ETV Bharat / state

ವಂಚನೆ ಪ್ರಕರಣ: ಸ್ಯಾಂಡಲ್​ವುಡ್​ ಖ್ಯಾತ ನಟಿಯ ಸ್ನೇಹಿತ ಸೇರಿ ಇಬ್ಬರು ಅರೆಸ್ಟ್​ - ಆರ್​ಟಿಓನ ದ್ವಿತೀಯ ದರ್ಜೆ ಅಧಿಕಾರಿ ರವಿಶಂಕರ್ ಬಂಧನ

ವಂಚನೆ ಪ್ರಕರಣ- ಆರ್​ಟಿಓನ ದ್ವಿತೀಯ ದರ್ಜೆ ಅಧಿಕಾರಿ ರವಿಶಂಕರ್ ಮತ್ತು ಅಜಯ್ ಎಂಬುವರನ್ನು ಬಂಧಿಸಿದ ಪೊಲೀಸರು- ರವಿಶಂಕರ್​ ಸ್ಯಾಂಡಲ್​ವುಡ್​ನ ನಟಿಯೊಬ್ಬರ ಸ್ನೇಹಿತ

RTO second grade officer Ravi Shankar arrested
ಸ್ಯಾಂಡಲ್ ವುಡ್​ನ ಖ್ಯಾತ ನಟಿಯೊಬ್ಬರ ಸ್ನೇಹಿತನ ಬಂಧನ
author img

By

Published : Jul 17, 2022, 3:25 PM IST

ಬೆಂಗಳೂರು: ಸ್ಯಾಂಡಲ್ ವುಡ್​​ನ ಖ್ಯಾತ ನಟಿಯ ಸ್ನೇಹಿತ ಹಾಗೂ ಡ್ರಗ್ಸ್ ಕೇಸ್ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ‌. ಯಶವಂತಪುರ ಆರ್​ಟಿಓನ ದ್ವಿತೀಯ ದರ್ಜೆ ಅಧಿಕಾರಿ (ಎಸ್​ಡಿಎ) ರವಿಶಂಕರ್ ಬಂಧಿತ ಆರೋಪಿ. ರವಿಶಂಕರ್ ಸ್ಯಾಂಡಲ್ ವುಡ್ ನಟಿಯೊಬ್ಬರ ಸ್ನೇಹಿತನಾಗಿದ್ದು, ಡ್ರಗ್ಸ್ ಕೇಸ್​​ನಲ್ಲಿ ಈ ಹಿಂದೆ ಜೈಲಿಗೆ ಹೋಗಿದ್ದ.

ಇದೀಗ ಮತ್ತೆ ಕಾರಿಗೆ ಲೈಫ್ ಟೈಮ್ ಟ್ಯಾಕ್ಸ್ ಕಟ್ಟುತ್ತೇನೆ ಅಂತಾ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆ ಯೋಗೇಶ್ ಎಂಬುವವರು ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಆರೋಪಿಗಳಾದ ರವಿಶಂಕರ್ ಹಾಗೂ ಅಜಯ್​ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹುಟ್ಟುಹಬ್ಬದಂದೇ ಕಲ್ಲಿನಿಂದ ಜಜ್ಜಿ, ರುಂಡ ಬೇರ್ಪಡಿಸಿ ಯುವಕನ ಹತ್ಯೆ

ಅಜಯ್ ಎಂಬ ಕಾರ್​ ಡೀಲರ್​​ನಿಂದ ಆಶಾ ಎಂಬುವವರು ಕಾರು ಖರೀದಿಸಿದ್ದರು. ಲೈಫ್ ಟೈಮ್ ತೆರಿಗೆ ಕಟ್ಟಲು ಅಜಯ್​ಗೆ ಆಶಾ ಯೋಗೇಶ್ ದಂಪತಿ ಹಣ‌ ಕೊಟ್ಟಿದ್ದರು. ಆದರೆ ಹಣ ಪಡೆದುಕೊಂಡ ಆರೋಪಿಗಳು, ಆರ್​ಟಿಓಗೆ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.