ETV Bharat / state

ಶಾ ರಾಜ್ಯಕ್ಕೆ ಬಂದಿದ್ದೇಕೆ.. ಸಿಎಂ ಬದಲಾವಣೆ ಗುಸು ಗುಸು.. ಬೊಮ್ಮಾಯಿ ಬೆಂಬಲಕ್ಕೆ ಬಿಎಸ್‌'ವೈ'!? - CM change talk again in BJP

ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಗುಸು ಗುಸು ಚರ್ಚೆ ಆರಂಭವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಇದು ನಾಯಕತ್ವ ಬದಲಾವಣೆಗೆ ಸೂಕ್ತ ಸಮಯವೆಂದು ಬಿಜೆಪಿಯಲ್ಲಿ ಒಂದು ವರ್ಗ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ. ಸಿಎಂ ಭೋಜನ ಕೂಟದಲ್ಲಿ ಅಮಿತ್ ಶಾ ಭಾಗವಹಿಸಿ ಹೋಳಿಗೆ ಊಟ ಸವಿಯುವ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆಯೇ ಎನ್ನುವ ಚರ್ಚೆ ಸಹ ನಡೆಯುತ್ತಿದೆ..

ಅಮಿತ್ ಶಾ ರಾಜ್ಯಕ್ಕೆ ಭೇಟಿ
ಅಮಿತ್ ಶಾ ರಾಜ್ಯಕ್ಕೆ ಭೇಟಿ
author img

By

Published : May 3, 2022, 7:10 PM IST

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಮಂಗಳವಾರ ಭೇಟಿ ನೀಡಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಗಿಂತಲೂ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಗುಸು ಗುಸು ಚರ್ಚೆ ಆರಂಭವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಇದು ನಾಯಕತ್ವ ಬದಲಾವಣೆಗೆ ಸೂಕ್ತ ಸಮಯವೆಂದು ಬಿಜೆಪಿಯಲ್ಲಿ ಒಂದು ವರ್ಗ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಬಿಜೆಪಿಯ ಜವಾಬ್ದಾರಿಯುತ ನಾಯಕರಾರೂ ಅಧಿಕೃತವಾಗಿ ಹೇಳಿಲ್ಲ. ಆದರೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಮಾತ್ರ, "ನಾಯಕತ್ವ ಬದಲಾವಣೆ" ಬಿಜೆಪಿಯ ಶಕ್ತಿ ಹೆಚ್ಚಿಸುತ್ತದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಸಿಎಂ ಬೊಮ್ಮಾಯಿ ಬದಲಾವಣೆಯ ಮುನ್ಸೂಚನೆ ಎಂದೇ ಕಮಲ ಪಾಳಯದಲ್ಲಿ ವಿಶ್ಲೇಷಿಸಲಾಗುತ್ತದೆ.

ಇದನ್ನೂ ಓದಿ: ಕುಶಲೋಪರಿಗೆ ಸೀಮಿತವಾದ ಸಿಎಂ ಲಂಚ್ ಮೀಟ್: ಅಮಿತ್ ಶಾ ಬಂದರೂ ಗೊಂದಲಕ್ಕೆ ಬೀಳದ ತೆರೆ?

ಬಿ.ಎಲ್. ಸಂತೋಷ ಅವರ ಈ ಹೇಳಿಕೆ ಬೆನ್ನಲ್ಲೇ ರಾಜ್ಯಕ್ಕೆ ಕೆಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿರುವುದು ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಅಮಿತ್ ಶಾ ಅವರು ರಾಜ್ಯ ಸರ್ಕಾರದ ಕಾರ್ಯಕ್ರಮಗಳಾದ ಬಸವ ಜಯಂತಿ, ನೃಪತುಂಗ ವಿವಿ ಕಾರ್ಯಕ್ರಮ, ಖೋಲೋ ಇಂಡಿಯಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಸಹ ಆಗಮಿಸಿರುವುದು ಹಲವಾರು ವದಂತಿಗಳಿಗೆ ಕಾರಣವಾಗಿದೆ.

