ETV Bharat / state

ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆ : ಕೋವಿಡ್​ ಮಾರ್ಗಸೂಚಿ ಬಿಡುಗಡೆಗೊಳಿಸಿದ ಬಿಬಿಎಂಪಿ - ಬೆಂಗಳೂರು ಇತ್ತೀಚಿನ ಸುದ್ದಿ

ಹೊಸ ವರ್ಷಾಚರಣೆ ಹಾಗೂ ಕ್ರಿಸ್​ಮಸ್ ಆಚರಣೆ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಬಿಎಂಪಿ ಬಿಡುಗಡೆಗೊಳಿದ್ದು, ವಿಶೇಷ ಆಯೋಜನೆಗಳನ್ನು ನಿಷೇಧಿಸಲಾಗಿದೆ.

ಬಿಬಿಎಂಪಿ
ಬಿಬಿಎಂಪಿ
author img

By

Published : Dec 24, 2020, 7:39 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್​ಮಸ್ ಆಚರಣೆ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಬಿಎಂಪಿ ಬಿಡುಗಡೆಗೊಳಿಸಿದೆ. ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್​ಗಳಲ್ಲಿ ನಿಯಮಿತ ಚಟುವಟಿಕೆಗಳನ್ನು ಕೋವಿಡ್ ಮಾರ್ಗಸೂಚಿಯಂತೆ ಮುಂದುವರಿಸಬಹುದಾಗಿದೆ. ಆದರೆ ವಿಶೇಷ ಆಯೋಜನೆಗಳನ್ನು ನಿಷೇಧಿಸಲಾಗಿದೆ.

ನಿಷೇಧಗಳು ಹಾಗೂ ಮಾರ್ಗಸೂಚಿಗಳು:

  • ಸಾಮೂಹಿಕ ಊಟ, ಪಾರ್ಟಿ, ಬೃಹತ್ ಸಮಾರಂಭಗಳ ಆಯೋಜನೆಯನ್ನು ನಿಷೇಧ
  • ಚರ್ಚ್, ದೇವಸ್ಥಾನ, ಮಸೀದಿ ಹಾಗೂ ಇತರ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರದಂತೆ ಕಟ್ಟುನಿಟ್ಟಾಗಿ ಕ್ರಮ
  • ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನ ನಿಷೇಧ
  • 30-12 -2020 ರಿಂದ 2-01-21ರವರೆಗೆ ರೆಸ್ಟೋರೆಂಟ್ ಹಾಗೂ ವಿಶೇಷ ಕಾರ್ಯಕ್ರಮ, ಡಿಜೆ, ಡ್ಯಾನ್ಸ್ ಕಾರ್ಯಕ್ರಮ ಇತ್ಯಾದಿ ನಿಷೇಧ
  • ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಿಕೆಯನ್ನು ನಿಷೇಧಿಸಿದೆ. ಆದರೆ ಈ ಸ್ಥಳಗಳಲ್ಲಿ ಪ್ರತಿನಿತ್ಯ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ.
  • ಕೆಲ ಸ್ಥಳಗಳಿಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ನಿರ್ಬಂಧಗಳನ್ನು ವಿಧಿಸಬಹುದು
  • 65 ವರ್ಷ ಮೇಲ್ಪಟ್ಟ ಹಿರಿಯರು, 10ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು
  • ಹೋಟೆಲ್, ಮಾಲ್, ಪಬ್ ರೆಸ್ಟೋರೆಂಟ್​ಗಳು ಹಾಗೂ ಅಂತಹ ಸ್ಥಳಗಳಲ್ಲಿ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರದಿಂದ ಜನರು ಸೇರಲು ಜಾಗೃತೆ ವಹಿಸುವುದು
  • ಹಸಿರು ಪಟಾಕಿಗಳನ್ನು ಮಾತ್ರ ಬಳಸತಕ್ಕದ್ದು
  • ಕಾನೂನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು
  • ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಸಮಾನಂತರ ರಸ್ತೆಗಳು, ಕೋರಮಂಗಲ, ಇಂದಿರಾನಗರ, ವೈಟ್ ಫೀಲ್ಡ್ ಮುಂತಾದ ಸುತ್ತಮುತ್ತಲಿನ ಸ್ಥಳಗಳಲ್ಲಿ ಆಚರಣೆಗೆ ನಿಷೇಧ
  • ಆದರೂ ಹೋಟೆಲ್ ಪಬ್ ರೆಸ್ಟೋರೆಂಟ್ ಕ್ಲಬ್​ಗಳು ಇತರ ರೀತಿಯ ಸಂಸ್ಥೆಗಳಲ್ಲಿ ನಿಯಮಿತ ಚಟುವಟಿಕೆಗಳು ವ್ಯವಹಾರಗಳನ್ನು ಮುಂದುವರಿಸಬಹುದಾಗಿದೆ. ಆದರೆ ಅನುಮತಿಸಲಾದ ಘಟನೆಗಳು, ಚಟುವಟಿಕೆಗಳನ್ನು ಈ ಕೆಳಗಿನ ಮಾರ್ಗಸೂಚಿಗೆ ಬದ್ಧವಾಗಿರಲು ಸೂಚಿಸಲಾಗಿದೆ: ಕಾರ್ಯಕ್ರಮ ನಡೆಯುವ ಸ್ಥಳದ ಗಡಿಗಳನ್ನು ಗುರುತಿಸಿ ಟೆಂಪರೇಚರ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ನೈರ್ಮಲೀಕರಣ ನಡೆಸಬೇಕು. ಸಂಜೆ ಮತ್ತು ನಂತರದ ಸಮಯದಲ್ಲಿ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗದಂತೆ ಜನಸಂದಣಿಯನ್ನು ನಿಯಂತ್ರಿಸಲು ಹಾಗೂ ಸಾಮಾಜಿಕ ಅಂತರ, ನೈರ್ಮಲ್ಯೀಕರಣವನ್ನು ಖಚಿತಪಡಿಸಿಕೊಳ್ಳಲು ಸೂಚನೆ, ಪ್ರವೇಶ ದ್ವಾರಗಳಲ್ಲಿ ವಾಹನ ನಿಲುಗಡೆ ಹಾಗೂ ಇತರ ಮುಖ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ, ಹೋಟೆಲ್ ರೆಸ್ಟೋರೆಂಟ್ ಪಬ್ ಬಾರ್​ಗಳಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.