ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯವು 'ಕೃಷಿ ಮೇಳ 2020' ಅನ್ನು ನವೆಂಬರ್ 11 ರಿಂದ 13 ರ ವರೆಗೆ ಸರಳವಾಗಿ ನಡೆಸುವುದಾಗಿ ನಿರ್ಧರಿಸಿದೆ.
ಈ ಕುರಿತು ವಿವಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್ ಮತ್ತು ಟ್ಟಿಟ್ಟರ್ ಮೂಲಕ ಕೃಷಿಕರು ಮತ್ತು ಸಾರ್ವಜನಿಕರು ಕೃಷಿ ಮೇಳವನ್ನು ವೀಕ್ಷಿಸಲು ಕಾರ್ಯಕ್ರಮವನ್ನು ನೇರವಾಗಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಸರಳವಾಗಿ, ಕೃಷಿ ತಂತ್ರಜ್ಞಾನಗಳಿಗೆ ಒತ್ತು ನೀಡಿ ನವೆಂಬರ್ 6, 7 ಮತ್ತು 8 ರಂದು ಮೂರು ದಿನಗಳ ಕಾಲ ಮೇಳ ಹಮ್ಮಿಕೊಂಡಿರುವುದಾಗಿ ತಿಳಿಸಿತ್ತು. ಆದರೆ ಇದೀಗ ಕೃಷಿ ಮೇಳವನ್ನು ಮುಂದೂಡಿ ನವೆಂಬರ್ 11, 12 ಮತ್ತು 13 ರಂದು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ ರಾಜೇಂದ್ರ ಪ್ರಸಾದ್ ತಿಳಿಸಿದರು.