ಬೆಂಗಳೂರು: ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಡಿಸಿಪಿ ನಿಶಾ ಪಂತ್, ಕಮಿಷನರ್ ಕಚೇರಿ ಶೌಚಲಯದಿಂದ ಹಿಡಿದು ಸಂಪೂರ್ಣವಾಗಿ ಶೋಧ ನಡೆಸಿದ್ದಾರೆ.
ಈ ವೇಳೆ ಸಿಬ್ಬಂದಿಗೆ ಯಾಕ್ರೀ ಮಾಸ್ಕ್ ಹಾಕಿಲ್ಲ. ಕೊರೊನಾ ವೈರಸ್ ಹೆಚ್ಚಾಗ್ತಿದೆ, ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಕೊಳ್ಳಿ ಎಂದು ಗರಂ ಆದ್ರು. ಯಾವುದೇ ಕಾರಣಕ್ಕೂ ಶೌಚಾಲಯಗಳನ್ನು ಲಾಕ್ ಮಾಡುವಂತಿಲ್ಲ. ಶೌಚಾಲಯಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಹಾಗೂ ಕೂಡಲೇ ಕಮಿಷನರ್ ಕಚೇರಿಯಲ್ಲಿ ಸ್ಯಾನಿಟೈಸರ್ ಹಾಗೂ ಕೈಗಳಿಗೆ ಹ್ಯಾಂಡ್ ಗ್ಲೌಸ್ ಹಾಕಿ ಕೊಳ್ಳುವಂತೆ ತಿಳಿಸಿದರು.
ಕೊರೊನಾ ಶಂಕಿತರು ಎಸ್ಕೇಪ್ ಆಗುವ ಬದಲು, ತಮ್ಮ ಜವಾಬ್ದಾರಿ ಅರ್ಥೈಸಿಕೊಳ್ಳಬೇಕು. ಹಾಗೂ ನಿಷ್ಕಾಳಜಿ ತೋರುವವರ ವಿರುದ್ಧ KP Act 31(L) ಅಡಿಯಲ್ಲಿ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.
ಇನ್ನು ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿಯಾಗಿ ಡಿಸಿಪಿ ಇಶಾ ಪಂತ್ ಅವರನ್ನು ನಿಯೋಜನೆ ಮಾಡಲಾಗಿದ್ದು, ಕೊರೊನಾ ಕುರಿತಂತೆ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.