ETV Bharat / state

ರಾಜ್ಯದಲ್ಲಿ ಮತ್ತೆ ಏರಿಕೆಯತ್ತ ಕೊರೊನಾ: ಇಂದು 921 ಮಂದಿಗೆ ತಗುಲಿದ ಸೋಂಕು - ಕೊರೊನಾ ದೃಢ

ರಾಜ್ಯದಲ್ಲಿಂದು 921 ಮಂದಿಗೆ ಕೋವಿಡ್ ದೃಢಪಟ್ಟು, ಓರ್ವ ಬಲಿಯಾಗಿದ್ದಾನೆ. ಸದ್ಯ ಯುಕೆಯಿಂದ ವಾಪಸಾಗಿದ್ದ 64 ಮಂದಿಗೆ ಕೊರೊನಾ ದೃಢವಾಗಿದ್ದು, ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಕೊರೊನಾ ದೃಢವಾಗಿದೆ.

921-new-corona-cases-reported-in-karnataka-today
ರಾಜ್ಯದಲ್ಲಿ ಮತ್ತೆ ಏರಿಕೆಯತ್ತ ಕೊರೊನಾ
author img

By

Published : Mar 13, 2021, 8:37 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯತ್ತ ಸಾಗಿದ್ದು, ಇಂದು 921 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,59,338ಕ್ಕೆ ಏರಿಕೆಯಾಗಿದೆ.

ಈ ನಡುವೆ ಇಂದು ಓರ್ವ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,387ಕ್ಕೆ ಏರಿದೆ.‌ ಇಂದು 992 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 9,38,890 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 8,042 ಸಕ್ರಿಯ ಪ್ರಕರಣಗಳಿದ್ದು, 123 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಸೋಂಕಿತರ ಪ್ರಕರಣಗಳ ಶೇಕಡವಾರು 1.26ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.10ರಷ್ಟಿದೆ.

ಈವರೆಗೆ ಯುಕೆಯಿಂದ ಬಂದಿದ್ದ ಪ್ರಯಾಣಿಕರಲ್ಲಿ 64 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಕೋವಿಡ್​ ದೃಢಪಟ್ಟಿದೆ.‌ 29 ಜನರಿಗೆ ರೂಪಾಂತರಿ ಕೊರೊನಾ ಹರಡಿದೆ. ‌ಇತ್ತ ದಕ್ಷಿಣ ಆಫ್ರಿಕಾದ ಸೋಂಕು ಮೂವರಲ್ಲಿ ಕಾಣಿಸಿಕೊಂಡಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: 1-6ನೇ ತರಗತಿಗಳಿಗೆ ಬೇಸಿಗೆ ರಜೆ ಘೋಷಣೆ‌ ಸುಳ್ಳು: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.