ETV Bharat / state

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿ ಮೇಲೆ ಹಲ್ಲೆ, ಪತಿ ಸಾವು: ಆರೋಪಿಗಳ ಬಂಧನ - ಕುಟುಂಬದ ಹಿರಿಯರು ರಾಜಿ ಸಂಧಾನ

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಲು ಹೋಗಿದ್ದ ದಂಪತಿ ಮೇಲೆ ಆರೋಪಿಗಳು ಮಚ್ಚಿನಿಂದ ತೀವ್ರವಾಗಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

two accused
ಇಬ್ಬರು ಆರೋಪಿಗಳ ಬಂಧನ
author img

By ETV Bharat Karnataka Team

Published : Nov 3, 2023, 9:57 PM IST

ಬೆಂಗಳೂರು: ಪತ್ನಿ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಓಡಾಡಿಕೊಳ್ಳುತ್ತಿರುವುದನ್ನು ಪ್ರಶ್ನಿಸಲು ಹೋಗಿದ್ದ ದಂಪತಿ ಮೇಲೆ ಆರೋಪಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದು, ಗಲಾಟೆಯಲ್ಲಿ ಪತಿ ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಗಂಗೊಂಡಹಳ್ಳಿ ನಿವಾಸಿ ಮುದಾಸೀರ್ ಖಾನ್​ನನ್ನು ಹತ್ಯೆ ಮಾಡಿದ ಆರೋಪದಡಿ ಇಬ್ಬರು ಅಣ್ಣ ತಮ್ಮಂದಿರಾದ ವಾಹಿದ್ ಅಹ್ಮದ್ ಹಾಗೂ ಮತೀನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮುದಾಸೀರ್ ಖಾನ್ ಹಾಗೂ ಆಯೇಷಬಾನು ದಂಪತಿಗೆ 13 ವರ್ಷಗಳ ಹಿಂದೆ ಮದುವೆಯಾಗಿತ್ತು. ನಾಲ್ಕು ಮಕ್ಕಳಿದ್ದಾರೆ. ಆರೋಪಿ ವಾಹಿದ್ ಹಾಗೂ ಮತಿನ್ ಎಂಬುವರು ಮುದಾಸೀರ್ ಸಂಬಂಧಿಗಳಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ನಾಲ್ಕು ತಿಂಗಳ ಹಿಂದೆ ಗಲಾಟೆಯಾಗಿತ್ತು. ಕುಟುಂಬದ ಹಿರಿಯರು ರಾಜಿ ಸಂಧಾನ ಮಾಡಿದ್ದರು.

ಈ ಮಧ್ಯೆ ಮತ್ತೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ. ನಿನ್ನೆ ಸಂಜೆ 7.30ರ ಸುಮಾರಿಗೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಆರೋಪಿಗಳು ಮುದಾಸೀರ್ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಕೆಲ ಸಮಯದ ಬಳಿಕ ತೀವ್ರ ಗಾಯಗೊಂಡಿದ್ದ ಮುದಾಸೀರ್ ಮೃತಪಟ್ಟಿದ್ದಾರೆ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಹಾಗೂ ಗಂಡನ ಸಾವಿನ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಹಿದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ ಸಹೋದರ ಮತಿನ್ ಕೆಂಗೇರಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕೆಲ ತಿಂಗಳ ಹಿಂದೆ ಮೃತನ ಪತ್ನಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ. ಈ ಬಗ್ಗೆ ತಿಳಿದಿದ್ದ ಮುದಾಸೀರ್ ಈತನ ಜೊತೆಗೆ ಗಲಾಟೆ ಮಾಡಿಕೊಂಡಿದ್ದನು. ಕೊನೆಗೆ ರಾಜಿ ಸಂಧಾನ ಮಾಡಲಾಗಿತ್ತು.

ಇತ್ತೀಚೆಗೆ ಆರೋಪಿ ವಾಹಿದ್​​​ನನ್ನು ಮಹಿಳೆ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಓಡಾಡುತ್ತಿದ್ದನು. ಇದನ್ನು ಮತ್ತೆ ಪ್ರಶ್ನಿಸಲು ಹೋಗಿದ್ದ ದಂಪತಿ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಪತ್ನಿ ಆಯೇಷ ಬಾನು ಗಾಯಗೊಂಡರೆ ಮುದಾಸೀರ್ ಮೃತಪಟ್ಟಿದ್ದಾರೆ.

ವಿವಾಹಿತ ಯುವಕನೊಬ್ಬ ಆತ್ಮಹತ್ಯೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.‌ ನಿಖಿಲ್ ಕುಂದಗೋಳ (28) ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ. ಮೃತ ನಿಖಿಲ್​ ಪ್ರೀತಿ ಎಂಬ ಯುವತಿಯನ್ನು‌ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ.

ಆದರೆ, ಕಳೆದ ಕೆಲ‌ ತಿಂಗಳಿಂದ ಪತಿ ಹಾಗೂ ಪತ್ನಿಯ ನಡುವೆ ವಿರಸ ಮೂಡಿದ್ದು, ನಿತ್ಯ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಪರಿಣಾಮ ಪತ್ನಿ ಪ್ರೀತಿ ನಿಖಿಲ್ ಕಿರುಕುಳ ನೀಡಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ನಿಖಿಲ್​​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ‌ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಟಾರ್​​​​​​ ತುಂಬಿದ ಟ್ಯಾಂಕರ್​​ಗೆ ಬಸ್​ ಡಿಕ್ಕಿ: ​​​​​​​​​7 ಮಂದಿಗೆ ಸುಟ್ಟ ಗಾಯ.. ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.