ದೊಡ್ಡಬಳ್ಳಾಪುರ: ನಕಲಿ ಕೀ ಬಳಸಿ, ಹ್ಯಾಂಡಲ್ ಮುರಿದು ದೊಡ್ಡಬಳ್ಳಾಪುರ ಸುತ್ತಮುತ್ತ ಬೈಕ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂಪುರದ ಪ್ರವೀಣ್, ಸೈಯದ್ ನಿಜಮ್ ಹಾಗು ದೊಡ್ಡಬಳ್ಳಾಪುರದ ಮಹಮ್ಮದ್ ಪಾಷ ಬಂಧಿತರು.
![Bike thieves arrested](https://etvbharatimages.akamaized.net/etvbharat/prod-images/12466443_thumb.jpg)
ಅಪರಾಧ ಪ್ರಕರಣವೊಂದರ ಹಿನ್ನೆಲೆಯಲ್ಲಿ ಜೈಲಿಗೆ ಹೋದಾಗ ಈ ಮೂವರು ಆರೋಪಿಗಳ ನಡುವೆ ಸ್ನೇಹ ಬೆಳೆದಿದೆ. ಜೈಲಿನಿಂದ ಹೊರ ಬಂದ ನಂತರ ಬೈಕ್ ಕಳ್ಳತನದಲ್ಲಿ ತೊಡಗಿದ್ದರು. ಬೆಂಗಳೂರು ನಗರದ ಯಶವಂತಪುರ ಸೇರಿದಂತೆ ವಿವಿಧ ಪ್ರದೇಶ, ದೊಡ್ಡಬಳ್ಳಾಪುರದ ವಿವಿಧ ರಸ್ತೆಗಳು, ಮನೆಯ ಮುಂದೆ ನಿಲ್ಲಿಸಿದ ಬೈಕ್‌ಗಳನ್ನು ಆರೋಪಿಗಳು ಕಳವು ಮಾಡುತ್ತಿದ್ದರು.
ನಕಲಿ ಕೀ ಬಳಸಿ, ಹ್ಯಾಂಡಲ್ ಮುರಿದು ಕದ್ದ ಬೈಕ್‌ಗಳನ್ನ ಹಿಂದೂಪುರ ಸೇರಿದಂತೆ ಪರಿಚಯಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ಶೋಕಿ ಜೀವನ ನಡೆಸುತ್ತಿದ್ದರು. ಇವರಿಂದ ಪೊಲೀಸರು 16 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.