ಬೆಂಗಳೂರು: ಮಕ್ಕಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಇಂದಿನಿಂದ ಕಾಲೇಜುಗಳು ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಕಳಕಳಿಯ ಮನವಿ ಮಾಡ್ತೇನೆ. ಕೋರ್ಟ್ನ ಮಧ್ಯಂತರ ಆದೇಶ ಪಾಲಿಸಿ. ಅಂತಿಮ ತೀರ್ಪಿಗೆ ಸಂಯಮದಿಂದ ಕಾಯಬೇಕು. ಏನೇ ಗೊಂದಲ ಇದ್ದರೂ ನಿವಾರಣೆ ಮಾಡಿ. ಶಾಲೆ, ಕಾಲೇಜುಗಳ ಆಡಳಿತ ಮಂಡಳಿ, ಪೋಷಕರು ಪರಸ್ಪರ ಗೊಂದಲ ಬಗೆಹರಿಸಿಕೊಂಡು ಸೌಹಾರ್ದ ವಾತಾವರಣ ನಿರ್ಮಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಆ ಮೂಲಕ ಅವಕಾಶ ಮಾಡಿಕೊಡಬೇಕು ಎಂದರು.
ಸದನದಲ್ಲಿ ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಿರ್ಧಾರ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅದನ್ನು ಸದನದಲ್ಲೇ ಎದುರಿಸುತ್ತೇವೆ ಎಂದರು.
ಸಾರ್ವಜನಿಕರನ್ನು ಬಿಡದ ಪೊಲೀಸರ ಮೇಲೆ ಗರಂ: ತಮ್ಮ ಮನೆ ಬಳಿ ಸಾರ್ವಜನಿಕರನ್ನು ಬಿಡದ ಪೊಲೀಸರ ಮೇಲೆ ಸಿಎಂ ಗರಂ ಆದ ಘಟನೆ ನಡೆಯಿತು. 'ರೀ ಯಾಕ್ರಿ ಅವರನ್ನು ಬಿಟ್ಟಿಲ್ಲ ನೀವು' ಎಂದು ತರಾಟೆಗೆ ತೆಗೆದುಕೊಂಡರು.
ನಿತ್ಯ ಸಿಎಂಗೆ ಮನವಿ ಕೊಡಲು ಸಾರ್ವಜನಿಕರು ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಆಗಮಿಸುತ್ತಾರೆ. ಆದರೆ ಇಂದು ಪೊಲೀಸರು ಅವರನ್ನು ಬಿಡದೆ ದೂರ ನಿಲ್ಲಿಸಿದ್ದರು. ಇದನ್ನು ಕಂಡ ಸಿಎಂ, ಪೊಲೀಸರ ಮೇಲೆ ಸಿಎಂ ಸಿಟ್ಟಾದರು. ಸಿಎಂ ಸೂಚನೆ ನಂತರ ಜನರಿಗೆ ಅವಕಾಶ ಮಾಡಿ ಕೊಡಲಾಯಿತು.