ದೊಡ್ಡಬಳ್ಳಾಪುರ: ಒಂದು ದಿನದ ನವಜಾತ ಹೆಣ್ಣು ಶಿಶುವನ್ನ ಚರಂಡಿಗೆ ಎಸೆದಿರುವ ಅನಾಗರೀಕ ಘಟನೆ ತಾಲೂಕಿನ ಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಹೆಣ್ಣು ಶಿಶುವೊಂದು ಲಿಂಗನಹಳ್ಳಿ ಗ್ರಾಮದ ಪಕ್ಕದೂರಿನ ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿರುವ ಸಾಧ್ಯತೆ ಇದ್ದು, ಅಬಾರ್ಷನ್ನಿಂದ ಮೃತ ಹೆಣ್ಣು ಶಿಶುವನ್ನ ಚರಂಡಿಗೆ ಎಸೆದಿರುವ ಸಂಶಯ ವ್ಯಕ್ತವಾಗಿದೆ.
ಹೆಣ್ಣು ಮಗುವೆನ್ನುವ ಕಾರಣಕ್ಕೆ ಯಾರೋ ಪಾಪಿಗಳು ಮಗುವನ್ನ ಎಸೆದಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.