ETV Bharat / state

ಕಾಂಗ್ರೆಸ್ ನಾಯಕರಿಂದ ವಕ್ಫ್ ಜಾಗ ಗುಳುಂ: ಅನ್ವರ್ ಮಾಣಿಪ್ಪಾಡಿ ಆರೋಪ - ವಕ್ಫ್ ಬೋರ್ಡ್

ವಕ್ಫ್ ಬೋರ್ಡ್ ಹಗರಣವನ್ನು ವಿರೋಧಿಸಿ ಕನ್ನಿಂಗ್ ಹ್ಯಾಂ ರಸ್ತೆಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಇಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.

protest
ಪ್ರತಿಭಟನೆ
author img

By

Published : Dec 1, 2020, 7:49 PM IST

ಬೆಂಗಳೂರು: ವಕ್ಫ್ ಬೋರ್ಡ್‌ಗೆ ಸೇರಿದ 2,30,000 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಕಾಂಗ್ರೆಸ್ ನಾಯಕರು ಗುಳುಂ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ರೆಹಮಾನ್ ಖಾನ್, ದಿವಂಗತ ಜಾಫರ್ ಶರೀಫ್, ಸಿ.ಎಂ.ಇಬ್ರಾಹಿಂ ಇದರಲ್ಲಿ ಸೇರಿದ್ದಾರೆ ಎಂದು ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದರು.

ವಕ್ಫ್ ಬೋರ್ಡ್ ಹಗರಣವನ್ನು ವಿರೋಧಿಸಿ ಕನ್ನಿಂಗ್ ಹ್ಯಾಂ ರಸ್ತೆಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಣಿಪ್ಪಾಡಿ, ವಕ್ಫ್ ಆಸ್ತಿಗಳಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಿವೆ. ಇದರ ತೆರವಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಈ ಜಾಗವೆಲ್ಲವೂ ವಕ್ಫ್ ಮಂಡಳಿಗೆ ಸೇರಿದ್ದು, ಎರಡು ನೂರು ವರ್ಷಗಳ ಹಿಂದೆಯೇ ಇದರ ಅತಿಕ್ರಮಣ ಆಗಿದ್ದರೂ 1998ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅದರ ತೆರವು ಅನಿವಾರ್ಯ. ವಕ್ಫ್ ಆಸ್ತಿ ಅತಿಕ್ರಮಣದ ಕುರಿತು 2012 ಮಾರ್ಚ್ 26ರಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಅದನ್ನು ಸರ್ಕಾರವು ಸದನದಲ್ಲಿ ಮಂಡಿಸಲಿಲ್ಲ. ಆದರೆ, ಬಿಜೆಪಿ ಸರ್ಕಾರವು ಸಂಪುಟದಲ್ಲಿ ವರದಿ ಮಂಡಿಸಿ ಆರು ವಿಧೇಯಕಗಳನ್ನು ಜಾರಿಗೊಳಿಸಿದೆ. ಅದು ಮುಸ್ಲಿಂರಿಗೆ ನೀಡಿದ ಪಾರಿತೋಷಕ. ಕೋವಿಡ್ ಕಾರಣಕ್ಕಾಗಿ ವರದಿ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮುಜಾಮಿಲ್ ಅಹ್ಮದ್ ಬಾಬು, ಪ್ರಧಾನ ಕಾರ್ಯದರ್ಶಿಗಳಾದ ಡಾ. ಅನಿಲ್ ಥಾಮಸ್, ಸಯ್ಯದ್ ಸಲಾಂ, ಉಪಾಧ್ಯಕ್ಷ ಶಾಂತಕುಮಾರ್ ಕೆನಡಿ ಮತ್ತಿತರರು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.