ETV Bharat / state

ಇಲ್ಲಿದ್ದು ಏನ್ಮಾಡ್ಲಿ, ರಾಗಿಣಿ-ಸಂಜನಾ ಜೊತೆ ಬಿಟ್ರೆ ಮಾತನಾಡ್ಬಹುದು: ಜೈಲಲ್ಲಿ ಆದಂ ಪಾಷಾ ವರಸೆ - ಸ್ಯಾಂಡಲ್​ವುಡ್​ ಡ್ರಗ್ ಲಿಂಕ್ ಕೇಸ್​

ಹಠ ಬಿಡದ ಪಾಷಾ ಜೈಲಿನ ಸಿಬ್ಬಂದಿಗೆ ರೋಧನೆ ಕೊಡುತ್ತಿದ್ದು, ನಾನು ಇಲ್ಲಿದ್ದು ಏನ್ ಮಾಡ್ಲಿ?, ರಾಗಿಣಿ- ಸಂಜನಾ ಜೊತೆ ಬಿಟ್ರೆ ಮಾತನಾಡಬಹುದು, ಸಮಯ ಕಳೆಯಬಹುದು ಎನ್ನುತ್ತಿದ್ದಾನೆ. ಈತನ ಗೋಳು ಕೇಳಿ ಸುಸ್ತಾದ ಅಧಿಕಾರಿಗಳು, ಆತ ಇರುವ ಸೆಲ್​ ಬಳಿ ಕೇವಲ ಒಬ್ಬ ಸಿಬ್ಬಂದಿಯನ್ನು ನೇಮಿಸಿ, ಆ ಕಡೆ ತಲೆ ಹಾಕದೆ ಸುಮ್ಮನಾಗಿದ್ದಾರೆ ಎಂದು ಜೈಲಿನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Adam Pasha urges shift him to Female Cell
ಮಹಿಳಾ ಸೆಲ್​ಗ್​ ಶಿಫ್ಟ್ ಮಾಡಲು ಆ್ಯಡಂ ಪಾಷಾ ಒತ್ತಾಯ
author img

By

Published : Oct 28, 2020, 10:33 AM IST

ಬೆಂಗಳೂರು : ಡ್ರಗ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆದಂ ಪಾಷಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಡ್ರಾಮಾ ‌ಶುರು ಮಾಡಿದ್ದು, ಅಧಿಕಾರಿಗಳಿಗೆ ಹೊಸ ತಲೆನೋವು ಪ್ರಾರಂಭವಾಗಿದೆ.

ನ್ಯಾಯಾಂಗ ಬಂಧನದಲ್ಲಿರುವ ಪಾಷಾನ ಕ್ವಾರಂಟೈನ್ ಅವಧಿ ಮುಗಿದಿದ್ದು, ಸಾಮಾನ್ಯ ಸೆಲ್​ಗೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ವಾರೆಂಟ್​ನಲ್ಲಿ ಪಾಷಾ ಪುರುಷ ಎಂದಿದೆ. ಆದರೆ, ಆತ ಮಾತ್ರ ನಾನು ಮಹಿಳೆ ನನಗೆ ಮಹಿಳಾ ಸೆಲ್​​ ಕೊಡಿ ಎಂದು ಹಠ ಹಿಡಿದಿದ್ದಾನೆ.

ಪುರುಷರ ಸೆಲ್​ ಬೇಡ ಎಂದು ಆತ ವರಸೆ ಶುರು ಮಾಡಿದಾಗ ವಾರೆಂಟ್​ ತೋರಿಸಿದ ಅಧಿಕಾರಿಗಳು, 'ವಾರೆಂಟ್​ನಲ್ಲಿ ಪುರುಷ ಎಂದಿದೆ. ಮಹಿಳೆಯರ ಸೆಲ್​ಗೆ ಹೇಗೆ ಹಾಕಲು ಆಗುತ್ತೆ' ಎಂದು ಆತನನ್ನು ಪ್ರಶ್ನಿಸಿದ್ದಾರೆ. ಆದರೂ, ಪಾಷಾ ಮಾತ್ರ ಅದನ್ನು ಒಪ್ಪಲು ಸಿದ್ದನಿರಲಿಲ್ಲ. ಪಾಷಾನ ವರಸೆಯಿಂದ ಬೇಸತ್ತ ಜೈಲಾಧಿಕಾರಿಗಳು ಜೈಲಿನ ವಿಶೇಷ ಆಸ್ಪತ್ರೆಯ ಸೆಲ್​ಗೆ ಬಾಗಿಲು ಹಾಕಿ ಲಾಕ್ ಮಾಡಿದ್ದಾರೆ.

ಆದರೂ, ಹಠ ಬಿಡದ ಪಾಷಾ ಜೈಲಿನ ಸಿಬ್ಬಂದಿಗೆ ರೋಧನೆ ಕೊಡುತ್ತಿದ್ದು, ನಾನು ಇಲ್ಲಿದ್ದು, ಏನ್ ಮಾಡ್ಲಿ, ರಾಗಿಣಿ- ಸಂಜನಾ ಜೊತೆ ಬಿಟ್ರೆ ಮಾತನಾಡಬಹುದು, ಸಮಯ ಕಳೆಯಬಹುದು ಎನ್ನುತ್ತಿದ್ದಾನೆ. ಈತನ ಗೋಳು ಕೇಳಿ ಸುಸ್ತಾದ ಅಧಿಕಾರಿಗಳು, ಆತ ಇರುವ ಸೆಲ್​ ಬಳಿ ಕೇವಲ ಒಬ್ಬ ಸಿಬ್ಬಂದಿಯನ್ನು ನೇಮಿಸಿ, ಆ ಕಡೆ ತಲೆ ಹಾಕದೆ ಸುಮ್ಮನಾಗಿದ್ದಾರೆ ಎಂದು ಜೈಲಿನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.