ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ವೀಕ್ಷಣೆ ಮಾಡಿ ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಿಟಿ ರೌಂಡ್ಸ್ ಮಾಡಿದ್ದ ಸಿಎಂ ಇಂದು ಮತ್ತೆ ಸಮಗ್ರವಾಗಿ ವೀಕ್ಷಣೆ ಮಾಡಲಿದ್ದಾರೆ.
ಬೆಳಗ್ಗೆ 9.50ರಿಂದ ಮಧ್ಯಾಹ್ನ 12.30ರವರೆಗೆ ಸಿಎಂ ನಗರ ಪ್ರದಕ್ಷಿಣೆ ಹಾಕಲಿದ್ದಾರೆ. ವಾರ್ಡ್ ನಂ. 68, ಜೆ.ಸಿ. ನಗರ, 60 ಅಡಿ ರಸ್ತೆ, ವಾರ್ಡ್ ನಂ. 74, ಕಮಲಾನಗರ ಮುಖ್ಯ ರಸ್ತೆ ಶಂಕರಮಠ ದೇವಸ್ಥಾನದ ಹತ್ತಿರ, ಲಗ್ಗೆರೆ 19ನೇ ಮುಖ್ಯ ರಸ್ತೆ, ನಾಗವಾರ ಮೆಟ್ರೋ ಸ್ಟೇಷನ್ - ಅರೆಬಿಕ್ ಕಾಲೇಜು ಎದುರು, 18ನೇ-19ನೇ ಮುಖ್ಯ ರಸ್ತೆ, 5ನೇ ಬ್ಲಾಕ್ & 44ನೇ ಕ್ರಾಸ್, ಹೆಚ್.ಬಿ.ಆರ್. ಲೇಔಟ್, ಹೆಬ್ಬಾಳ - ಎಸ್.ಟಿ.ಪಿ ಪರಿವೀಕ್ಷಣೆ ಮಾಡುವರು.
ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳು ಮತ್ತು ಕಲ್ವರ್ಟ್‌ಗಳ ವೀಕ್ಷಣೆ, ಮಳೆ ನೀರು ಕಾಲುವೆಗಳ ಹೂಳು ತೆಗೆದಿರುವುದರ ವೀಕ್ಷಣೆ, ಮಳೆ ನೀರು ಕಾಲುವೆಗಳ ಹೂಳನ್ನು ತೆಗೆದಿರುವುದನ್ನು ವೀಕ್ಷಿಸಲಿದ್ದಾರೆ. ಮೆಟ್ರೋ ಕಾಮಗಾರಿ, ಮಳೆ ನೀರು ಕಾಲುವೆಗಳ ಹೂಳನ್ನು ತೆಗೆದಿರುವುದನ್ನು ವೀಕ್ಷಿಸುವರು. 100 ಎಂ.ಎಲ್.ಡಿ., ಎಸ್.ಟಿ.ಪಿ. ಕಾಮಗಾರಿ ಮುಕ್ತಾಯದ ಬಗ್ಗೆ ವೀಕ್ಷಿಸಲಿದ್ದಾರೆ.
ಸಿಟಿ ರೌಂಡ್ಸ್ ಮುಗಿದ ನಂತರ ಮಧ್ಯಾಹ್ನ 12.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗೋಷ್ಠಿ ನಡೆಸಿ ಪರಿಹಾರ ಕಾರ್ಯಾಚರಣೆ ಕುರಿತು ಸಮಗ್ರ ವಿವರವನ್ನು ನೀಡಲಿದ್ದಾರೆ.
ಇದನ್ನೂ ಓದಿ: ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ: ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಆಕ್ರೋಶ