ETV Bharat / state

ಡಿಸೆಂಬರ್​ 17ರಂದು ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ; ಬಿರುಸುಗೊಂಡ ಪ್ರಚಾರ - ಆಡಳಿತ ಮಂಡಳಿ ಚುನಾವಣೆ ಮತಯಾಚನೆ

ಡಿಸೆಂಬರ್​ 17ರಂದು ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಅಮೃತ್ ರಾಜ್ ತಂಡ ಬಿರುಸಿನ ಪ್ರಚಾರ ಕೈಗೊಂಡಿದೆ.

BBMP Employees  Cooperative Union Election  Union Election on December 17  ಬಿಬಿಎಂಪಿ ನೌಕರರ ಸಹಕಾರ ಸಂಘ  ಅಧ್ಯಕ್ಷ ಅಮೃತ್ ರಾಜ್ ತಂಡ  ಬಿರುಸಿನ ಪ್ರಚಾರ  ಬಡ್ಡಿ ದರದಲ್ಲಿ ಸಾಲ ಸೌಲಭ್ಯ  ಜಯಮಹಲ್ ಪ್ಯಾಲೇಸ್ ಸಭಾಂಗಣ  ಆಡಳಿತ ಮಂಡಳಿ ಚುನಾವಣೆ ಮತಯಾಚನೆ  ಬಹಿರಂಗ ಪ್ರಚಾರ ಕಾರ್ಯಕ್ರಮ
ಬಿರುಸುಗೊಂಡ ಪ್ರಚಾರ
author img

By ETV Bharat Karnataka Team

Published : Dec 14, 2023, 9:57 AM IST

ಬೆಂಗಳೂರು: ಜಯಮಹಲ್ ಪ್ಯಾಲೇಸ್ ಸಭಾಂಗಣದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದ 2023-2028 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಮತಯಾಚನೆ ಮತ್ತು ಬಹಿರಂಗ ಪ್ರಚಾರ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಎ. ಅಮೃತ್ ರಾಜ್ ಮತ್ತು ಕೆ. ಜಿ. ರವಿ ನೇತೃತ್ವದ ತಂಡದಲ್ಲಿ ಸಿ.ಎಂ. ಮುನಿರಾಜು, ಎಂ ಮಹೇಶ್ ಮತ್ತು ಎಲ್.ಆರ್ ಮಂಜುನಾಥ್ ಹಾಗೂ ಎನ್ ಹರೀಶ್ ಕುಮಾರ್, ವಿನಯಕುಮಾರ್ 7 ಸಾಮಾನ್ಯ ವರ್ಗದಲ್ಲಿ ಹಾಗೂ ಕೆ.ಎನ್. ಗಂಗಾಧರ್ (ಲಾಲಿ) ಒಂದು ಪರಿಶಿಷ್ಟ ಜಾತಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಇದೇ ಭಾನುವಾರ 17ನೇ ತಾರೀಖು ಬಿಬಿಎಂಪಿ ಕೇಂದ್ರ ಕಚೇರಿ ಡಾ. ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಮತದಾನ ಜರುಗಲಿದ್ದು, ನೌಕರರ ಸಹಕಾರ ಸಂಘದಲ್ಲಿ 2600ಕ್ಕೂ ಮತದಾರರು ಇದ್ದಾರೆ. ಈ ಕುರಿತು ಎ. ಅಮೃತ್ ರಾಜ್ ಮಾತನಾಡಿ, 1914ರಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘ ಸ್ಥಾಪನೆಯಾಯಿತು. 111ವರ್ಷಗಳ ಇತಿಹಾಸವಿದೆ. ಕಳೆದ ಐದು ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಐದು ವರ್ಷದ ಆಡಳಿತ ತೃಪ್ತಿ ಇದೆ ಎಂದಿದ್ದಾರೆ.

