ಬೆಂಗಳೂರು : ಸಮ್ಮಿಶ್ರ ಸರ್ಕಾರದಲ್ಲಿನ ಅತೃಪ್ತರ ಶಾಸಕರ ಹಿಂದೆ ಬಿಜೆಪಿಗರ ಕೈವಾಡ ಇದೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪ ಮಾಡಿದ್ರು.
ದೇವನಹಳ್ಳಿಯ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಮಾಧ್ಯಮದ ಮೂಲಕವೇ ಏನ್ ಆಗುತ್ತಿದೆ ಅನ್ನೊದು ನಮಗೆ ಗೊತ್ತಾಗುತ್ತಿದೆ. ಪಕ್ಷದಲ್ಲಿ ವೈಯಕ್ತಿಕ ಸಮಸ್ಯೆಗಳಿವೆ, ಅವೆಲ್ಲವನ್ನೂ ನಾಯಕರು ಬಗೆಹರಿಸ್ತಾರೆ ಎಂದರು.
ಬಿಜೆಪಿಗರು ಜೆಡಿಎಸ್ ಶಾಸಕರನ್ನು ಕರೆ ಮಾಡಿ ಸಂಪರ್ಕಿಸುತ್ತಿದ್ದಾರೆ ಅನ್ನೊ ಆರೋಪ ಇರಬಹುದು. ಅದ್ರೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ದೇವೇಗೌಡ್ರು ಪ್ರಸಕ್ತ ವಿದ್ಯಮಾನಗಳ ರಾಜಕೀಯ ಬಿಕ್ಕಟ್ಟುಗಳನ್ನು ಗಮನಿಸಿ ಬೇಸರಗೊಂಡಿದ್ದಾರೆ. ಎಂಟಿಬಿ ನಾಗರಾಜ್ ಕ್ಷೇತ್ರದಲ್ಲಿ ನಾನು ಮತದಾರ, ಮೂರು ಬಾರಿ ಗೆದ್ದಿರುವ ಅವರು ರಾಜೀನಾಮೆ ನೀಡಿರುವುದು ಸರಿಯಲ್ಲ, ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದರು.
ರೆಸಾರ್ಟ್‌ಗೆ ಬರಲು ಅತೃಪ್ತ ಶಾಸಕರೇ ಮೂಲ ಕಾರಣ. ಅವರು ರಾಜೀನಾಮೆ ನೀಡದಿದ್ದರೆ ನಾವು ರೆಸಾರ್ಟ್‌ನಲ್ಲಿ ಉಳಿಯುವ ಪ್ರಶ್ನೆ ಬರುತ್ತಿರಲಿಲ್ಲ. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಕುಮಾರಣ್ಣನ ಮುಖ ನೋಡಿ ಅತೃಪ್ತರು ಸರ್ಕಾರದ ಪರ ವಿಶ್ವಾಸ ವ್ಯಕ್ತಪಡಿಸ್ತಾರೆ ಎಂದರು.