ETV Bharat / state

ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಪ್ರಕರಣ: ತಪ್ಪಿತಸ್ಥರನ್ನು ಬಂಧಿಸುವಂತೆ ಕಮೀಷನರ್​ಗೆ ದೂರು

ಮೆಟ್ರೊ ಪಿಲ್ಲರ್ ಬಿದ್ದು ತಾಯಿ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಬಂಧಿಸಿಲ್ಲ. ಹೀಗಾಗಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ರಾಜ್ಯ ಭಾವಸಾರ ಕ್ಷತ್ರೀಯ ಮಹಾಸಭಾ ರಾಜ್ಯಾಧ್ಯಕ್ಷ ಎನ್ ವಿ ಶ್ರೀನಿವಾಸ್ ಪಿಸ್ಸೇ ತಿಳಿಸಿದ್ದಾರೆ.

ಆಲ್ ಇಂಡಿಯಾ ಭಾವಸಾರ ಕ್ಷತ್ರೀಯ ನಿಯೋಗ
ಆಲ್ ಇಂಡಿಯಾ ಭಾವಸಾರ ಕ್ಷತ್ರೀಯ ನಿಯೋಗ
author img

By

Published : Jan 13, 2023, 4:32 PM IST

ಭಾವಸಾರ ಕ್ಷತ್ರೀಯ ಸಮಾಜದ ರಾಜ್ಯಾಧ್ಯಕ್ಷ ಎನ್ ವಿ ಶ್ರೀನಿವಾಸ್​ ಪಿಸ್ಸೇ ಅವರು ಮಾತನಾಡಿದರು

ಬೆಂಗಳೂರು : ಕಳೆದ ನಾಲ್ಕು ದಿನಗಳ ಹಿಂದೆ ಮೆಟ್ರೊ ಪಿಲ್ಲರ್ ಬಿದ್ದು ತಾಯಿ - ಮಗು ಸಾವನ್ನಪ್ಪಿದ ಸಂಬಂಧ ಕರ್ತವ್ಯಲೋಪವೆಸಗಿ ತಪ್ಪಿತಸ್ಥ ಅಧಿಕಾರಿಗಳನ್ನ ಬಂಧಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಭಾವಸಾರ ಕ್ಷತ್ರೀಯ ನಿಯೋಗ ಸಮಾಜ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಕಳೆದ ಮಂಗಳವಾರ ನಾಗವಾರ ಬಳಿಯ ಹೆಚ್​ಬಿಆರ್ ಲೇಔಟ್ ಬಳಿ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಮೆಟ್ರೋ ಪಿಲ್ಲರ್ ಉರುಳಿ ತೇಜಸ್ವಿನಿ ಹಾಗೂ ಎರಡೂವರೆ ವರ್ಷದ ಗಂಡು ಮಗು ಸಾವನ್ನಪ್ಪಿತ್ತು. ದುರಂತ ಸಂಭವಿಸಿ ನಾಲ್ಕು ದಿನ ಕಳೆದರೂ ಈವರೆಗೂ ತಪ್ಪಿತಸ್ಥ ಅಧಿಕಾರಿ ಅಥವಾ ಗುತ್ತಿಗೆದಾರರನ್ನು ಬಂಧಿಸಿಲ್ಲ. ಕಳಪೆ ಕಾಮಗಾರಿಯಿಂದಲೇ ತಾಯಿ-ಮಗು ಸಾವನ್ನಪ್ಪಿರುವುದು ಕಂಡುಬಂದರೂ ಯಾರನ್ನು ಬಂಧಿಸಿಲ್ಲ. ಹೀಗಾಗಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ರಾಜ್ಯ ಭಾವಸಾರ ಕ್ಷತ್ರೀಯ ಮಹಾಸಭಾ ರಾಜ್ಯಾಧ್ಯಕ್ಷ ಎನ್ ವಿ ಶ್ರೀನಿವಾಸ್ ಪಿಸ್ಸೇ ತಿಳಿಸಿದ್ದಾರೆ.

