ETV Bharat / state

ರಾಜ್ಯಕ್ಕೆ ಕೇಂದ್ರದ ನೆರೆ ಹಾನಿ ಅಧ್ಯಯನ ತಂಡ ಭೇಟಿ : ಸೆ.5-6 ರಂದು ಅಧ್ಯಯನ

ಮೂರು ಸದಸ್ಯರ ತಂಡ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಎರಡು ಸದಸ್ಯರ ತಂಡ ಹಾಗೂ ಧಾರವಾಡ ಮತ್ತು ಬಾಗಲಕೋಟೆಗೆ ಎರಡು ಸದಸ್ಯರ ಪ್ರತ್ಯೇಕ ತಂಡ ಭೇಟಿ ನೀಡಿ ನೆರೆ ಹಾನಿಯ ಅಧ್ಯಯನ ನಡೆಸಲಿದೆ. ಸೆ.7ಕ್ಕೆ ಅಧ್ಯಯನ ತಂಡ ವಾಪಸ್​ ತೆರಳಲಿದೆ..

central-team-visits-to-state-for-flood-affected-area-reaserch
ನೆರೆ
author img

By

Published : Sep 3, 2021, 8:56 PM IST

ಬೆಂಗಳೂರು : ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಹಿನ್ನೆಲೆ ರಾಜ್ಯಕ್ಕೆ ಕೇಂದ್ರದ ನೆರೆಹಾನಿ ಅಧ್ಯಯನ ತಂಡ ಭೇಟಿ ನೀಡಲಿದೆ. ಸೆ.4ರಿಂದ ಸೆ.7ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಅಧ್ಯಯನ ‌ನಡೆಸಲಿದೆ.

ಸೆ. 4ಕ್ಕೆ ನೆರೆ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಲಿರುವ ಏಳು ಸದಸ್ಯರ ಕೇಂದ್ರದ ಅಧಿಕಾರಿಗಳ ನಿಯೋಗ ಮೂರು ಪ್ರತ್ಯೇಕ ತಂಡಗಳಾಗಿ ನೆರೆ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಸೆ. 4ಕ್ಕೆ ಸಂಜೆ ನಾಲ್ಕು ಗಂಟೆಗೆ ಸಿಎಂ ಜೊತೆ ತಂಡ ಸಭೆ ನಡೆಸಲಿದೆ. ಸೆಪ್ಟೆಂಬರ್ 5 ಮತ್ತು 6ರಂದು ಎರಡು ದಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ‌ನೀಡಲಿದೆ. ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ.

ಮೂರು ಸದಸ್ಯರ ತಂಡ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಎರಡು ಸದಸ್ಯರ ತಂಡ ಹಾಗೂ ಧಾರವಾಡ ಮತ್ತು ಬಾಗಲಕೋಟೆಗೆ ಎರಡು ಸದಸ್ಯರ ಪ್ರತ್ಯೇಕ ತಂಡ ಭೇಟಿ ನೀಡಿ ನೆರೆ ಹಾನಿಯ ಅಧ್ಯಯನ ನಡೆಸಲಿದೆ. ಸೆ.7ಕ್ಕೆ ಅಧ್ಯಯನ ತಂಡ ವಾಪಸ್​ ತೆರಳಲಿದೆ.

ನೆರೆ ಹಾನಿಯ ಅಂದಾಜು ಎಷ್ಟು? : ಜುಲೈನಲ್ಲಿ ಬೆಳಗಾವಿ, ಹಾವೇರಿ, ಉತ್ತರಕನ್ನಡ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದು ಸಾಕಷ್ಟು ಬೆಳೆ, ಆಸ್ತಿ ಹಾನಿಗೀಡಾಗಿದೆ. 5,690.52 ಕೋಟಿ ರೂ. ಒಟ್ಟು ನೆರೆ ಹಾನಿ ಸಂಭವಿಸಿರುವ ಬಗ್ಗೆ ಅಂದಾಜಿಸಿದೆ. ಎಸ್​ಡಿಆರ್​ಎಫ್​ ಮಾರ್ಗಸೂಚಿ ಅನ್ವಯ 765.84 ಕೋಟಿ ರೂ. ನೆರೆ ನಷ್ಟ ಅಂದಾಜು ಮಾಡಿದೆ. ರಾಜ್ಯ ಸರ್ಕಾರ ನೆರೆ ಹಾನಿ ವರದಿಯನ್ನು ಕೇಂದ್ರಕ್ಕೆ ನೀಡಿದೆ.

ಮಳೆ ಹಾನಿಗೆ 1,94,656 ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಬೆಳೆ ಹಾನಿ ಸಂಭವಿಸಿದೆ. 10076 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. 358 ಪ್ರಾಣಿಗಳು ಅಸುನೀಗಿವೆ. 18719 ಮನೆಗಳು ಹಾನಿಯಾಗಿವೆ. 22,725 ಕಿ.ಮೀ ರಸ್ತೆಗಳಿಗೆ ನೆರೆ ಹಾನಿ ಸಂಭವಿಸಿದೆ.

ಓದಿ: ಸಮುದ್ರದ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿಸುವ ವಿನೂತನ ತಂತ್ರಜ್ಞಾನ: ಮಂಗಳೂರಿನಲ್ಲಿ ಪ್ರಥಮ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.