ETV Bharat / state

ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸಿವಿಲ್‌ ಕಂಟ್ರಾಕ್ಟರ್ ಅರೆಸ್ಟ್ - ಚರ್ಚ್ ಸ್ಟ್ರೀಟ್

ಚರ್ಚ್ ಸ್ಟ್ರೀಟ್ ಬಳಿ ಯುವತಿ ಮೇಲೆ‌ ಸಿವಿಲ್‌ ಕಂಟ್ರಾಕ್ಟರ್ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ ಆತನನ್ನು ಕಬ್ಬನ್​ ಪಾರ್ಕ್​ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ದೌರ್ಜನ್ಯ
ಲೈಂಗಿಕ ದೌರ್ಜನ್ಯ
author img

By ETV Bharat Karnataka Team

Published : Oct 10, 2023, 7:06 AM IST

ಬೆಂಗಳೂರು: ಕಬ್ಬನ್​ ಪಾರ್ಕ್​ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ಬಳಿ ಯುವತಿ ಮೇಲೆ‌ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 23 ವರ್ಷದ ವಿದ್ಯಾರ್ಥಿನಿ ಮೇಲೆ‌ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್‌ ಕಂಟ್ರಾಕ್ಟರ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ: ಅಕ್ಟೋಬರ್ 7 ರಂದು ದೌರ್ಜನ್ಯಕ್ಕೊಳಗಾದ ಯುವತಿ ಸೇರಿ ಆಕೆಯ ಸ್ನೇಹಿತೆಯರು ಚರ್ಚ್ ಸ್ಟ್ರೀಟ್ ಬಳಿ ಊಟಕ್ಕಾಗಿ ಬಂದಿದ್ದರು.‌ ಊಟ ಮುಗಿಸಿ ತಡರಾತ್ರಿಯಾಗಿದ್ದರಿಂದ ಮನೆಗೆ ಹೋಗಲು ಓಲಾ‌ ಆಟೊ‌ ಬುಕ್ ಮಾಡಿ‌ ಕಾಯುವಾಗ ಆರೋಪಿ ಏಕಾಏಕಿ ಬಂದು ಯುವತಿಯನ್ನು ಹಿಡಿದು ಆಕೆಯನ್ನು ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಈ ಬಗ್ಗೆ ಆತಂಕಕ್ಕೊಳಗಾದ ಯುವತಿ ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಸ್ಥಳಕ್ಕೆ ಬಂದ ಗಸ್ತು ಪೊಲೀಸರು ಪರಿಶೀಲಿಸಿ ಆರೋಪಿ ಮಧುಸೂದನ್​ನನ್ನು ಬಂಧಿಸಿದ್ದರು. ದಕ್ಷಿಣ ಕನ್ನಡದ ಬಂಟ್ವಾಳ ಮೂಲದ ಈ ವ್ಯಕ್ತಿ ವೃತ್ತಿಯಲ್ಲಿ ಸಿವಿಲ್ ಕಂಟ್ರಾಕ್ಟರ್ ಆಗಿದ್ದ. ಇತ್ತೀಚೆಗೆ ಕೆಂಗೇರಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ. ಅಕ್ಟೋಬರ್ 7 ರಂದು ರೆಸಿಡೆನ್ಸಿ ರೋಡ್​ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್​ಗೆ ಬಂದು ಮದ್ಯಸೇವಿಸಿದ್ದ. ಅಂದು ತಡರಾತ್ರಿ ಚರ್ಚ್ ಸ್ಟ್ರೀಟ್ ಬಳಿ ಊಟಕ್ಕಾಗಿ ಬಂದಾಗ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು‌ ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: 6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಹೋಮ್ ನರ್ಸ್​ಗೆ 20 ವರ್ಷಗಳ ಕಾರಾಗೃಹ ಶಿಕ್ಷೆ

ಸಂಗೀತ ನೆಪದಲ್ಲಿ ಅತ್ಯಾಚಾರ: ಕಳೆದ ವಾರ ರಾಮನಗರದಲ್ಲೂ ಕೂಡ ಬಾಲಕಿ ಮೇಲೆ ಅತ್ಯಾಚಾರ ಎಸೆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಕೂದೂರಿನ ನಿವಾಸಿ 15 ವರ್ಷದ ಬಾಲಕಿಗೆ ಸಂಗೀತ ಹೇಳಿ ಕೊಡುವ ನೆಪದಲ್ಲಿ ಅತ್ಯಾಚಾರ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದರು. ಸಂತ್ರಸ್ತೆ ಬಾಲಕಿ ಎಂದಿನಂತೆ ತನ್ನ ಶಾಲೆಗೆ ತೆರಳಿದ್ದು, ಈ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹಾಗಾಗಿ ಶಿಕ್ಷಕರು ಬಾಲಕಿಯ ಪೋಷಕರನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಹೊಟ್ಟೆ ನೋವು ಅತಿಯಾದ ಕಾರಣ ಬಾಲಕಿಗೆ ಚಿಕಿತ್ಸೆ ಕೊಡಿಸುವಂತೆ ಶಿಕ್ಷಕರು ಪೋಷಕರಿಗೆ ತಿಳಿಸಿ ಬಾಲಕಿಯನ್ನು ಅವರೊಂದಿಗೆ ಕಳುಹಿಸಿದ್ದರು. ಆಸ್ಪತ್ರೆಗೆ ತೆರಳಿದ್ದ ಪೋಷಕರಿಗೆ ಪರಿಶೀಲನೆ ವೇಳೆ ಮಗಳು ಗರ್ಭಿಣಿಯಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಬಾಲಕಿಯನ್ನು ವಿಚಾರಿಸಿದಾಗ ಸಂಗೀತ ಶಿಕ್ಷಕ ಈ ಕೃತ್ಯ ಎಸೆಗಿರುವ ಬಗ್ಗೆ ವಿವರಿಸಿದ್ದಳು. ತಕ್ಷಣವೇ ಪೋಷಕರು ಕುದೂರು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಸಂಗೀತ ಶಿಕ್ಷಕನ್ನು ಬಂಧಿಸಿದ್ದು, ಪೋಕ್ಸೋ ಪ್ರಕರಣದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.