ಬೆಂಗಳೂರು: ಕೊರೊನಾ ಯೋಧರಾಗಿ ದುಡಿಯುತ್ತಿರುವ ಬೆಂಗಳೂರು ನಗರ ಪೊಲೀಸರಿಗೆ ಬಹುಭಾಷಾ ನಟ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ.
![Actor Sonu Sood sends oxygen concentrator to Bengaluru police staff](https://etvbharatimages.akamaized.net/etvbharat/prod-images/kn-bng-06-cp-another-story-byte-7202806_27042021200341_2704f_1619534021_285.jpg)
ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್, ತಮ್ಮ ಚಾರಿಟಬಲ್ ಟ್ರಸ್ಟ್ನಿಂದ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ನೀಡಿದ್ದಾರೆ. ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರಿಗೆ ಆಕ್ಸಿಜನ್ ಸಪ್ಲೈ ಮಾಡುವ ಯಂತ್ರ ಇದಾಗಿದ್ದು, ಸುಮಾರು 80 ಸಾವಿರ ಬೆಲೆ ಬಾಳುವ ಎರಡು ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ವಿಡಿಯೋ ಕಾಲ್ ಮೂಲಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ಪಡೆಯುವಂತೆ ಸೋನು ಸೂದ್ ವಿನಂತಿಸಿದ್ದಾರೆ.
![Actor Sonu Sood sends oxygen concentrator to Bengaluru police staff](https://etvbharatimages.akamaized.net/etvbharat/prod-images/kn-bng-06-cp-another-story-byte-7202806_27042021200341_2704f_1619534021_170.jpg)
ಯಾವುದೇ ಪ್ರಚಾರವಿಲ್ಲದೇ ಸೈಲೆಂಟಾಗಿ ಪೊಲೀಸರಿಗೆ ಟ್ರಸ್ಟ್ ಸದಸ್ಯರ ಮೂಲಕ ಆಕ್ಸಿಜನ್ ಯಂತ್ರ ತಲುಪಿಸಿದ್ದಾರೆ.
ಪೊಲೀಸರಿಂದಲೇ 200 ಹಾಸಿಗೆವಿರುವ ಕೋವಿಡ್ ಕೇರ್ ಆರಂಭಕ್ಕೆ ಸಿದ್ಧತೆ:
ಕೊರೊನಾ ಎರಡನೇ ಅಲೆ ತ್ರೀವಗೊಂಡಿದ್ದು ಫ್ರಂಟ್ ಲೈನ್ ವಾರಿಯರ್ಸ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆತ್ಮಸ್ಥೈರ್ಯ ತುಂಬಿದ್ದಾರೆ. ನಗರ ಪೊಲೀಸ್ ಇಲಾಖೆ 300 ಮಂದಿ ಸಿಬ್ಬಂದಿ ಕ್ವಾರಂಟೈನ್ನಲ್ಲಿದ್ದಾರೆ. ಸೋಂಕಿತ ಪೊಲೀಸರಿಗೆ ಪ್ರತ್ಯೇಕವಾಗಿ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ವೈಟ್ ಫೀಲ್ಡ್, ಸೌತ್ ಸಿಎಆರ್ ಹೆಡ್ಕ್ವಾರ್ಟರ್ ಸೇರಿದಂತೆ 200 ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆಕ್ಸಿಜನ್ ಪೂರೈಕೆ ಮತ್ತು ಕೆಟರಿಂಗ್ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ವ್ಯವಸ್ಥೆ ಕಾರ್ಯಗತಗೊಳ್ಳಲಿದೆ. ಪೊಲೀಸರು ಯಾವುದೇ ಆತಂಕಪಡದೇ ಸುರಕ್ಷಿತ ಕ್ರಮ ಅನುಸರಿಸಿಕೊಂಡು ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ.