ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎನ್ನುವ ಹಣೆಪಟ್ಟಿ ಹೊತ್ತಿರುವ ಕೇರಳ ನಿಧಾನಕ್ಕೆ ಡೇಂಜರ್ ಸ್ಥಿತಿಯತ್ತ ಜಾರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ಮಾಡಿದ್ದಾರೆ.
ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ತಿರುವನಂತಪುರಂನಲ್ಲಿ ಹೊಸ ಪ್ರಕರಣ ಕಾಣಿಸಿಕೊಂಡಿವೆ. ಬಹುತೇಕ ಇಡೀ ರಾಜ್ಯ ಕೆಂಪು ವಲಯಕ್ಕೆ ಸೇರ್ಪಡೆ ಆಗುತ್ತದೆ ಎಂದು ಬಿ.ಎಲ್ ಸಂತೋಷ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ 20 ಸಾವಿರ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಅಲ್ಲಿನ ಸರ್ಕಾರಿ ನೌಕರರ ವೇತನ ತಡೆ ಹಿಡಿದಿದೆ. ಈ ರೀತಿ ನೌಕರರ ವೇತನ ಹಿಡಿದ ಮೊದಲ ರಾಜ್ಯ ಕೇರಳವಾಗಿದೆ ಎಂದು ಟೀಕಿಸಿದ್ದಾರೆ.
![BL Santosh tweet about Kerala status](https://etvbharatimages.akamaized.net/etvbharat/prod-images/kn-bng-13-bl-santhosh-tweet-about-kerala-issue-script-7208080_30042020233226_3004f_1588269746_376.jpg)
25 ಮಾದರಿಗಳನ್ನು ಮರು ಪರೀಕ್ಷೆ ನಡೆಸಲು ಕಳಿಸಿದ್ದು ಏಕೆ? ಕೇರಳ ವೈದ್ಯಕೀಯ ಪರಿಷತ್ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡು ಸಿಎಂಗೆ ಪತ್ರ ಬರೆದಿಲ್ಲವೇ? ರಾಜ್ಯದ ಹಣಕಾಸು ಸ್ಥಿತಿ ಸರಿಯಲ್ಲ ಎಂದು ಸ್ವತಃ ಹಣಕಾಸು ಸಚುವರು ಹೇಳಿಕೆ ನೀಡಿದ್ದಾರೆ. ಇಂತಹ ಸ್ಥಿತಿಯಲ್ಲಿ 20 ಸಾವಿರ ಕೋಟಿ ಪ್ಯಾಕೇಜ್ ಯಾಕೆ ಘೋಷಣೆ ಮಾಡಬೇಕಿತ್ತು ಎಂದು ಕೇರಳ ರಾಜ್ಯ ಕೋವಿಡ್ ನಿರ್ವಹಣೆ ಲೋಪವೆಸಗುತ್ತಿದೆ ಎಂದಿದ್ದಾರೆ.
ಕರ್ನಾಟಕ 55,504 ಪರೀಕ್ಷೆ ನಡೆಸಿದೆ. ಆದರೆ, ಕೇರಳ 23,980 ಪರೀಕ್ಷೆ ನಡೆಸಿ 2 ಲಕ್ಷ ಪರೀಕ್ಷೆ ನಡೆಸಿರುವುದಾಗಿ ಘೋಷಿಸಿದೆ. ಆದರೆ, ಅಷ್ಟು ಪ್ರಮಾಣದ ಪರೀಕ್ಷೆಗೆ ಬೇಕಾದ ಕಿಟ್ಗಳು ಎಲ್ಲಿವೆ? ರಾಜ್ಯಕ್ಕೆ ವಾಪಸ್ಸಾದ 284 ತಬ್ಲಿಘಿಗಳನ್ನು ಪತ್ತೆಹಚ್ಚಿಲ್ಲ, ಅವರ ಫೋನ್ಗಳು ಆಫ್ ಆಗಿವೆ ಎನ್ನುವ ಕಾರಣ ನೀಡುತ್ತಿದೆ, ಅಲ್ಲದೇ ಗಲ್ಫ್ ದೇಶಗಳಿಂದ ವಾಪಸ್ಸಾಗಲು 3.5 ಲಕ್ಷ ಜನ ಹೆಸರು ನೋಂದಣಿ ಮಾಡಿಸಿದ್ದಾರೆ ಎಂದು ಬಿ.ಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ.