ETV Bharat / state

ಸಚಿವರ ಉಪಸ್ಥಿತಿಗೆ ಸೂಕ್ತ ಕ್ರಮ ಕೈಗೊಳ್ಳಿ: ಸಭಾನಾಯಕರಿಗೆ ಸಭಾಪತಿ ಸಲಹೆ - Appropriate action for the presence of the Minister in council

ವಸತಿ ಇಲಾಖೆ 3 ಸಾವಿರ ಮನೆ ನಿರ್ಮಿಸುವುದು ಸ್ವಾಗತಾರ್ಹ. ಬೆಂಗಳೂರು ನಗರದ ಮನೆ ವಿತರಣೆಯಲ್ಲಿ ಗೋಲ್​​ಮಾಲ್​ ಆಗುತ್ತಿದೆ ಎಂಬ ಮಾಹಿತಿ ಇದೆ ಎಂದು ಬಿಜೆಪಿ ಸದಸ್ಯ ಮುನಿರಾಜುಗೌಡ ತಿಳಿಸಿದರು.

council
ವಿಧಾನ ಪರಿಷತ್
author img

By

Published : Mar 16, 2022, 10:10 PM IST

ಬೆಂಗಳೂರು: ಕಳೆದ ಎರಡು ವಾರಗಳಲ್ಲಿ 53 ಬಾರಿ ಸಚಿವರು ಕಾಲಾವಕಾಶ ಕೋರಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿಧಾನ ಪರಿಷತ್​ಗೆ ತಿಳಿಸಿದರು.

ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಗಳಿಗೆ ಮಾಹಿತಿ ನೀಡಿದ ಸಭಾ ನಾಯಕ‌ ಕೋಟಾ ಶ್ರೀನಿವಾಸ ಪೂಜಾರಿ, ಸದ್ಯ ಆರು ಮಂದಿ ಸಚಿವರು ಇದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿ ಬಸವರಾಜ್ ಹೊರಟ್ಟಿ, ಇದೇ ಕೆಲಸ ಮೊದಲು ಮಾಡಬೇಕಿತ್ತು. ಸಭಾನಾಯಕರು, ಮುಖ್ಯ ಸಚೇತಕರಿಗೆ ಇದು ಸೂಚನೆ. ಕಡ್ಡಾಯ ಹಾಜರಿ ಇರಬೇಕಾದ ಸಚಿವರು ಇರುವಂತೆ ನೋಡಿಕೊಳ್ಳಿ ಎಂದರು.

ಸಚಿವ ಸಿ. ಸಿ ಪಾಟೀಲ್ ಹಾಗೂ ಉಮೇಶ್ ಕತ್ತಿ ಎದ್ದು ನಿಂತು ವಿಧಾನಸಭೆಯಲ್ಲಿ ತುರ್ತು ಹಾಜರಿ ಇರಬೇಕಾದ ಸಂದರ್ಭ ಇಲ್ಲಿ ಹಾಜರಾಗುವುದು ಕಷ್ಟ ಎಂದರು. ಸಚಿವ ಸಿ. ಸಿ ಪಾಟೀಲರು ಪ್ರಶ್ನೋತ್ತರ ಇರುವ ಸಚಿವರೇ‌ ಕಡ್ಡಾಯ ಹಾಜರಿ ಅಂತ ಮಾಡಿದರೆ ಅನುಕೂಲ ಎಂದರು. ಸಭಾಪತಿ ಅವರು ಈ ಬಗ್ಗೆ ಗಮನ ಹರಿಸುವಂತೆ ಸಭಾನಾಯಕರಿಗೆ ಸೂಚಿಸಿದರು.

ನಾವು ರೈತರಲ್ಲವಾ? ಶರಣಗೌಡ ಬಯ್ಯಾಪೂರ್ ಬಜೆಟ್ ಉದ್ದೇಶಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ನಮ್ಮ ಭಾಗಕ್ಕೆ ನೀರು ಸಾಲುತ್ತಿಲ್ಲ. ನಿರ್ವಹಣೆ ಸರಿಯಾಗಿಲ್ಲ. ಇದಕ್ಕೆ ಕ್ರಮ ಕೈಗೊಳ್ಳಬೇಕು. 50 ಎಕರೆ ಕೃಷಿ ಭೂಮಿ ಇದೆ . 12 ಎಕರೆಯಲ್ಲಿ ಪೇರಲಹಣ್ಣು ಬೆಳೆದಿದ್ದೆ. ಹುಳ ಬಂದು ಹಾಳಾಯಿತು ಎಂದರು.

