ಬೆಂಗಳೂರು: ಕಳ್ಳತನವನ್ನೇ ಫುಲ್ ಟೈಮ್ ಜಾಬ್ ಮಾಡಿಕೊಂಡಿದ್ದ ಆರೋಪಿಗಳು ಅಂದರ್ ಆಗಿದ್ದು, ಎರಡು ಪ್ರತ್ಯೇಕ ಪ್ರಕರಣದಲ್ಲಿ 7 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಬ್ಬಾಳಮ್ಮ ದೇವಸ್ಥಾನದ ಬಳಿಯ ಮನೆಯಲ್ಲಿ 2 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಕದ್ದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂದ್ರಹಳ್ಳಿಯ ಭರತ್ (28), ಅರ್ಜುನ್ (29) ರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 7.26 ಲಕ್ಷ ರೂ ಮೌಲ್ಯದ 165 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
![Etv - Bharat.html](https://etvbharatimages.akamaized.net/etvbharat/prod-images/12288121_glodl.jpg)
ಡಿಸಿಪಿ ಸಂದೀಪ್ ಪಾಟೀಲ್ರಿಂದ ಮಾಹಿತಿ
ಜೂನ್ 4 ರಂದು ಬ್ಯಾಡರಹಳ್ಳಿಯ ಕಬ್ಬಾಳಮ್ಮ ದೇಗುಲದ ಬಳಿಯ ಮನೆಯೊಂದರಲ್ಲಿ ಕಳ್ಳತನವಾಗಿದೆ ಎಂದು ದೂರು ದಾಖಲಾಗಿತ್ತು. ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು ಎಂದು ಡಿಸಿಪಿ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಿಡ್ನಾಪ್, ಕಾಡಿನಲ್ಲಿ ಒತ್ತೆಯಾಳು, 3 ತಿಂಗಳು ಗ್ಯಾಂಗ್ ರೇಪ್.. ಅತ್ಯಾಚಾರ ಸಂತ್ರಸ್ತೆಯ ಕಣ್ಣೀರ ಕಥೆ