ETV Bharat / state

ಹೆಲ್ಮೆಟ್ ಹಾಕಿದ್ದರೆ ವಿಜಯ್ ಜೀವ ಉಳಿಯುತ್ತಿತ್ತು: ಶಿವರಾಜ್​​ಕುಮಾರ್​ ಕಂಬನಿ

author img

By

Published : Jun 15, 2021, 10:46 AM IST

ರವೀಂದ್ರ ಕಲಾಕ್ಷೇತ್ರದಲ್ಲಿ ನಟ ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಿವರಾಜ್ ಕುಮಾರ್, ಕಂಬನಿ ಮಿಡಿದರು.

Last Respect to Sanchari Vijay
ನಟ ಶಿವರಾಜ್ ಕುಮಾರ್

ಬೆಂಗಳೂರು: ಹೆಲ್ಮೆಟ್ ಹಾಕಿದ್ದರೆ ವಿಜಯ್ ಅವರ ಜೀವ ಉಳಿಯುತ್ತಿತ್ತು. ಬೈಕ್​ನಲ್ಲಿ ಸಂಚರಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸಿ ಎಂದು ನಟ ಶಿವರಾಜ್ ಕುಮಾರ್​ ಹೇಳಿದರು.

ಅಪಘಾತದಿಂದ ಗಾಯಗೊಂಡು ಮೃತಪಟ್ಟ ನಟ ಸಂಚಾರಿ ವಿಜಯ್​ ಅವರ ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಮಾತನಾಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಜಯ್​ ಅಗಲಿಕೆಗೆ ಕಂಬನಿ ಮಿಡಿದಿದ್ದ ಶಿವರಾಜ್ ಕುಮಾರ್, ಇಂದು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಅವರು, ನನಗೆ ಮಾತುಗಳು ಬರ್ತಿಲ್ಲ. ವಿಜಯ್ ಅಗಲಿರುವುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ ಎಂದರು.

ನಟ ಶಿವರಾಜ್ ಕುಮಾರ್

ಸಂಚಾರಿ ವಿಜಯ್ ಜೊತೆ ನಾನು ಚಿತ್ರ ಮಾಡಿದ್ದೆ. ಅವರ 'ನಾನು ಅವನಲ್ಲ, ಅವಳು' ಚಿತ್ರ ನೋಡಿದಾಗ ತುಂಬಾ ಖುಷಿ ಆಗಿತ್ತು. ಈಗ ಅವರು ಇಲ್ಲ ಎಂಬುವುದನ್ನು ಕೇಳಲು ನೋವಾಗ್ತಿದೆ. ವಿಜಯ್​ಗೆ​ ಸಹಾಯ ಮಾಡುವ ಮನೋಭಾವ ಇತ್ತು. ಹಾಗಾಗಿ ತನ್ನ ಅಂಗಾಗ ದಾನ ಮಾಡಿದ್ದಾನೆ ಎಂದರು.

ಓದಿ : 'ಹರಿವು'ನಿಂದ 'ಮೇಲೊಬ್ಬ ಮಾಯಾವಿ'ವರೆಗೂ ಸಂಚಾರಿ ವಿಜಯ್​ ಬದುಕಿನ ಪಯಣ ಹೀಗಿತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.