ಎರಡು ಲಕ್ಷ ರೂ. ಔಷಧ ಸಿಂಪಡಣೆಗೆ ವ್ಯಯಿಸಿದೆ. ಆದರೆ, ಪ್ರಯೋಜನ ಆಗಿಲ್ಲ. ಕಳೆದ ಎರಡು ವರ್ಷ ಕೋವಿಡ್​ನಿಂದ ಮಾರುಕಟ್ಟೆ ಸಿಗಲಿಲ್ಲ. ನಮ್ಮ ಕಷ್ಟ ಕೇಳಿ. 10-20 ಎಕರೆ ಇರುವವರು ರೈತರಲ್ಲವಾ?. ನಮಗೆ ಕಷ್ಟ ಇಲ್ಲವಾ?. ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ನಿವಾರಣೆ ಮಾಡಿ ಎಂದು ಕೋರಿದರು.

ಬಿಜೆಪಿ ಸದಸ್ಯ ಮುನಿರಾಜುಗೌಡ ಮಾತನಾಡಿ, ವಸತಿ ಇಲಾಖೆ 3 ಸಾವಿರ ಮನೆ ನಿರ್ಮಿಸುವುದು ಸ್ವಾಗತಾರ್ಹ. ಬೆಂಗಳೂರು ನಗರದ ಮನೆ ವಿತರಣೆಯಲ್ಲಿ ಗೋಲ್​​ಮಾಲ್​ ಆಗುತ್ತಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಇದರಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಇದೆ. ಇದು ನಿವಾರಣೆ ಆಗಬೇಕು. ಹೆಚ್ಚು ಮನೆಗಳ ನಿರ್ಮಾಣ ಆಗಬೇಕು. ಕೊಳಗೇರಿ ತೆರವುಗೊಳಿಸಿ ಅಲ್ಲಿ ಅಪಾರ್ಟ್​ಮೆಂಟ್​ ಕಟ್ಟಿ ನಿವಾಸಿಗಳ ವಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಗುಡಿ ಕೈಗಾರಿಕೆಗೆ ಒತ್ತು ಕೊಡಬೇಕು. ಯಾತ್ರಿ ನಿವಾಸ ನಿರ್ಮಾಣ ಸ್ವಾಗತಾರ್ಹ. ಪಾದಯಾತ್ರೆ ಮೂಲಕ ದೇವಾಲಯಕ್ಕೆ ತೆರಳುವವರಿಗೆ ರಾತ್ರಿ ತಂಗಲು, ಆಹಾರ ವಿತರಣೆಗೆ ಅವಕಾಶ ಮಾಡಿಕೊಡಬೇಕು. ಅಲ್ಲಲ್ಲಿ ಸಮುದಾಯ ಭವನ ಸ್ಥಾಪಿಸಬೇಕು. ಬೆಂಗಳೂರು ನಗರಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ವೈಜ್ಞಾನಿಕ ಪರಿಶೀಲನೆಗೆ ಅವಕಾಶ ಇಲ್ಲದಿರುವುದು ಬೇಸರ ಎಂದರು.

ಪಾರಂಪರಿಕ ಕಟ್ಟಡ ಕೆಡವಿದ್ದು ಬೇಸರ.. ಕಾವೇರಿ ಜತೆ ಬೇರೆ ನೀರಿನ ಮೂಲ ಇದೆಯಾ ಅಂತ ಹುಡುಕುವ ಕಾರ್ಯ ಮಾಡಬೇಕು. ಬೆಂಗಳೂರಿನ ಪಾರಂಪರಿಕ ಕಟ್ಟಡ ಉಳಿಸುವ ಕಾರ್ಯ ಆಗಬೇಕು. ಬಾದಾಮಿ ಹೌಸ್ ಹಾಗೂ ವಿಕಾಸಸೌಧ ಸ್ಥಳದಲ್ಲಿದ್ದ ಪಾರಂಪರಿಕ ಕಟ್ಟಡ ಕೆಡವಿದ್ದು ಬೇಸರ. ನಮ್ಮ ಸಂಸ್ಕೃತಿಗಳ ಮೂಲಕ ನಿರ್ಮಾಣವಾದ ಕಟ್ಟಡ ಉಳಿಸಿಕೊಳ್ಳುವ ಕಾರ್ಯ ಆಗಬೇಕು ಎಂದು ಧ್ವನಿ ಎತ್ತಿದರು.

