ETV Bharat / state

ನನಗೆ ಕೊಟ್ಟಂತೆ ಬೊಮ್ಮಾಯಿಗೂ ಬೆಂಬಲ ಕೊಡಿ: ಬಿಎಸ್​​ವೈ ಮನವಿ

ಬೊಮ್ಮಾಯಿ ಅವರದ್ದು ಸರ್ವಸಮ್ಮತ ಆಯ್ಕೆ. ಅವರಿಗೆ ಆರೂವರೆ ಕೋಟಿ ಜನರು ಆಶೀರ್ವಾದ ನೀಡಬೇಕು. ಒಳ್ಳೆಯ ಆಡಳಿತ ನಡೆಸಲು ಅವಕಾಶ ಕೊಡುವಂತೆ ಬಿಎಸ್ವೈ ಮನವಿ ಮಾಡಿದರು.

ಬಿ.ಎಸ್.ಯಡಿಯೂರಪ್ಪ ಹೇಳಿಕೆ
ಬಿ.ಎಸ್.ಯಡಿಯೂರಪ್ಪ ಹೇಳಿಕೆ
author img

By

Published : Jul 27, 2021, 9:47 PM IST

Updated : Jul 27, 2021, 9:54 PM IST

ಬೆಂಗಳೂರು: ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತಗಾರ,‌ ನನಗೆ ನೀಡಿದಂತೆ ಅವರಿಗೂ ಬೆಂಬಲ ನೀಡಿ ಎಂದು ನಾಡಿನ ಜನತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಂತರ ಮಾತನಾಡಿದ ಅವರು, ಬೊಮ್ಮಾಯಿ ಅವರಿಗೆ ರಾಜ್ಯದ ಜನತೆ ಸಂಪೂರ್ಣ ಸಹಕಾರ ಕೊಡಲಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷ ಕಟ್ಟಲಿದ್ದೇವೆ, ಅಭಿವೃದ್ಧಿ ಕಾರ್ಯ ನಡೆಸಲಿದ್ದೇವೆ, ನನಗಿಂತ ಹೆಚ್ಚು ಒಳ್ಳೆಯ ಕೆಲಸವನ್ನು ಬೊಮ್ಮಾಯಿ ಮಾಡಲಿದ್ದಾರೆ ಎಂದರು.

ಬಿಎಸ್​​ವೈ ಮನವಿ

ಬೊಮ್ಮಾಯಿ ಸರ್ವಸಮ್ಮತ ಆಯ್ಕೆಯಾಗಿದೆ. ಅವರಿಗೆ ಆರೂವರೆ ಕೋಟಿ ಜನರು ಆಶೀರ್ವಾದ ನೀಡಬೇಕು. ಒಳ್ಳೆಯ ಆಡಳಿತ ನಡೆಸಲು ಅವಕಾಶ ಕೊಡುವಂತೆ ಮನವಿ ಮಾಡಿದ ಬಿಎಸ್ವೈ, ಕಾರ್ಯಕರ್ತರಿಗೂ ಈ ಆಯ್ಕೆ ಸಂತೋಷ ತಂದಿದೆ. ಬಿಜೆಪಿಯಲ್ಲಿ ಮಾತ್ರ ಈ ರೀತಿ ಸರ್ವಾನುಮತದ ಆಯ್ಕೆ ಸಾಧ್ಯ. ಅದನ್ನು ಮಾಡಿ ತೋರಿಸಿದ್ದೇವೆ. ಈ ನಿರ್ಧಾರ ಮೊದಲೇ ಆಗಿದ್ದಲ್ಲ, ಇಂದೇ ತೀರ್ಮಾನವಾಗಿದ್ದು ಎಂದರು.

ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈಗಾಗಲೇ ಯಡಿಯೂರಪ್ಪ ನಿರ್ಣಯ ಮಾಡಿದ್ದರು. ಅವರು ಪ್ರಧಾನಿ ಜೊತೆ ಮಾತುಕತೆ ಮಾಡಿದ ನಂತರ ದೊಡ್ಡ ಜವಾಬ್ದಾರಿಯನ್ನು ಕೇಂದ್ರದ ನಾಯಕರು, ಮೋದಿ, ಅಮಿತ್ ಶಾ, ಯಡಿಯೂರಪ್ಪ ನನಗೆ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಜನಪರ ಆಡಳಿತ ನೀಡಲು ಕೆಲಸ ಮಾಡಲಿದ್ದೇನೆ ಎಂದು ಭರವಸೆ ಕೊಟ್ಟರು.

Last Updated : Jul 27, 2021, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.