ETV Bharat / state

ಚಿತ್ರಕಲಾ ಪರಿಷತ್​​ನಲ್ಲಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ - ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ

ಇಂದು ಚಿತ್ರಕಲಾ ಪರಿಷತ್​​ನಲ್ಲಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿಯನ್ನ ಸಚಿವ ಎಸ್ ಟಿ ಸೋಮಶೇಖರ್ ಪ್ರದಾನ ಮಾಡಿದರು. ನಾಲ್ವರು ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಲಾಯಿತು..

ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ
ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ
author img

By

Published : Mar 26, 2022, 3:46 PM IST

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಚಿತ್ರ ಸಂತೆಗೆ ಕೌಂಟ್ ಡೌನ್ ಶುರುವಾಗಿದೆ. ಸಾವಿರಾರು ಚಿತ್ರಗಳ ಲೋಕವೇ ನಾಳೆ ಅನಾವರಣಗೊಳ್ಳಲಿದೆ. 75ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಈ ಸಲ ಸಮರ್ಪಿಸಲಾಗಿದೆ. ಚಿತ್ರಸಂತೆಯ ಮತ್ತೊಂದು ವಿಶೇಷತೆ ಎಂದರೆ ವಾರ್ಷಿಕ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡುವುದು.

ಇಂದು ಚಿತ್ರಕಲಾ ಪರಿಷತ್​​ನಲ್ಲಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿಯನ್ನ ಸಚಿವ ಎಸ್ ಟಿ ಸೋಮಶೇಖರ್ ಪ್ರದಾನ ಮಾಡಿದರು. ನಾಲ್ವರು ಹಿರಿಯ ಕಲಾವಿದರನ್ನು ಗುರುತಿಸಿ ವಿವಿಧ ವರ್ಗದ ಕಲಾವಿದರಿಗೆ ವಿತರಿಸಲಾಯಿತು. ಹೆಚ್.ಕೆ.ಕೇಜಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ, ಮತ್ತು ವೈಸುಬ್ರಮಣ್ಯರಾಜು ಪ್ರಶಸ್ತಿಗಳಿಗೆ ರೂ. 50,000/- ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.‌ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಎಸ್.ನಂಜುಂಡರಾವ್ ಇವರ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಹಿರಿಯ ಕಲಾವಿದರಿಗೆ 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಮತ್ತು ಫಲಕವನ್ನು ನೀಡಿ ಗೌರವಿಸಲಾಗುತ್ತಿದೆ.

ಪ್ರಶಸ್ತಿ- ಪುರಸ್ಕೃತ ಕಲಾವಿದರು :

1) ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿ- ಪ್ರೊ. ರಥನ್ ಪರಿಮು

2)ಹೆಚ್.ಕೆ.ಕೇಜಿವಾಲ್ ಪ್ರಶಸ್ತಿ- ಪ್ರೊ.ವಿಶ್ವಂಭರಂ

3) ಎಂ.ಆರ್ಯಮೂರ್ತಿ ಪ್ರಶಸ್ತಿ- ಬಸವರಾಜ್ ಮುಸಾವಳಗಿ

4) ಡಿ.ದೇವರಾಜ ಅರಸು ಪ್ರಶಸ್ತಿ- ಎನ್. ಪುಷ್ಪಮಾಲ

5)ವೈ. ಸುಬ್ರಮಣ್ಯರಾಜು ಪ್ರಶಸ್ತಿ- ನರೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.