ಬೆಂಗಳೂರು: ಸಿಲಿಕಾನ್ ಸಿಟಿ ಮೊದಲೇ ಟ್ರಾಫಿಕ್ ಸಿಟಿ. ವೈಟ್ ಟಾಪಿಂಗ್ ಕಾಮಗಾರಿ ಶುರುವಾದರೆ ಸಾಕು ರಸ್ತೆಗಳಲ್ಲಿ ಇನ್ನಷ್ಟು ಟ್ರಾಫಿಕ್ ಕಿರಿಕಿರಿ ಆರಂಭವಾಗುತ್ತದೆ. ಬಿಬಿಎಂಪಿ ಇದೀಗ ನಗರದ ನಾಲ್ಕು ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸವಾರರು ಸ್ವಲ್ಪ ಎಚ್ಚರಿಕೆ ವಹಿಸಬೇಕಿದೆ.
ವೈಟ್ ಟಾಪಿಂಗ್ ಕಾಮಗಾರಿಗೆ ಪೊಲೀಸರಿಂದ ಅನುಮತಿ ಸಿಕ್ಕಿದ್ದು, ಕಾಮಗಾರಿ ನಡೆಯುವ ದಿನಗಳಲ್ಲಿ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಕಳುಹಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಸವಾರರು ಕಾಮಗಾರಿ ನಡೆಯುತ್ತಿರುವ ಮಾರ್ಗ ಬಿಟ್ಟು ಅನ್ಯ ಮಾರ್ಗ ಬಳಸಿ ಸಂಚಾರ ಮಾಡುವ ಅಗತ್ಯ ಇದೆ. ಯಾವ ರಸ್ತೆಯಲ್ಲಿ ಯಾವ ದಿನಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆ ಎಂಬುದರ ವಿವರ ಈ ಕೆಳಗಿನಂತಿದೆ.