ಜೆಡಿಎಸ್ ಸದಸ್ಯ ಬಿ. ಎಂ ಫಾರೂಕ್ ಮಾತನಾಡಿ, ಕರಾವಳಿ ಭಾಗದ ಜನರಿಗೆ ಬಹಳ ನಿರಾಶೆಯಾಗಿದೆ. ಕರಾವಳಿಗೂ, ಬಜೆಟ್​ಗೂ ಸಂಬಂಧ ಇಲ್ಲದಂತಾಗಿದೆ. ಬೃಹತ್ ಕೈಗಾರಿಕೆಗಳು ಮಂಗಳೂರು ಭಾಗದಲ್ಲಿವೆ. ವಾಯು ಹಾಗೂ ಜಲ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ನೈಸರ್ಗಿಕ ವಿಕೋಪ ಹೆಚ್ಚಾಗಿ ಆಗುತ್ತಿದೆ. ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಯನಕ್ಕೆ ಸದನ ಸಮಿತಿ ಮಾಡಬೇಕು.. ದಿಲ್ಲಿ ಮಾದರಿಯಲ್ಲಿ ವಾಯು ಮಾಲಿನ್ಯ ಅಳೆಯುವ ಸಾಧನ ಅಳವಡಿಸಿ. ಆಯಿಲ್, ಅನಿಲ ಸಂಗ್ರಹ ಕೇಂದ್ರ ಆರಂಭಿಸಿ. ರಾಸಾಯನಿಕಗಳು ಮಳೆಗಾಲದ ಸಂದರ್ಭ ನೀರು ಸೇರುತ್ತದೆ. ಮೀನುಗಾರಿಕೆ ಸಂಪೂರ್ಣ ನಾಶವಾಗುತ್ತಿದೆ. ನೈಸರ್ಗಿಕ ಸಂರಕ್ಷಣೆಗೆ ಸ್ವಲ್ಪ ಹಣ ನೀಡಬೇಕಿತ್ತು. ಅಂತಾರಾಷ್ಟ್ರೀಯ ಗಡಿಯಾಗಿದೆ. ಅನಾಹುತ ಎದುರಾಗಿಬಿಟ್ಟರೆ ಅಗ್ನಿ ಆಕಸ್ಮಿಕ‌ ಸಂರಕ್ಷಣೆಗೆ ವ್ಯವಸ್ಥೆ ಕಲ್ಪಿಸಿಲ್ಲ. ಸೂಕ್ಷ್ಮ ಸಾಧನವನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಏಕೆ ಮಾಡಬಾರದು. ಈ‌ ಭಾಗದ ಸಮಸ್ಯೆ ಅಧ್ಯಯನಕ್ಕೆ ಸದನ ಸಮಿತಿ ಮಾಡಬೇಕು ಎಂದು ಒತ್ತಾಯಿಸಿದರು.

10 ವೈದ್ಯಕೀಯ ಕಾಲೇಜುಗಳಿವೆ. ಆದರೆ, ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಉಡುಪಿಯ ಐದಕ್ಕೆ ಐದು, ಮಂಗಳೂರಿನ ಏಳರಲ್ಲಿ ಆರು ಹಾಗೂ ಕಾರವಾರ ಜಿಲ್ಲೆಯ ಆರರಲ್ಲಿ ಐದು ಬಿಜೆಪಿ ಶಾಸಕರು, ಮೂವರೂ ಬಿಜೆಪಿ ಸಂಸದರು ಇಲ್ಲಿದ್ದಾರೆ. ದಯವಿಟ್ಟು ಸರ್ಕಾರ ನಿಮ್ಮದೇ‌ ಇದೆ. ಪರಿಸ್ಥಿತಿ ಸುಧಾರಿಸಿ. ಬಂದರುಗಳು ಎರಡು ಇವೆ. ಪೈಪ್​ಲೈನ್​​ ದುರ್ಬಲವಾಗಿ ಆಯಿಲ್ ಸೋರಿಕೆ ಆಗುತ್ತಿದೆ ಎಂದು ಸದನದ ಗಮನ ಸೆಳೆದರು.

