ಬೆಂಗಳೂರು: ರಾಷ್ಟ್ರದ ನೈಜ ಇತಿಹಾಸದ ಬದಲು ಮೊಘಲರ ಇತಿಹಾಸವನ್ನು ನೀವು ಓದಿರುವುದರಿಂದ ಈ ದೋಷವುಂಟಾಗಿದೆ. ಸೀತಾಮಾತೆಗೆ ಅವಮಾನ ಮಾಡಿದ ನೀವು ದೇಶದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಬಿಜೆಪಿ ಆಗ್ರಹಿಸಿದೆ.
ರಾಮಾಯಣವು ತ್ರೇತಾಯುಗದಲ್ಲಿ ನಡೆದಿದ್ದು, ಮಹಾಭಾರತವು ದ್ವಾಪರಯುಗದಲ್ಲಿ, ಈಗ ಬಿಜೆಪಿಯ ಕಮಲವು ಎಲ್ಲೆಡೆ ಅರಳುತ್ತಿದೆ. ಕಾಂಗ್ರೆಸ್ ಈಗ ಕೊನೆಗಾಲದಲ್ಲಿದೆ. 2007 ರಲ್ಲಿ ಆಗಿನ ಯುಪಿಎ ಸರ್ಕಾರ ರಾಮ ಇರುವ ಬಗ್ಗೆ ದಾಖಲೆ ಇಲ್ಲ ಎಂದ ಕಾಂಗ್ರೆಸ್ ರಕ್ತ ನಿಮ್ಮಲ್ಲಿರುವುದು. ಹಾಗಾಗಿ ನಿಮಗೆ ಸೀತಾಮಾತೆಯ ಬಗ್ಗೆ ಗೌರವ ಇಲ್ಲ. ಇದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಸುರ್ಜೇವಾಲಾ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.
ಪಠ್ಯ ಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ. ರಾಮಾಯಣ ಹಾಗೂ ಮಹಾಭಾರತ ಓದಬೇಕಿರುವ ಮಕ್ಕಳಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರನ್ನು ವೈಭವೀಕರಿಸಿದರೆ ಆಗೋದು ಹೀಗೆ. ಏನಂತೀರಿ, ಸಿದ್ದರಾಮಯ್ಯ ಅವರೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 11,315 ಗುಂಡಿಗಳನ್ನು ಮುಚ್ಚಲಾಗಿದೆ: ರಾಮಪ್ರಸಾದ್ ಮನೋಹರ್