ಅಮಿತ್ ಶಾಗೆ ಸಿಎಂ ಭೋಜನ ಕೂಟ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನಿವಾಸದಲ್ಲಿ ಬಸವ ಜಯಂತಿ ದಿನ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾಗೆ ಮಧ್ಯಾಹ್ನ ಭೋಜನಕೂಟ ಏರ್ಪಡಿಸಿದ್ದರು. ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಸಿಎಂ ಭೋಜನ ಕೂಟದಲ್ಲಿ ಅಮಿತ್ ಶಾ ಭಾಗವಹಿಸಿ ಹೋಳಿಗೆ ಊಟ ಸವಿಯುವ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆಯೇ ಎನ್ನುವ ಚರ್ಚೆ ಸಹ ನಡೆಯುತ್ತಿದೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಭೇಟಿ ಮಾಡಲು ಸಮಯವನ್ನೇ ನೀಡದಿದ್ದ ಕೇಂದ್ರ ಸಚಿವ ಅಮಿತ್ ಶಾ, ಇದ್ದಕ್ಕಿದ್ದ ಹಾಗೆ ಬೊಮ್ಮಾಯಿ ನೀಡಿದ ಔತಣಕೂಟದಲ್ಲಿ ಪಾಲ್ಗೊಂಡಿರುವುದರಿಂದ ಬೊಮ್ಮಾಯಿಯವರ ಸಿಎಂ ಕುರ್ಚಿ ಗಟ್ಟಿ ಎಂದೇ ಹೇಳಲಾಗುತ್ತಿದೆ.

ಸಿಎಂ ಬೊಮ್ಮಾಯಿ ನಿರಾಳ : ಕೇಂದ್ರ ಸಚಿವ ಅಮಿತ್ ಶಾ ಜತೆಗಿನ ಭೋಜನ‌ ಕೂಟದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುವ ಯಾವುದೇ ಭೀತಿಯಿಲ್ಲದೆ ನಿರಾಳವಾಗಿದ್ದಾರೆ ಎಂದು ತಿಳಿದು ಬಂದಿದೆ. ನಾಯಕತ್ವ ಬದಲಾವಣೆ ವದಂತಿಯು ಕಪೋಲಕಲ್ಪಿತವಾಗಿದೆ ಎಂದು ಸಿಎಂ ಬೊಮ್ಮಾಯಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆನ್ನಲಾಗಿದೆ. ಸಿಎಂ ಬದಲಾವಣೆಯ ವದಂತಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆ ಮತ್ತು ಉತ್ತಮ ಆಡಳಿತ ನಡೆಸಲು ಹೆಚ್ಚಿನ ಗಮನ ನೀಡಲು ಮುಖ್ಯಮಂತ್ರಿ ಬೊಮ್ಮಾಯಿ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಬೊಮ್ಮಾಯಿಗೆ ಬಿಎಸ್​ವೈ ಬೆಂಬಲ : ಮುಖ್ಯಮಂತ್ರಿ ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಬದಲಾವಣೆ ಮಾಡುವ ಪ್ರಸ್ತಾಪ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ಬೊಮ್ಮಾಯಿಯವರನ್ನು ಯಡಿಯೂರಪ್ಪ ಬೆಂಬಲಿಸಿದ್ದಾರೆ. ನಾಯಕತ್ವ ಬದಲಾವಣೆ ಕೂಗು ಮತ್ತು ನಾಯಕರ ಹೇಳಿಕೆಗಳು ಬಿಜೆಪಿ ಹೈಕಮಾಂಡ್ ಅಂಗಳವನ್ನೂ ತಲುಪಿದ್ದು, ಇಂತಹ ಅಸಂಬದ್ಧ ಹೇಳಿಕೆಗಳಿಗೆ ಹೈಕಮಾಂಡ್ ಮಟ್ಟದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.