ಕರಾವಳಿ ಮಟ್ಟಕ್ಕೆ ಸೂಕ್ತ ಸೌಕರ್ಯ ಇಲ್ಲ.. ಅದನ್ನು ಸರಿಪಡಿಸುವ ಕಾರ್ಯ ಆಗಬೇಕು. ಗೋವಾ ಅತಿ ಸಣ್ಣ ತೀರ ಪ್ರದೇಶ ಹೊಂದಿದೆ. ಆದರೆ, ಶೇ.23 ರಷ್ಟು ಆದಾಯ ಹೊಂದಿದೆ. ಆದರೆ, ನಾವು 300 ಕಿ. ಮೀ ಉದ್ದನೆಯ ತೀರ ಹೊಂದಿದ್ದು, ಶೇ. 2-3 ರಷ್ಟು ಆದಾಯ ಹೊಂದಿದ್ದೇವೆ. ಒಂದೇ ಒಂದು ತಾರಾ ಹೋಟೆಲ್ ಕರಾವಳಿ ಪ್ರದೇಶದಲ್ಲಿ ಇಲ್ಲ. ಕರಾವಳಿ ಮಟ್ಟಕ್ಕೆ ಸೂಕ್ತ ಸೌಕರ್ಯ ಇಲ್ಲ. ಕೈಗಾರಿಕೆ ಬಂದಿಲ್ಲ. ಸಾಕಷ್ಟು ಆದಾಯ ಬರುವ ಅವಕಾಶವಿದೆ. ಬಂದರು ಅಭಿವೃದ್ಧಿಗೆ ಶ್ರಮಿಸಿ. ಹೂಳೆತ್ತುವ ಕಾರ್ಯ ಕೈಗೊಳ್ಳಿ. ನಿಮಗೆ ಆಗದಿದ್ದರೆ ಖಾಸಗಿಯವರಿಗೆ ವಹಿಸಿ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಸಿ. ಎಂ ಲಿಂಗಪ್ಪ ಮಾತನಾಡಿ, ಬಜೆಟ್ ಅನ್ನು ಪೂರ್ತಿ ವಿರೋಧ ಮಾಡಲ್ಲ. ತೆರಿಗೆ ಹಾಕದೆ ಇದ್ದುದರಲ್ಲೇ ಎಲ್ಲಾ ಜನಾಂಗವನ್ನು ಮುಟ್ಟುವಲ್ಲಿ ಬಸವರಾಜ್ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಹೆಚ್. ಡಿ ಕುಮಾರಸ್ವಾಮಿ ರೈತರ ಬೆಳೆ ದ್ವಿಗುಣಗೊಳಿಸುತ್ತೇವೆ ಎಂದರು. ಆದರೆ, ಯಾರೂ ಯಶಸ್ವಿಯಾಗಿಲ್ಲ. ರೈತರ ಬದುಕು ಹಸನಾಗಿಸಿದರೆ, ಸಾಲ ಮನ್ನಾ, ಬಡ್ಡಿ ಮನ್ನಾ ಮಾಡಿ ಅಂತ ಕೇಳಲ್ಲಾ. ಬಡತನ ಉಳಿಯಲು ಕಾಂಗ್ರೆಸ್ ಕಾರಣ ಅಂತ ಒಬ್ಬರು ಹೇಳಿದರು. ನಾವು ಏನೂ ಮಾಡಿಲ್ಲ ಅನ್ನುವ ಭಾವನೆ ಮೂಡುತ್ತದೆ. ಇಂದು ಸೋಮಾರಿಗಳಿಗೆ ಬಡತನವಿದೆ. ಕೆಲಸ ಮಾಡಿಕೊಂಡು ಹೋಗುವವರಿಗೆ ಬಡತನ ಇಲ್ಲ ಎಂದು ತಿಳಿಸಿದರು.

ಓದಿ: 'ಕಂಪನಿ ಆಕ್ಟ್ ಅಡಿ ನೋಂದಣಿ ಮಾಡಿ ಒಕ್ಕಲಿಗ ಅಭಿವೃದ್ಧಿ ನಿಗಮ ಆರಂಭಿಸುತ್ತೇವೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.