ETV Bharat / state

ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು: ಹೆಚ್​​ಡಿಕೆ - HD Kumaraswamy Response

2021 ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆಂದು ಭವಿಷ್ಯ ಹೇಳಲ್ಲ. ರಾಜಕಾರಣದಲ್ಲಿ ಬದಲಾವಣೆ‌ ಆಗುತ್ತಲೇ ಇರುತ್ತವೆ. ಬಿಜೆಪಿಗೆ ಸಂಖ್ಯಾಬಲ ಅಗತ್ಯದಷ್ಟಿದೆ. ಹಾಗಾಗಿ, ಬಿಜೆಪಿಗೆ ಸದ್ಯಕ್ಕಂತೂ ನಮ್ಮ ಅವಶ್ಯಕತೆ ಇಲ್ಲ-ಹೆಚ್‌ಡಿಕೆ

Former CM HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
author img

By

Published : Dec 12, 2020, 2:34 PM IST

ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಪಕ್ಷ ವಿಲೀನ ಹಾಗೂ ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗೆಯೇ ಆಗುತ್ತೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ನಮ್ಮ ಪಕ್ಷವನ್ನು ಇನ್ನೊಂದು ಪಕ್ಷದ ಜೊತೆ ವಿಲೀನ ಮಾಡುವುದಿಲ್ಲ‌. ಬೇರೆ ಪಕ್ಷದ ಜೊತೆ ವಿಲೀನದ‌ ಅವಶ್ಯಕತೆ ನಮಗಿಲ್ಲ. ನಮ್ಮ‌ ಪಕ್ಷವನ್ನು ಬೇರೆ ಪಕ್ಷದ ಜೊತೆ ವಿಲೀನಗೊಳಿಸುವುದಿಲ್ಲ. ಅಂತಹ ಪರಿಸ್ಥಿತಿಯೇ ಬರುವುದಿಲ್ಲ.ಇವತ್ತು ಅಷ್ಟೇ, ನಾಳೆಯೂ ಅಷ್ಟೇ ಎಂದರು.

ಓದಿ: ಜಾತಿ ಒಡೆಯುವುದು, ಅನಗತ್ಯ ಓಲೈಕೆಯೇ ಸಿದ್ದರಾಮಯ್ಯನವರ ಜಾತ್ಯತೀತತೆ: ಹೆಚ್​ಡಿಕೆ ತಿರುಗೇಟು

2021 ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆಂದು ಭವಿಷ್ಯ ಹೇಳಲ್ಲ. ರಾಜಕಾರಣದಲ್ಲಿ ಬದಲಾವಣೆ‌ ಆಗುತ್ತಲೇ ಇರುತ್ತವೆ. ಬಿಜೆಪಿಗೆ ಸಂಖ್ಯಾಬಲ ಅಗತ್ಯದಷ್ಟಿದೆ. ಹಾಗಾಗಿ, ಬಿಜೆಪಿಗೆ ಸದ್ಯಕ್ಕಂತೂ ನಮ್ಮ ಅವಶ್ಯಕತೆ ಇಲ್ಲ. ಬಿಜೆಪಿಯ ಬಿ ಟೀಂ ಎಂದವರೇ, ನಮ್ಮ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದವರೇ ನಮ್ಮ ಬಳಿ ಬಂದರು. ನಮ್ಮ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರು. ಹೀಗಾಗಿ ಮುಂದೆ ಈ ರಾಜ್ಯಕ್ಕೆ ಕುಮಾರಸ್ವಾಮಿ ಅನಿವಾರ್ಯ ಅಂತ ಬರಬಹುದು. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯ ಭವಿಷ್ಯ ಹೇಳಲು ಆರಂಭಿಸಿದ್ದಾರೆ. ನಾನಂತೂ ಭವಿಷ್ಯಕಾರನಲ್ಲ. ನನಗೆ ವಿಶ್ವಾಸ ಈಗಲೂ ಇದೆ. ರಾಜ್ಯದ ಜನತೆ ಜಾತಿ ಬೇಧ ಮರೆತು ಕುಮಾರಣ್ಣ ಮತ್ತೆ ಬೇಕು ಎಂದು ಬಯಸುವ ದಿನಗಳು ಬರಲಿದೆ ಎಂದರು.

ಬಿಜೆಪಿ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲ. ಯಾರಿಗೂ ಗುಲಾಮತನಕ್ಕೆ ಪಕ್ಷವನ್ನು ಒಳಪಡಿಸಿಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣಕ್ಕೆ ಕೇವಲ ವಿರೋಧ ಮಾಡುವುದಲ್ಲ. ನಾಡಿನ ಬೆಳವಣಿಗೆಗೆ ಸಹಕಾರ ನೀಡುವುದು ಎಂದರು.

ಸಭಾಪತಿ ಬದಲಾವಣೆ: ಸಭಾಪತಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಏನು ಮಾಡಬೇಕೆಂಬುದನ್ನು ಸಂದರ್ಭ ಬಂದಾಗ ನೋಡೋಣ. ಈ ರೀತಿಯ ವಾತಾವರಣದ ಎಂದೂ ಬಂದಿರಲಿಲ್ಲ. ನೋಡೋಣ ಆಗ ಏನು ಮಾಡಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.