ETV Bharat / state

ಬೆಂಗಳೂರು: ಹೆಂಡತಿ ತಂಟೆಗೆ ಬರಬೇಡ ಎಂದಿದ್ದ ವ್ಯಕ್ತಿಯ ಹತ್ಯೆಗೈದ ಆರೋಪಿ ಅರೆಸ್ಟ್

ಪತ್ನಿಯೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದ ಗಂಡನನ್ನೇ ಇಬ್ಬರು ಕಿಡಿಗೇಡಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದೀಗ ಕೊಲೆಗೈದ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

bengaluru
ಬೆಂಗಳೂರು
author img

By

Published : Aug 19, 2021, 2:22 PM IST

ಬೆಂಗಳೂರು: ಹೆಂಡತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಎಂದು ಪ್ರಶ್ನಿಸಿದ ಗಂಡನನ್ನೇ ಕಿರಾತಕರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಓರ್ವ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಅಬಾರ್ಜ್ ಖಾನ್ ಬಂಧಿತ ಆರೋಪಿ. ಸಾದಿಲ್ ಪಾಷಾ(40) ಹತ್ಯೆಯಾದವ. ಇಬ್ಬರು ಪಾದರಾಯನಪುರ ನಿವಾಸಿಗಳಾಗಿದ್ದಾರೆ. ಸಾದಿಲ್ ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದರೆ, ಆರೋಪಿ ಅಬಾರ್ಜ್ ಖಾನ್ ಮೆಡಿಕಲ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಸಾದಿಲ್​ ಪತ್ನಿ ಜೊತೆಗೆ ಅರ್ಬಾಜ್​ ಸಲುಗೆ ಬೆಳೆಸಿ ಓಡಾಡಿಕೊಂಡಿದ್ದನಂತೆ. ನಾಲ್ಕು ತಿಂಗಳ ಹಿಂದೆ ಸಾದಿಲ್​ಗೆ ಈ ವಿಚಾರ ತಿಳಿದು ಅಬಾರ್ಜ್ ಬಳಿ ಪ್ರಶ್ನಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆಯಾಗಿತ್ತು‌. ಇದಾದ ಬಳಿಕವೂ ಮತ್ತೆ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಆತ ಸಾದಿಲ್ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕೆ ಸಹೋದರ ಕೂಡ ಸಾಥ್ ನೀಡಿದ್ದಾನೆ.

ಆ.16 ರಂದು ಮಾತುಕತೆಗಾಗಿ ಕರೆಯಿಸಿಕೊಂಡು ಜೆ.ಜೆ ನಗರ ರೈಲ್ವೆ ಟ್ರ್ಯಾಕ್ ಬಳಿ ಸಾದಿಲ್​ನನ್ನು ಇಬ್ಬರು ಹತ್ಯೆ ಮಾಡಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.