ ಅಶ್ವತ್ಥನಾರಾಯಣ್ ಅವರಿಗೆ ಸೂಚನೆ ನೀಡಿದ್ದಾರೆ.
ಗುಪ್ತಚರ ವರದಿ ಸಲ್ಲಿಕೆ...
ಗುಪ್ತಚರ ಇಲಾಖೆ ಎಡಿಜಿಪಿ ಕಮಲ್ ಪಂಥ್ ಆಗಮಿಸಿದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಭೇಟಿ ಮಾಡಿ ಬಂದ್ ಪರಿಸ್ಥಿತಿ ಕುರಿತು ಸಿಎಂ ಬಿಎಸ್‌ವೈಗೆ ವರದಿ ನೀಡಿದರು.
ಶಾಂತಿ ಕದಡಿದರೆ ಕ್ರಮ ಕೈಗೊಳ್ಳಿ..
ಭಾರತ್ ಬಂದ್ ಹಿನ್ನೆಲೆಯಲ್ಲಿ ಭದ್ರತೆ ಕಾಪಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕಾರ್ಮಿಕ ಸಂಘಟನೆಗಳ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೊಡಿ. ಪ್ರತಿಭಟನೆ ಹೆಸರಲ್ಲಿ ಶಾಂತಿ ಕದಡದ ರೀತಿ ನೋಡಿಕೊಳ್ಳಿ. ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿ- ಪಾಸ್ತಿಗೆ ನಷ್ಟ ಆಗಬಾರದು. ದಿನ ನಿತ್ಯದ ಕಾರ್ಯಗಳಿಗೆ ಯಾವುದೇ ಅಡೆ ತಡೆ ಆಗಬಾರದು ಬಲವಂತವಾಗಿ ಬಂದ್ ಗೆ ಭಾಗವಹಿಸುವಂತೆ ಒತ್ತಾಯಿಸುವರ ಮೇಲೆ ಮುಲಾಜಿಲ್ದೇ ಕ್ರಮ ಕೈಗೊಳ್ಳಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.