ETV Bharat / state

ಶಾಲೆಗಳಲ್ಲಿ ಸುರಕ್ಷತಾ ಸಾಧನಗಳ ಅಳವಡಿಕೆಗೆ‌ ಕ್ರಮ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ - ಶಾಲೆಗಳಲ್ಲಿ ಸುರಕ್ಷತಾ ಸಾದನಗಳ ಅಳವಡಿಕೆ ಕುರಿತು ಬಿ ಸಿ ನಾಗೇಶ್​ ಹೇಳಿಕೆ

ರಾಜ್ಯದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗ್ನಿ ಸುರಕ್ಷತೆಯ ಕುರಿತು ನಡೆದ ಚರ್ಚೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಉತ್ತರಿಸಿದರು.

ಬಿ. ಸಿ ನಾಗೇಶ್
ಬಿ. ಸಿ ನಾಗೇಶ್
author img

By

Published : Mar 24, 2022, 10:48 PM IST

ಬೆಂಗಳೂರು: ಮೂರು ವರ್ಷ ಹಿಂದೆ ಅಗ್ನಿ ಸುರಕ್ಷತೆಯ ವಿಚಾರವಾಗಿ ಬಂದ ಆದೇಶ ಪಾಲನೆ ಅನಿವಾರ್ಯವಾಗಿದೆ. ಸಾಧ್ಯವಾದಷ್ಟು ಶಾಲೆಗಳಲ್ಲಿ ಆದೇಶ ಪಾಲನೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ರಾಜ್ಯದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗ್ನಿ ಸುರಕ್ಷತೆಯ ಕುರಿತು ನಡೆದ ಚರ್ಚೆಗೆ ಅವರು ಉತ್ತರಿಸಿದರು.

ನಾವು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುವಂತಿಲ್ಲ. ಆದಷ್ಟು ಸುಗಮವಾಗಿ ಸಮಸ್ಯೆ ಪರಿಹರಿಸಲು ಯತ್ನಿಸುತ್ತೇವೆ. ಶುಲ್ಕ ನಿಗದಿಗೂ ಚಿಂತನೆ, ಪರಿಶೀಲನೆ ನಡೆಯುತ್ತಿದೆ. ಸೂಕ್ತ ಸುರಕ್ಷತಾ ವಿಧಾನ ಅಳವಡಿಸಿಕೊಳ್ಳಲು ಸೂಚಿಸುತ್ತಿದ್ದೇವೆ. ಈ ಹಿಂದೆ ಕಾನೂನಿನಲ್ಲಿ ಆದ ಕೆಲ ಬದಲಾವಣೆ ಸರಿಪಡಿಸಲು ಯತ್ನ ನಡೆಸಿದ್ದೇವೆ. ಶಿಕ್ಷಣ ಸಂಸ್ಥೆಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳಬಾರದು. ಶಿಕ್ಷಣ ಇಲಾಖೆಯಲ್ಲಿ ಆಗಿರುವ ಸಮಸ್ಯೆ ಇದ್ದರೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದರು.

ಶಾಲೆಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಿ ಈಗ ಬದಲಾವಣೆಗೆ ಮನವಿ ಮಾಡಿದ್ದಾರೆ. ಇದೆಲ್ಲವೂ ಶಿಕ್ಷಣ ಸಂಸ್ಥೆಗಳು ನಡೆದುಕೊಳ್ಳುವ ರೀತಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯರಾದ ಹರೀಶ್ ಕುಮಾರ್ ಪ್ರಸ್ತಾಪಿಸಿದ ವಿಚಾರದ ಮೇಲೆ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಎಸ್. ವಿ ಸಂಕನೂರು, ಅರುಣ್ ಶಹಾಪೂರ್, ಭೋಜೇಗೌಡ ಮತ್ತಿತರ ಸದಸ್ಯರು ಮಾತನಾಡಿದರು.

ಸಹಕಾರಿ ಬ್ಯಾಂಕ್ ಅವ್ಯವಹಾರ: ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮದ ಕುರಿತು ಮಾತನಾಡಿದ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್, ಬ್ಯಾಂಕ್‌ನಲ್ಲಿ ಒಬ್ಬ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಸರ್ಕಾರ ನೇಮಿಸಿ ಪ್ರತಿ ಸದಸ್ಯರಿಗೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ಸಂದೇಶ ನೀಡುವ ಕಾರ್ಯ ಮಾಡಬೇಕು. ಒಬ್ಬ ಸದಸ್ಯರು ಬ್ಯಾಂಕ್​ನಲ್ಲಿ 9 ಕೋಟಿ ರೂ. ಠೇವಣಿ ಇಟ್ಟಿದ್ದರು. ಇವರಿಗೆ ಎರಡು ವರ್ಷ ಬಡ್ಡಿ ಸಹ ಬ್ಯಾಂಕ್ ನೀಡಿದೆ. ಆಮೇಲೆ ಇತ್ತೀಚಿಗೆ ಅವರು ಬ್ಯಾಂಕ್​ಗೆ ಹೋದಾಗ ನಿಮ್ಮದು ನಕಲಿ ಖಾತೆ. ಬಡ್ಡಿಯನ್ನು ವಾಪಸ್ ಕಟ್ಟಬೇಕು ಎಂದಿದ್ದಾರೆ ಎಂದು ಹೇಳಿದರು.

ಸಚಿವ ಎಸ್. ಟಿ ಸೋಮಶೇಖರ್ ಮಾತನಾಡಿ, 2013 ರಲ್ಲಿ ಬ್ಯಾಂಕ್​​ನಲ್ಲಿ ಅವ್ಯವಹಾರ ಆಗಿದೆ ಎಂದು ಮಾಹಿತಿ ಬಂತು. ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ನೇಮಿಸಿದ್ದ ಅಧಿಕಾರಿಯನ್ನು ತೆಗೆದು ಅವರೇ ನೇಮಕ ಮಾಡಿದ್ದಾರೆ. ಒಟ್ಟು 2004 ಕೋಟಿ ದುರ್ಬಳಕೆ ಆಗಿದೆ ಎಂಬ ಮಾಹಿತಿ ಇದೆ. ಅನೇಕ ವಿಚಾರ ಪ್ರಸ್ತಾಪಿಸಿದ್ದಾರೆ. ಕಳೆದ ವಾರ ಒಂದು ಸಭೆ ನಡೆಸಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು ಎಂದು ಹೇಳಿದರು.

ಇದನ್ನೂ ಓದಿ: ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಗಲಾಟೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.