1 ಕೋಟಿ ರೂಪಾಯಿ ಪರಿಹಾರ ಘೋಷಣೆಗೆ ಒತ್ತಾಯ: ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಮೃತ ತೇಜಸ್ವಿನಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ದುರ್ದೈವ ದುರಂತದಲ್ಲಿ ತೇಜಸ್ವಿನಿ ಹಾಗೂ ಆಕೆಯ ಮಗು ಸಾವನ್ನಪ್ಪಿದೆ. ರಾಜ್ಯ ಸರ್ಕಾರ ಪರಿಹಾರ ರೂಪದಲ್ಲಿ 20 ಲಕ್ಷ ಘೋಷಣೆ ಮಾಡಿದೆ. ಆದರೆ, ಈ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಹಾಗೂ ದುರಂತದಲ್ಲಿ ಬದುಕುಳಿದ ಮಗುವಿಗೆ ಸರ್ಕಾರದಿಂದಲೇ ಉಚಿತ ಶಿಕ್ಷಣ ನೀಡಬೇಕು ಎಂದು ಅಖಿಲ ಭಾರತ ಭಾವಸಾರ ಕ್ಷತ್ರೀಯ ಸಮಾಜದ ರಾಜ್ಯ ಯುವ ಪರಿಷದ್ ಅಧ್ಯಕ್ಷ ಕೆ. ಜಿ ಅನಂತ್ ಕುಮಾರ್ ಒತ್ತಾಯಿಸಿದರು.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದ ಪ್ರಕರಣ ಸಂಬಂಧ ಪೂರ್ವ ವಿಭಾಗದ ಪೊಲೀಸರ ಮುಂದೆ ಆರೋಪ ಎದುರಿಸುತ್ತಿರುವ ಐವರು ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದರು‌. ಮೆಟ್ರೊ ಪಿಲ್ಲರ್ ಉರುಳಿಬಿದ್ದು ತಾಯಿ - ಮಗು ಸಾವು ಘಟನೆ ಪ್ರಕರಣ ಸಂಬಂಧ ಸೈಟ್ ಇಂಜಿನಿಯರ್, ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಬಿಎಂಆರ್​ಸಿಎಲ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ‌ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ಜಾರಿ‌ ಮಾಡಿದ್ದರು‌. ಈ ಸಂಬಂಧ ಹಾಜರಾಗಿರುವ ಐವರನ್ನು ಗೋವಿಂದಪುರ, ಬಾಣಸವಾಡಿ, ಕೆ ಜಿ ಹಳ್ಳಿ ಸೇರಿದಂತೆ‌ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ನಾಗಾರ್ಜುನಾ ಕನ್​ಸ್ಟ್ರಕ್ಷನ್ ಕಂಪೆನಿಯ ಪ್ರಭಾಕರ್, ವಿಕಾಸ್ ಸಿಂಗ್, ಲಕ್ಷ್ಮೀಪತಿ, ಬಿಎಂಆರ್​ಸಿಎಲ್ ಡೆಪ್ಯೂಟಿ ಚೀಫ್ ವೆಂಕಟೇಶ್ ಶೆಟ್ಟಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್ ಬೆಂಡೆಕರಿ ಎಂಬುವವರು ವಿಚಾರಣೆಗೆ ಹಾಜರಾಗಿದ್ದರು.

ಮೆಟ್ರೋ ಪಿಲ್ಲರ್‌ ದುರಂತ.. ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್: ಮೆಟ್ರೊ ಪಿಲ್ಲರ್‌ನ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದು ಮಹಿಳೆ ಮತ್ತು ಗಂಡು ಮಗು ಸಾವನ್ನಪ್ಪಿದ ಪ್ರಕರಣವನ್ನು ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ. ಶುಕ್ರವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ನ್ಯಾಯಪೀಠ, ಪ್ರಮುಖ ದಿನ ಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿದರು.

ಅಲ್ಲದೇ, ಬೆಂಗಳೂರಿನಲ್ಲಿ ಜನವರಿ 11 ಮತ್ತು 13ರಂದು ಪ್ರತ್ಯೇಕವಾಗಿ ನಡೆದಿರುವ ಪ್ರಕರಣಗಳು ಸಂಜ್ಞೇಯ(ಕಾಗ್ನಿಜೆನ್ಸ್) ಪರಿಗಣಿಸುವಂತೆ ಮಾಡಿದ್ದು, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುತ್ತಿರುವುದಾಗಿ ತಿಳಿಸಿತು.

ಈ ಸಂದರ್ಭದಲ್ಲಿ ವಕೀಲ ಜಿ ಆರ್ ಮೋಹನ್ ಮಧ್ಯ ಪ್ರವೇಶಿಸಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಬ್ರಿಗೇಡ್ ರಸ್ತೆಯಲ್ಲಿ ಗುಂಡಿ ಬಿದ್ದಿರುವ ಅಂಶವನ್ನು ಪ್ರಸ್ತಾಪಿಸಿದರು. ಆಗ ನ್ಯಾಯಪೀಠ, ಈ ಅಂಶವನ್ನು ಪ್ರಕರಣದಲ್ಲಿ ಸೇರಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ನಗರದ ರಸ್ತೆಗಳ ಪರಿಸ್ಥಿತಿಯು ಕಳಕಳಿ ಮತ್ತು ಪ್ರಶ್ನೆ ಹುಟ್ಟುಹಾಕಿದ್ದು, ಇಂಥ ಕಾಮಗಾರಿ ನಡೆಸುವಾಗ ಯಾವ ರೀತಿಯ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ? ಸುರಕ್ಷತಾ ಕ್ರಮಗಳು ಟೆಂಡರ್ ದಾಖಲೆ ಅಥವಾ ಗುತ್ತಿಗೆಕಾರರಿನಲ್ಲಿ ಉಲ್ಲೇಖವಾಗಿದೆಯೇ? ಒಂದೊಮ್ಮೆ ಸುರಕ್ಷತಾ ಕ್ರಮಗಳು ಟೆಂಡರ್ ದಾಖಲೆಗಳಲ್ಲಿ ಉಲ್ಲೇಖವಾಗಿರದಿದ್ದರೆ, ಸರ್ಕಾರದ ಆದೇಶ ಅಥವಾ ಅಧಿಸೂಚನೆಯ ರೂಪದಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆಯೇ? ಎಂದು ಪ್ರಶ್ನಿಸಿತು.

ಓದಿ: ಮೆಟ್ರೋ ಪಿಲ್ಲರ್‌ ದುರಂತ: ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.