ETV Bharat / state

ಶೇ. 80ರಷ್ಟು ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ: ಕಟೀಲ್​ ವಿಶ್ವಾಸ - Gram panchayats election

ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ. ಇದೀಗ ಪಂಚರತ್ನ, ಪಂಚಸೂತ್ರ ವಿಧಾನ ತಂದಿದ್ದೇವೆ. ರಾಜ್ಯದಲ್ಲಿ ಆರು ತಂಡ ಮಾಡಿಕೊಳ್ಳುತ್ತೇವೆ. ಗ್ರಾಮ ಸ್ವರಾಜ್ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮ ಮಾಡುತ್ತೇವೆ. ರಾಜ್ಯದ ನಗರ ಬಿಟ್ಟು ಎಲ್ಲಾ ಕಡೆ ಸಮಾವೇಶ ನಡೆಸುತ್ತೇವೆ. ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : Nov 23, 2020, 4:04 PM IST

Updated : Nov 23, 2020, 8:21 PM IST

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಪಂಚತಂತ್ರ, ಪಂಚಸೂತ್ರ ಎನ್ನುವ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಶೇ. 80ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ. ಕಳೆದ ಬಾರಿ ಪೇಜ್ ಪ್ರಮುಖ ತಂದಿದ್ದೆವು, ಅದು ಯಶಸ್ವಿಯಾಗಿತ್ತು. ಇದೀಗ ಪಂಚರತ್ನ, ಪಂಚಸೂತ್ರ ವಿಧಾನ ತಂದಿದ್ದೇವೆ. ಒಂದೊಂದು ಸಮುದಾಯ ಗುರಿಯಾಗಿಟ್ಟುಕೊಂಡು ಇದನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಆರು ತಂಡ ಮಾಡಿಕೊಳ್ಳುತ್ತೇವೆ. ಗ್ರಾಮ ಸ್ವರಾಜ್ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮ ಮಾಡುತ್ತೇವೆ. ರಾಜ್ಯದ ನಗರ ಬಿಟ್ಟು ಎಲ್ಲಾ ಕಡೆ ಸಮಾವೇಶ ನಡೆಸುತ್ತೇವೆ. ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.

ನವೆಂಬರ್ 29ರಂದು ಸಮಾವೇಶ ನಡೆಯಲಿದೆ. ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಂದು ಸಮಾವೇಶ ನಡೆಯುತ್ತದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇದನ್ನು ಮುನ್ನಡೆಸುತ್ತಾರೆ. ನನ್ನೊಂದಿಗೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ನೇತೃತ್ವದ ಆರು ತಂಡಗಳು ಕಾರ್ಯನಿರ್ವಹಣೆ ಮಾಡಲಿದ್ದು, ಈ ತಂಡಗಳಲ್ಲಿ ಸಂಸದರು, ಸಚಿವರು, ಶಾಸಕರು ಇರಲಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪ್ರಧಾನಿಯವರು ಹೆಚ್ಚಿನ ನೆರವು ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿಗೆ ನೆರವು ಕೊಟ್ಟಿದ್ದಾರೆ. ಪ್ರವಾಹಕ್ಕೆ ಹೆಚ್ಚಿನ ನೆರವು ಸಿಕ್ಕಿದೆ. ಗ್ರಾಪಂ ಚುನಾವಣೆಗಳು ಬಂದಿವೆ, ಇಲ್ಲಿ ಪಕ್ಷದ ಸಿಂಬಲ್ ಇಲ್ಲದಿರಬಹುದು. ಆದರೆ ಚುನಾವಣೆಯಲ್ಲಿ ಪಕ್ಷದ ಬೆಂಬಲವೂ ಇರುತ್ತದೆ. 5810 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಗ್ರಾಮೀಣ ಜನರ ಮನಸ್ಸನ್ನು ಗೆದ್ದವರಿಗೆ ಟಿಕೆಟ್ ನೀಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಅಂತವರಿಗೆ ಅವಕಾಶ ನೀಡಲಾಗುತ್ತದೆ. ಈ ಚುನಾವಣೆ ಮುಂದಿನ ಚುನಾವಣೆಗೆ ಬೇಸ್ ಆಗಲಿದೆ ಎಂದರು.

ಕೋರ್ ಕಮಿಟಿಯಲ್ಲಿ ನಿರ್ಧಾರ:

ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿದ್ದೇವೆ. ಅಲ್ಲಿ ಕೆಲವರಿಗೆ ಈಗಾಗಲೇ ಜವಾಬ್ದಾರಿ ನೀಡಿದ್ದೇವೆ. ಒಂದೊಂದು ಕ್ಷೇತ್ರದಲ್ಲಿ ಐದಾರು ಜನ ಆಕಾಂಕ್ಷಿಗಳಿದ್ದಾರೆ. ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ವಿಚಾರದ ಬಗ್ಗೆ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ, ನಂತರ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಪವರ್ ಸೆಂಟರ್ ಇಲ್ಲ:

ರಮೇಶ್ ಜಾರಕಿಹೊಳಿ ಸಚಿವರು. ಹಾಗಾಗಿ ದೆಹಲಿಗೆ ಹೋಗಿದ್ದಾರೆ. ಇಲಾಖೆಗೆ ಸಂಬಂಧಿಸಿದಂತೆ ಅಲ್ಲಿಗೆ ಹೋಗುತ್ತಾರೆ. ದೆಹಲಿಗೆ ಹೋದ ಮೇಲೆ ಹಿರಿಯರನ್ನು ಮಾತನಾಡಿಸಿದ್ದಾರೆ. ಹಿರಿಯರನ್ನು ಮಾತನಾಡಿಸೋದು ತಪ್ಪಾ? ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆದಿಲ್ಲ. ನಮ್ಮಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ. ರಮೇಶ್ ಜಾರಕಿಹೊಳಿ ಸಚಿವರು. ಹಾಗಾಗಿ ಅವರನ್ನು ಶಾಸಕರು ಭೇಟಿ ಮಾಡುವುದು ಸಹಜ. ಅವರ ನಿವಾಸದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿರುತ್ತಾರೆ. ಹೊರಗೆ ಬಂದಾಗ ನೀವು ಕೇಳುವ ಪ್ರಶ್ನೆಗಳಿಗೆ ಬೇರೆ ವಿಚಾರ ಹೇಳಿರುತ್ತಾರೆ ಎಂದು ಸಮಜಾಯಿಷಿ ನೀಡಿದರು.

Last Updated : Nov 23, 2020, 8:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.