BBMP Employees  Cooperative Union Election  Union Election on December 17  ಬಿಬಿಎಂಪಿ ನೌಕರರ ಸಹಕಾರ ಸಂಘ  ಅಧ್ಯಕ್ಷ ಅಮೃತ್ ರಾಜ್ ತಂಡ  ಬಿರುಸಿನ ಪ್ರಚಾರ  ಬಡ್ಡಿ ದರದಲ್ಲಿ ಸಾಲ ಸೌಲಭ್ಯ  ಜಯಮಹಲ್ ಪ್ಯಾಲೇಸ್ ಸಭಾಂಗಣ  ಆಡಳಿತ ಮಂಡಳಿ ಚುನಾವಣೆ ಮತಯಾಚನೆ  ಬಹಿರಂಗ ಪ್ರಚಾರ ಕಾರ್ಯಕ್ರಮ
ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ

ಸದಸ್ಯರಿಗೆ ಶೇಕಡ 13ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆಡಳಿತ ನಿರ್ವಹಣೆ ವೆಚ್ಚ ಕಡಿಮೆ ಮಾಡಿ, ಸಂಘ ಲಾಭದತ್ತ ಸಾಗಿದೆ. ಸದಸ್ಯರಿಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲ ನೀಡಲಾಗುತ್ತಿದೆ. 2 ಲಕ್ಷದಿಂದ 5ಲಕ್ಷವರೆಗೆ ಸಾಲ ಸೌಲಭ್ಯವಿದೆ. ಸಾಲ ಪಡೆಯಲು ಅರ್ಜಿ ಸಲ್ಲಿಸಿದ ಸದಸ್ಯರಿಗೆ ತಕ್ಷಣ ಸಾಲ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.

ಸಹಕಾರ ಸಂಘದ ವತಿಯಿಂದ ಮೃತ ಪಟ್ಟ ವ್ಯಕ್ತಿಗಳ ಶವಸಂಸ್ಕಾರಕ್ಕೆ ಎರಡು ವಾಹನಗಳನ್ನು ಉಚಿತವಾಗಿ ನೀಡಲಾಗಿದೆ. ಸದಸ್ಯರ ಕುಟುಂಬದ ಶುಭಾ ಕಾರ್ಯಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಿ ರಿಯಾಯಿತಿ ದರದಲ್ಲಿ ಕೊಡವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಮ್ಮ ತಂಡದಲ್ಲಿ 5 ಸದಸ್ಯರು ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 7 ಸಾಮಾನ್ಯ ವರ್ಗ ಮತ್ತು 1 ಪರಿಶಿಷ್ಟ ಪಂಗಡ ಸ್ಥಾನಗಳಿಗೆ ಚುನಾವಣೆ ಇದೇ ಭಾನುವಾರ ನಡೆಯಲಿದೆ ಎಂದು ತಿಳಿಸಿದರು.

ಬಿಬಿಎಂಪಿ ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಮೇಲಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು. ಸಂಘಟನೆ ಮೂಲಕ ಸಹಕಾರ ತತ್ವದ ಮೇಲೆ ಅಧಿಕಾರಿ, ನೌಕರರ ಶ್ರೇಯೋಭಿವೃದ್ಧಿ ಮುಖ್ಯ ಎಂದು ಹೇಳಿದರು.

ಚುನಾವಣಾ ಉಸ್ತುವಾರಿಗಳಾಗಿ ಸಾಯಿಶಂಕರ್, ಎ.ಜಿ. ಬಾಬಣ್ಣ, ಮತ್ತು ಎಸ್.ಜಿ. ಸುರೇಶ್, ರುದ್ರೇಶ್, ಸಂತೋಷ್ ಕುಮಾರ್, ನಾಯ್ಕ್, ಮಂಜುನಾಥ್, ಹೆಚ್.ಬಿ.ಹರೀಶ್, ನರಸಿಂಹ, ರೇಣುಕಾಂಬ, ಸೋಮಶೇಖರ್ ಶ್ರೀಧರ್ ಇದ್ದಾರೆ.

ಓದಿ: ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ; ಐವರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.