ETV Bharat / state

ಜೀವನ ನಿರ್ವಹಣೆಗೆ ಕೊಲೆ ಸುಲಿಗೆ.. ಗೂಂಡಾ ಕಾಯ್ದೆಯಡಿ ರೌಡಿ ವಿರುದ್ಧ ಕೇಸ್​

ಜೀವನ ಸಾಗಿಸಲು ಸಾರ್ವಜನಿಕರನ್ನು ದೋಚುವ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಕುಖ್ಯಾತ ರೌಡಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

a-rowdy-sheeter-arrested-by-ccb-police-in-bangalore
ಜೀವನಕ್ಕಾಗಿ ಕೊಲೆ, ದರೋಡೆ ಮಾಡ್ತಿದ್ದ ರೌಡಿಗೆ ಸೆರೆವಾಸ
author img

By

Published : Nov 13, 2022, 9:56 PM IST

ಬೆಂಗಳೂರು: ಜೀವನ ಸಾಗಿಸಲು ದರೋಡೆ, ಕೊಲೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಕುಖ್ಯಾತ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈತನ ಮೇಲಿದ್ದ ಕೇಸ್​ಗಳ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸಾರ್ವಜನಿಕರಿಗೆ ಕಂಟಕವಾಗಿದ್ದ ಖದೀಮನನ್ನು ಸೆರೆವಾಸಕ್ಕೆ ದೂಡಲಾಗಿದೆ.

ಮೆಹರಾಜ್ ಖಾನ್ ಬಂಧಿತ ಆರೋಪಿ. ಕೆ.ಜಿ.ಹಳ್ಳಿಯ ವಿನೋಭಾ ನಗರದ ನಿವಾಸಿಯಾಗಿರುವ ಈ ಕುಖ್ಯಾತ ರೌಡಿಯ ವಿರುದ್ಧ 2014 ರಿಂದ 2022 ರವರೆಗೆ ಕೊಲೆ, ದರೋಡೆ, ಕೊಲೆಯತ್ನ, ಅಪಹರಣ, ಮಾದಕವಸ್ತು ಮಾರಾಟ ಸೇರಿ ಒಟ್ಟು 16 ಪೊಲೀಸ್ ಠಾಣೆಗಳಲ್ಲಿ 23 ಪ್ರಕರಣಗಳು ದಾಖಲಾಗಿವೆ.

ಹಲವು ಬಾರಿ ಜೈಲಿಗೆ ಹೋಗಿ, ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದರ ನಂತರವೂ ಕೋರ್ಟ್​ ಆದೇಶ ಉಲ್ಲಂಘಿಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಜೀವನ ನಿರ್ವಹಣೆಗಾಗಿ ಅಪರಾಧ ಕೃತ್ಯಗಳನ್ನು ಮೈಗೂಡಿಸಿಕೊಂಡಿದ್ದ ಈತ, ಸಹಚರರೊಂದಿಗೆ ಸೇರಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದೋಚುತ್ತಿದ್ದ.

ಹಣಕ್ಕಾಗಿ ಎದುರಾಳಿ ಗ್ಯಾಂಗ್ ವಿರುದ್ಧ ದ್ವೇಷ ಸಾಧಿಸುವುದು, ಹಾಗೂ ಡ್ರಗ್ಸ್ ಮಾರಾಟದಂತಹ ಸಮಾಜಘಾತುಕ ಕೃತ್ಯಗಳಲ್ಲಿ‌ ಭಾಗಿಯಾಗಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಕೇಸ್​ ಜಡಿದು ಬಂಧಿಸಲಾಗಿದೆ ಎಂದು ಪೊಲೀಸರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಓದಿ: ಬಾಗಲಕೋಟೆ: ರಾಶಿ ಮಾಡುವಾಗ ಮಷಿನ್​ನಲ್ಲಿ ಸೀರೆ ಸಿಲುಕಿ ಮಹಿಳೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.