ಆನೇಕಲ್: ಉದ್ಯೋಗ ಅರಸಿ ದೂರದ ರಾಜ್ಯಗಳಿಂದ ಬೆಂಗಳೂರು ಸುತ್ತ ಬೀಡು ಬಿಡುತ್ತಿರುವ ವಲಸಿಗರು ಹಾಗು ಕೈಮೀರಿ ಬೆಳೆಯುತ್ತಿರುವ ಜಿಗಣಿ ಕೈಗಾರಿಕಾ ಪ್ರದೇಶ ಸದಾ ಜನದಟ್ಟಣೆಯಿಂದ ಕೂಡಿದ್ದು ವಾಹನ ಸಂಚಾರದಲ್ಲಿ ಹೆಚ್ಚಳವಾಗುತ್ತಿದೆ.
ಈ ಕುರಿತಾಗಿ ಕೆಲ ತಿಂಗಳ ಹಿಂದಷ್ಟೇ ಜಿಗಣಿ ಪೊಲೀಸ್ ಠಾಣೆಗೆ ಬಂದ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಿದ್ದತೆ ನಡೆಸಿದ್ದಾರೆ. ಇದರಿಂದಾಗಿ ಜಿಗಣಿಯ ಎಪಿಸಿ ವೃತ್ತದಿಂದ ಹಳೆ ಬಸ್ ನಿಲ್ದಾಣ ಬಳಸಿ ಹೊರಹೋಗಲು ಏಕ ಮುಖ ರಸ್ತೆಯನ್ನಾಗಿಸಲು ಯೋಜನೆ ರೂಪಿಸಿದ್ದಾರೆ. ದ್ವಿಚಕ್ರ ವಾಹನಗಳು, ಕಾರುಗಳು ಮಾತ್ರ ವಿರುದ್ಧವಾಗಿ ಚಲಿಸಲು ಅವಕಾಶ ನೀಡಿದ್ದು, ಉಳಿದಂತೆ ಬೃಹತ್ ಗಾತ್ರದ ವಾಹನಗಳಿಗೆ ಏಕಮುಖ ರಸ್ತೆಯಾಗಿ ಬಳಸುವಂತೆ ತಿಳಿಸಿದ್ದಾರೆ.
ಜಿಗಣಿ ಪುರಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು ಸಂಬಂದಪಟ್ಟ ಪುರಸಭಾ ಸಧಸ್ಯರು ಸೇರಿದಂತೆ ಅವರ ಸಲಹೆ ಸೂಚನೆಗಳನ್ನು ಪಡೆದು ಮೇಲಾಧಿಕಾರಿಗಳ ಆದೇಶದಂತೆ ಏಕ ಮುಖ ರಸ್ತೆ, ಒಂದೇ ಕಡೆ ವಾಹನ ನಿಲುಗಡೆ, ಕಸಮುಕ್ತ ಜಿಗಣಿಯನ್ನಾಗಿಸಲು ಕೈ ಜೋಡಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.