ಬೆಂಗಳೂರು: ಲೇಟ್ ಆದರೂ ಲೇಟಸ್ಟ್ ಆಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ MY BMTC ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಆರಂಭಿಕವಾಗಿ ಸಂಸ್ಥೆಯು ಬೇಟಾ ಅವೃತ್ತಿಯ ಆ್ಯಪ್ ಬಿಡುಗಡೆ ಮಾಡಿದೆ. ಇದನ್ನ ನಿಹಾರ್ ತಕ್ಕರ್ ಎಂಬುವವರು, ಆ್ಯಂಡ್ರೈಡ್ ಪ್ಲಾಟ್ ಫಾರ್ಮಾನಲ್ಲಿ ಅಭಿವೃದ್ಧಿ ಮಾಡಿದ್ದಾರೆ.
ಅಂದಹಾಗೇ, ಈ ಹೊಸ ಆ್ಯಪ್ ನಿಂದ ಸಾರ್ವಜನಿಕರು ಬಸ್ ಆಗಮನ, ಹೊರಡುವ ಅಂದಾಜು ಸಮಯವನ್ನ ತಿಳಿಯಬಹುದಾಗಿದೆ. ಪ್ರಯಾಣಿಕರು ತಮ್ಮ ಗಮ್ಯ ಸ್ಥಾನದಿಂದ ಪ್ರಯಾಣಿಸಲು ಆಪ್ ಅನುಕೂಲವಾಗಲಿದೆ. ಆ್ಯಪ್ ನಲ್ಲಿ ಹತ್ತಿರದ ಬಸ್ ನಿಲ್ದಾಣ, ನಿಲುಗಡೆ ಎಲ್ಲಿ, ಬಸ್ ಸಂಚರಿಸುವ ವಾಹನಗಳ ಮಾಹಿತಿ ಪಡೆಯಬಹುದು. ಮಾರ್ಗ ಸಂಖ್ಯೆ ಆಧಾರಿತ ಬಸ್ ಗಳ ಹುಡುಕುವಿಕೆ, ನೆಚ್ಚಿನ ಆಯ್ಕೆ ಹೀಗೆ ಹಲವು ಸೌಲಭ್ಯಗಳನ್ನು ಪ್ರಯಾಣಿಕರು ಪಡೆಯಬಹುದಾಗಿದೆ.
ಅಂದಹಾಗೇ, MY BMTC APP ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಈ ಹೊಸ ಆಪ್ ಅನ್ನು ಡೌನ್ ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಂಡು ಉಪಯೋಗಿಸಬಹುದು. ಒಟ್ಟಿನಲ್ಲಿ ಕೈಯಲ್ಲಿ ಮೊಬೈಲ್ವೊಂದು ಇದ್ದರೆ ಸಾಕು, ಬಿಎಂಟಿಸಿಯ ಆಗು- ಹೋಗುಗಳನ್ನ ತಿಳಿಯಬಹುದು.