ETV Bharat / state

ಡಿಕೆ ಸಹೋದರರ ಮೇಲಿನ ದಾಳಿ ರಾಜಕೀಯ ಪ್ರೇರಿತ: ವಕೀಲ ಪೊನ್ನಣ್ಣ - CBI raids on DK brothers house

ಒಂದು ಕೇಂದ್ರ ತನಿಖಾ ತಂಡ ಬಂದರೆ ಅದಕ್ಕೆ ಮುಖ್ಯವಾಗಿ ರಾಜ್ಯ ಸರ್ಕಾರ ಅನುಮತಿ ಕೊಡಬೇಕು. ತಡೆಯಾಜ್ಞೆ ವೇಳೆ ಈ ದಾಳಿ ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ನ್ಯಾಯಬದ್ಧ ತನಿಖೆ ನಾವು ಬೇಡ ಅನ್ನಲ್ಲ. ಆದರೆ ಇದು ರಾಜಕೀಯ ಪ್ರೇರಿತ ಎಂದು ವಕೀಲ ಪೊನ್ನಣ್ಣ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ
ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ
author img

By

Published : Oct 5, 2020, 10:56 AM IST

Updated : Oct 5, 2020, 11:51 AM IST

ಬೆಂಗಳೂರು: ಡಿಕೆ ಸಹೋದರರ ನಿವಾಸ ಹಾಗೂ ಇನ್ನಿತರ 14 ಕಡೆ ಸಿಬಿಐ ದಾಳಿ ಕುರಿತು ಡಿಕೆ ಸಹೋದರರ ಪರ ವಕೀಲ ಪೊನ್ನಣ್ಣ, ಸಿಬಿಐ ತನಿಖೆಗೆ ಮೊದಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಆದರೆ ಈ ಬಗ್ಗೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಕೋರ್ಟ್ ಅದೇಶ ಮುಂದುವರೆದಿದೆ. ಈ ನಡುವೆ ಈ ದಾಳಿ ನಡೆಸಿದ್ದು ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ.

ವಕೀಲ ಪೊನ್ನಣ್ಣ ಪ್ರತಿಕ್ರಿಯೆ

ಉಪ ಚುನಾವಣೆಯ ಮೇಲೆ ಪ್ರಭಾವ ಬೀಳುವಂತೆ ಮಾಡಲಾಗುತ್ತಿದೆ. ಇದರ ವಿರುದ್ಧ ಸೂಕ್ತವಾದ ಕಾನೂನು ಹೋರಾಟ ಮಾಡುತ್ತೇವೆ. ರಾಜಕೀಯ ಪ್ರೇರಿತ ವಿಚಾರ ನಂಬಲು ಆಗಲ್ಲ. ಒಂದು ಕೇಂದ್ರ ತನಿಖಾ ತಂಡ ಬಂದರೆ ಅದಕ್ಕೆ ಮುಖ್ಯವಾಗಿ ರಾಜ್ಯ ಸರ್ಕಾರ ಅನುಮತಿ ಕೊಡಬೇಕು. ತಡೆಯಾಜ್ಞೆ ವೇಳೆ ಈ ದಾಳಿ ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ನ್ಯಾಯಬದ್ಧ ತನಿಖೆ ನಾವು ಬೇಡ ಅನ್ನಲ್ಲ. ಆದರೆ ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

ಮಾಹಿತಿ ಪ್ರಕಾರ ಒಂದೇ ಪ್ರಕರಣ ಸಂಬಂಧ ದಾಳಿ ಮಾಡಲಾಗಿದೆ ಎನ್ನಲಾಗಿದೆ. ಆದರೆ ಸಿಬಿಐನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ದಾಖಲಾಗದೆ ದಾಳಿ ಮಾಡಬಾರದು ಅಂತಲ್ಲ. ರಾಜಕೀಯ ಪ್ರೇರಿತವಾಗಿ ದಾಳಿ ಮಾಡಬಾರದು ಎಂದಿದ್ದಾರೆ.

ಸರ್ಕಾರ ಸಿಬಿಐ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ನಾವು ಕೋರ್ಟ್​ಗೆ ಹೋಗಿದ್ದೇವೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೀತಿದೆ. ಆದರೆ ಇಂತಹ ಸಂದರ್ಭದಲ್ಲಿ ಸಿಬಿಐ ದಾಳಿ ಕಾನೂನು ಬಾಹಿರ. ಈಗ ನಮಗೆ ಸಿಬಿಐ‌ ದಾಳಿ ಬಗ್ಗೆ ಮಾಹಿತಿ ‌ಕೊಡುತ್ತಿಲ್ಲ. ಮಾಹಿತಿ ಪಡೆದು ನಾವು ಇವತ್ತೇ ಕೋರ್ಟ್​ಗೆ ಮತ್ತೆ ಅಪೀಲ್ ಹೋಗುತ್ತೇವೆ. ಸಿಬಿಐ ಕಾನೂನು ಬಾಹಿರ ದಾಳಿಯನ್ನು ಕೋರ್ಟ್​ನಲ್ಲಿ ಪ್ರಶ್ನೆ ಮಾಡುತ್ತೇವೆ. ನಾವು ಸಿಬಿಐ ಹಾಗೆ ಕಾನೂನು ಬಾಹಿರವಾಗಿ ಮುಂದುವರೆಯಲ್ಲ. ಏನೇ ಮಾಡಿದರೂ ಕಾನೂನಾತ್ಮಕವಾಗಿ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಸೋಲಾರ್ ಟೆಂಡರ್ ಮತ್ತು ಎನರ್ಜಿ ಕಾಂಟ್ರ್ಯಾಕ್ಟರ್ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

Last Updated : Oct 5, 2020, 11:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.