ETV Bharat / state

ಡ್ರಗ್ಸ್ ದಂಧೆ : Is it offence in India ಎಂದು ಪೊಲೀಸರಿಗೇ ಪ್ರಶ್ನಿಸಿದ ಸೋನಿಯಾ - ಬೆಂಗಳೂರು ಕ್ರೈಂ ನ್ಯೂಸ್

ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದಡಿ ಬಂಧಿತಳಾಗಿರುವ ಮಾಡೆಲ್ ಸೋನಿಯಾ ಅಗರ್ವಾಲ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

ಸೋನಿಯಾ ಅಗರ್ವಾಲ್
ಸೋನಿಯಾ ಅಗರ್ವಾಲ್
author img

By

Published : Sep 2, 2021, 7:08 AM IST

ಬೆಂಗಳೂರು: ಗೋವಿಂದಪುರ ಡ್ರಗ್ಸ್ ದಂಧೆ ಬಯಲು ಪ್ರಕರಣದಲ್ಲಿ ಬಂಧಿತಳಾಗಿರುವ ಮಾಡೆಲ್ ಸೋನಿಯಾ ಅಗರ್ವಾಲ್ ಡ್ರಗ್ ಡೀಲ್ ಕಂಡು ಪೊಲೀಸರೇ ದಂಗಾಗಿದ್ದಾರೆ.

ಖಾಕಿಗೇ ಪ್ರಶ್ನೆ ಮಾಡಿದ ಆರೋಪಿ

ಈಸ್ ಇಟ್ ಅಫೆನ್ಸ್​​​ ಇನ್ ಇಂಡಿಯಾ? ಎಂದು ಪೊಲೀಸರನ್ನೇ ಸೋನಿಯಾ ಕೇಳಿದ್ದಾಳೆ. ಸೋನಿಯಾ, ವಿದೇಶದಲ್ಲಿದ್ದ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದಳಂತೆ. ನಂತರ 2016 ರಲ್ಲಿ ಬೆಂಗಳೂರಿಗೆ ಬಂದ ಮೇಲೆ ಆರು ತಿಂಗಳು ಗಾಂಜಾ ಸೇವನೆ ಬಿಟ್ಟಿದ್ದಳಂತೆ. ಬಳಿಕ ಗೋರಿಪಾಳ್ಯದಲ್ಲಿ ಮಹಿಳೆಯೊಬ್ಬರಿಂದ ತಾನೇ ಗಾಂಜಾ ಖರೀದಿ ಮಾಡಿದ್ದಳಂತೆ.

ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಸೋನಿಯಾ

ಪ್ರತಿ ವೀಕೆಂಡ್‌ನಲ್ಲಿಯೂ ನೈಜೀರಿಯಾ ಡ್ರಗ್ ಪೆಡ್ಲರ್ ಥಾಮಸ್‌ಗೆ ಚಾಟ್ ಮಾಡಿ 5 ರಿಂದ 10 ಗ್ರಾಂ ಕೊಕೇನ್ ತರಿಸಿಕೊಳ್ಳುತ್ತಿದ್ದಳಂತೆ. ಜತೆಗೆ ಐಷಾರಾಮಿ ಹೋಟೆಲ್‌ಗಳಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದಾಳೆ. ಸೇವನೆ ಜತೆಗೆ ಡ್ರಗ್ಸ್ ವ್ಯವಹಾರ ನಡೆಸಿರುವ ಶಂಕೆಯಿದೆ. ಬೇರೆಯವರೊಂದಿಗೆ ಕೊಕೇನ್ ವ್ಯವಹಾರ ಮಾಡಿರುವ ಸಾಧ್ಯತೆಯಿದೆ.

ಡನ್ ಜೊ ಮೂಲಕ ಗಾಂಜಾ ಡೆಲಿವರಿ
ಆರೋಪಿ ದಿಲೀಪ್, ಸೋನಿಯಾಗೆ ಬೇಕಾದ ಗಾಂಜಾವನ್ನು ಡನ್ ಜೊ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದ. ಜೂನ್ ತಿಂಗಳಲ್ಲಿ ಥಾಮಸ್ ಜೊತೆ ಕೊಕೇನ್‌ಗಾಗಿ ಆರೋಪಿ ಚಾಟ್ ಮಾಡಿದ್ದಾಳೆ.

