ETV Bharat / state

ಪ್ರಧಾನಿ ಮೋದಿ ನಂಬಿಕೆ ಉಳಿಸಿಕೊಳ್ಳಿ: ನೂತನ ಸಚಿವರಿಗೆ ಸಿಎಂ ಬಿಎಸ್​ವೈ ಕಿವಿಮಾತು - CM met the new Union Minister

ಕರ್ನಾಟಕ ಭವನಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ ಹಾಗು ಎ.ನಾರಾಯಣ ಸ್ವಾಮಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ವರಿಷ್ಠರು ಕಲ್ಪಿಸಿದ ಅವಕಾಶಕ್ಕಾಗಿ ಯಡಿಯೂರಪ್ಪ ಅವರಿಗೂ ಧನ್ಯವಾದ ಹೇಳಿದರು.

ನೂತನ ಸಚಿವರಿಗೆ ಸಿಎಂ ಬಿಎಸ್​ವೈ ಕಿವಿಮಾತು
ನೂತನ ಸಚಿವರಿಗೆ ಸಿಎಂ ಬಿಎಸ್​ವೈ ಕಿವಿಮಾತು
author img

By

Published : Jul 16, 2021, 10:43 PM IST

ಬೆಂಗಳೂರು: ತಮ್ಮ ತಮ್ಮ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಪ್ರಧಾನಿ ಮೋದಿ ನಂಬಿಕೆ ಉಳಿಸಿಕೊಳ್ಳಬೇಕು ಎಂದು ರಾಜ್ಯದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರಿರುವ ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದರು.

ನೂತನ ಸಚಿವರಿಗೆ ಸಿಎಂ ಬಿಎಸ್​ವೈ ಕಿವಿಮಾತು
ನೂತನ ಸಚಿವರಿಗೆ ಸಿಎಂ ಬಿಎಸ್​ವೈ ಕಿವಿಮಾತು

ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು, ನೂತನ ಸಚಿವರು ಭೇಟಿ ಮಾಡಿದರು. ಕರ್ನಾಟಕ ಭವನಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ ಹಾಗು ಎ.ನಾರಾಯಣ ಸ್ವಾಮಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ವರಿಷ್ಠರು ಕಲ್ಪಿಸಿದ ಅವಕಾಶಕ್ಕಾಗಿ ಯಡಿಯೂರಪ್ಪ ಅವರಿಗೂ ಧನ್ಯವಾದ ಹೇಳಿದರು.

ಈ ವೇಳೆ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮರೆಯಬಾರದು, ಕ್ಷೇತ್ರವನ್ನು ಕಡೆಗಣಿಸಬೇಡಿ ಎಂದು ಸೂಚ್ಯವಾಗಿ ಹೇಳಿದ ಸಿಎಂ ಯಡಿಯೂರಪ್ಪ, ಶ್ರದ್ಧೆಯಿಂದ ಕೆಲಸ ಮಾಡಿ ನಂಬಿಕೆ ಉಳಿಸಿಕೊಳ್ಳಿ, ರಾಜ್ಯಕ್ಕೂ ಒಳ್ಳೆಯ ಹೆಸರು ತನ್ನಿ ಎಂದು ಶುಭ ಕೋರಿದರು.

ಇದನ್ನೂ ಓದಿ : ಪ್ರಧಾನಿ ಭೇಟಿಯಾದ ಬಿಎಸ್​ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.