ನೆಲಮಂಗಲ : ಹಿರಿಯ ನಟಿ ಡಾ.ಲೀಲಾವತಿ ತೋಟದಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ನಟ ವಿನೋದ್ ರಾಜ್ ಮನವಿ ಮಾಡಿದ್ದಾರೆ. ನಟ ವಿನೋದ್ ರಾಜ್ ಅವರ ತೋಟದಲ್ಲಿ ಕೆಲವು ವರ್ಷಗಳ ಹಿಂದೆ ಶಿವಕುಮಾರ್ ಎಂಬುವರು ಕೆಲಸಕ್ಕಿದ್ದರು.
ಆ ನಂತರ ಅವರು ಕೆಲಸ ಬಿಟ್ಟು ಹೋದರು. ಸದ್ಯ ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ರಕ್ತ ಹಾಗೂ ಕೊಬ್ಬಿನ ಸೋಂಕಿನಿಂದ ಬಳಲುತ್ತಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಇದೆ. ಆದರೆ, ಹಣಕಾಸಿನ ತೊಂದರೆಯಿಂದ ಬಳಲುತ್ತಿರುವ ಶಿವಕುಮಾರ್ ಹೆಚ್ಚಿನ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.
ತಮ್ಮ ಕೆಲಸಗಾರನ ಕಷ್ಟಕ್ಕೆ ಮರುಗಿದ ನಟ ವಿನೋದ್ ರಾಜ್, ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗಿರುವುದರಿಂದ ದಾನಿಗಳು ಸಹಕರಿಸುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಸಹಾಯ ಮಾಡುವ ದಾನಿಗಳು ಈ ನಂಬರ್ಗೆ ಸಂಪರ್ಕಿಸಬಹುದು: ಚೈತ್ರಾ. ಡಿ.ಟಿ-ಕೇರ್ ಟೇಕರ್: 9886926812