ಸ್ಟಾರ್‌ಗಳ ಲಿಂಕ್ ಕೂಡ ಪತ್ತೆ

ಈ ಹಿಂದೆ ಡ್ರಗ್ ಕೇಸ್ ಆರೋಪಿಯಾಗಿದ್ದ ಕಾರ್ತಿಕ್ ರಾಜುನಿಂದ ಈ ಚಟಕ್ಕೆ ಬಿದ್ದಿರುವುದಾಗಿ ಹೇಳಿಕೆ ನೀಡಿದ್ದಾಳೆ. ಸದ್ಯ ಕಾರ್ತಿಕ್ ರಾಜುಗೂ ನೋಟಿಸ್ ನೀಡಲು ಗೋವಿಂದಪುರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಡ್ರಗ್ ಕೇಸ್‌ನಲ್ಲಿ ಕಾರ್ತಿಕ್ ರಾಜು ವಿಚಾರಣೆ ಎದುರಿಸಿ ಬೇಲ್ ಪಡೆದಿದ್ದ.

ಆರೋಪಿಗಳಾದ ಡಿಜೆ ವಚನ್ ಚಿನ್ನಪ್ಪ ಮತ್ತು ಉದ್ಯಮಿ ಭರತ್‌ನನ್ನು ಪೊಲೀಸರು ನಿತ್ಯ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇವರು ಡ್ರಗ್ಸ್​​​ ಗ್ರಾಹಕರು ಎಂದು ತಿಳಿದು ಬಂದಿದೆ. ಮೆಡಿಕಲ್ ರಿಪೋರ್ಟ್‌ನಲ್ಲಿ ಮಾದಕವಸ್ತು ಸೇವನೆ ಬಗ್ಗೆ ಸಾಬೀತಾಗಿಲ್ಲ. ಮುಂದಿನ ಹಂತದ ವಿಚಾರಣೆಗೆ ಗೋವಿಂದಪುರ ಪೊಲೀಸರು ಸಿದ್ಧರಾಗಿದ್ದಾರೆ.

ಆರೋಪಿಗಳಿಗೆ ಕೂದಲು, ರಕ್ತ ಪರೀಕ್ಷೆ?

ಈ ಹಿಂದೆ ಸ್ಯಾಂಡಲ್‌ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಆರೋಪಿಗಳ ಕೂದಲು, ಮೂತ್ರ ಮತ್ತು ರಕ್ತ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ವಚನ್ ಮತ್ತು ಭರತ್ ಪರೀಕ್ಷೆ ಮಾಡಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.

ಸ್ಫೋಟಕ ಮಾಹಿತಿ ಬೆಳಕಿಗೆ

ಆರೋಪಿ ಥಾಮಸ್​ ವಿಚಾರಣೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಕೇವಲ ಲೋಕಲ್‌ನಲ್ಲಿ ಅಷ್ಟೇ ಅಲ್ಲದೆ ನ್ಯಾಷನಲ್ ಲೆವೆಲ್‌ನಲ್ಲೂ ಡ್ರಗ್ ಡೀಲಿಂಗ್ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಮಾಲಿವುಡ್ ನಿರ್ದೇಶಕನ ಜತೆ ರೆಗ್ಯುಲರ್ ಟಚ್‌ನಲ್ಲಿ ಇರುವುದು ಥಾಮಸ್ ಮೊಬೈಲ್ ರಿಟ್ರಿವ್ ವೇಳೆ ಪತ್ತೆಯಾಗಿದೆ.

ಕೇರಳದ ನಿರ್ದೇಶಕನೊಂದಿಗೂ ಥಾಮಸ್ ನಂಟು

ಕೇರಳದ ಹೆಸರಾಂತ ನಿರ್ದೇಶಕನ ಜತೆ ಥಾಮಸ್​ ಚಾಟ್ ಮಾಡಿದ್ದು, ಸದ್ಯ ಇವರ ವಿಚಾರಣೆ ನಂತರ ಮಾಲಿವುಡ್ ನಿರ್ದೇಶಕನಿಗೂ ನೋಟಿಸ್ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಪೊಲೀಸರು ಕೇಸ್​ ದಾಖಲು ಮಾಡಿಕೊಳ್ಳದೇ ಇರುವುದು ಮಗಳ ಸಾವಿಗೆ ಕಾರಣ... ಪೋಷಕರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.