ETV Bharat / state

ಬಡವರ ಬಂಧು ಯೋಜನೆ ನಿಲ್ಲಿಸಿದರೆ ಹೋರಾಟ: ಬಂಡೆಪ್ಪ ಕಾಶೆಂಪೂರ್ ಎಚ್ಚರಿಕೆ...! - ಬಡವರ ಬಂಧು ಯೋಜನೆ

ಬಡವರ ಬಂಧು ಯೋಜನೆಯನ್ನು ಬಜೆಟ್​ನಲ್ಲಿ ಕೈ ಬಿಟ್ಟರೆ ಹೋರಾಟ ನಡೆಸಲಾಗುತ್ತದೆ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

bandeppa kashempur
ಬಂಡೆಪ್ಪ ಕಾಶೆಂಪೂರ್
author img

By

Published : Mar 2, 2020, 10:40 PM IST

ಬೆಂಗಳೂರು: ಬಡ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆ ಕೋರರಿಂದ ಪಾರು ಮಾಡುವ ಬಡವರ ಬಂಧು ಯೋಜನೆಯನ್ನು ಬಜೆಟ್​ನಲ್ಲಿ ಕೈ ಬಿಟ್ಟರೆ ಹೋರಾಟ ನಡೆಸಲಾಗುತ್ತದೆ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ಎಚ್ಚರಿಕೆ ನೀಡಿದ್ದಾರೆ.

ಬಡವರ ಬಂಧು ಯೋಜನೆ ನಿಲ್ಲಿಸಿದರೆ ಹೋರಾಟ: ಬಂಡೆಪ್ಪ ಕಾಶೆಂಪೂರ್ ಎಚ್ಚರಿಕೆ...!

ವಿಧಾನಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಬಡವರ ಪರವಾಗಿ ಸಾಲಮನ್ನ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ತಂದ ಬಡವರ ಬಂಧು ಕಾರ್ಯಕ್ರಮ ನಡೆಯುತ್ತಿದೆ. ಮೊದಲ ವರ್ಷದಲ್ಲಿ 59 ಸಾವಿರ ಫಲಾನುಭವಿಗಳಿಗೆ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ 4 ಲಕ್ಷ ಫಲನುಭವಿಗಳಿಗೆ ನೀಡುವ ಗುರಿ ಇತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಇದನ್ನ ಸ್ಥಗಿತ ಮಾಡ್ತಾರಾ ಅನೋ ಅನುಮಾನ ಬಂದಿದೆ ಒಂದು ವೇಳೆ ಬಡವರ ಬಂಧು ಕಾರ್ಯಕ್ರಮವನ್ನ ಬಜೆಟ್​ನಲ್ಲಿ ಕೈ ಬಿಟ್ಟರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಾಲಮನ್ನಾ ಬಹುತೇಕ ಆಗಿದೆ. ಇನ್ನು ಸ್ವಲ್ಪ ಸಣ್ಣ ಪುಟ್ಟ ಗೊಂದಲ ಕೆಲವೆಡೆ ಇದೆ. ಅಂತಹ ಕಡೆ ಲೋಪ ಸರಿಪಡಿಸಿ ಅಂತಹ ರೈತರನ್ನು ಸಾಲಮನ್ನಾ ವ್ಯಾಪ್ತಿಗೆ ಅವರನ್ನು ತರಬೇಕು ಎಂದು ಮನವಿ ಮಾಡಿದರು. ಮಹದಾಯಿ ವಿಚಾರದಲ್ಲಿ ಒಳ್ಳೆಯ ತೀರ್ಪು ಬಂದಿದೆ. ಆ ಭಾಗದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಆ ಭಾಗದ ರೈತರಿಗೆ ನಾನು ಶುಭ ಕೋರುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.