ETV Bharat / state

ಪಾರಂಪರಿಕ 5D ಹಾಗೂ 3D ವಿನ್ಯಾಸದ ಆಭರಣ ಪ್ರದರ್ಶನ ಮೇಳಕ್ಕೆ ನಟಿ ಪ್ರಿಯಾಂಕಾ ಚಾಲನೆ - ಬೆಂಗಳೂರು ಆಭರಣ ಪ್ರದರ್ಶನ ಮೇಳ

ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ಆಭರಣ ಪ್ರದರ್ಶಕರಿಂದ ಭಾರತದ ಪಾರಂಪರಿಕ ಹಾಗೂ 5D ಹಾಗೂ 3D ವಿನ್ಯಾಸವಿರುವ ಸಾವಿರಾರು ವಿನ್ಯಾಸದ ಆಭರಣಗಳ ಪ್ರದರ್ಶನ ಆರಂಭಗೊಂಡಿದೆ.

5d-and-3d-design-jewelry-show-fair-in-bengaluru
ಪಾರಂಪರಿಕ 5D ಹಾಗೂ 3D ವಿನ್ಯಾಸದ ಆಭರಣ ಪ್ರದರ್ಶನ ಮೇಳಕ್ಕೆ ನಟಿ ಪ್ರಿಯಾಂಕಾ ಚಾಲನೆ
author img

By

Published : Oct 16, 2021, 3:44 AM IST

ಬೆಂಗಳೂರು : ಭಾರತದ ಅತ್ಯಂತ ಪುರಾತನ, ಅತಿ ದೊಡ್ಡ ಮತ್ತು ಅತ್ಯುತ್ತಮ ಚಿನ್ನಾಭರಣ ಮೇಳವು ಶುಕ್ರವಾರದಿಂದ ಅ. 18ರವರೆಗೆ 4 ದಿನಗಳ ಕಾಲ ನಡೆಯಲಿದೆ. ಜುವೆಲ್ಸ್ ಆಫ್ ಇಂಡಿಯಾದ ಮಾರಾಟ ಮತ್ತು ಪ್ರದರ್ಶನ ಮೇಳಕ್ಕೆ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಚಾಲನೆ ನೀಡಿದರು .

5D and 3D Design Jewelry Show Fair in bengaluru
ಆಭರಣ ಧರಿಸಿ ಮಿಂಚಿದ ನಟಿ ಪ್ರಿಯಾಂಕಾ

150ಕ್ಕೂ ಹೆಚ್ಚು ಆಭರಣ ಪ್ರದರ್ಶಕರಿಂದ ಭಾರತದ ಪಾರಂಪರಿಕ ಹಾಗೂ 5D ಹಾಗೂ 3D ವಿನ್ಯಾಸವಿರುವ ಸಾವಿರಾರು ವಿನ್ಯಾಸದ ಆಭರಣಗಳ ಪ್ರದರ್ಶನ ಇದಾಗಿದೆ. ದೇಶಾದ್ಯಂತ 100ಕ್ಕೂ ಹೆಚ್ಚು ಖ್ಯಾತ ಆಭರಣ ಮಾರಾಟಗಾರರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಶೇ 20ರಷ್ಟು ಹೊಸ ಮತ್ತು ಅತ್ಯಾಧುನಿಕ ಮಾದರಿಗಳ ಆಭರಣಗಳು ಈ ಮೇಳದ ವಿಶೇಷವಾಗಿದೆ.

ಮೇಳದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ

ಈ ಆಧುನಿಕ ಮತ್ತು ವೈವಿದ್ಯಮಯ ವಿನ್ಯಾಸಗಳ ಆಭರಣಗಳನ್ನು ತೊಟ್ಟು ನಟಿ ಪ್ರಿಯಾಂಕ ಉಪೇಂದ್ರ ಕಂಗೊಳಿಸಿದರು. ಮೇಳವನ್ನ ಉದ್ಘಾಟಿಸಿದ ನಂತರ ಮಾತನಾಡಿದ ಪ್ರಿಯಾಂಕ, ವಿಶಿಷ್ಟ, ವಿನೂತನ ಹಾಗೂ ಆಕರ್ಷಕ ಆಭರಣ ಮೇಳದಲ್ಲಿ ಬೆಂಗಳೂರಿನ ಮಹಿಳೆಯರಷ್ಟೇ ಅಲ್ಲದೆ, ರಾಜ್ಯದಾದ್ಯಂತ ಎಲ್ಲರೂ ಪಾಲ್ಗೊಳ್ಳಬೇಕು. ಈ ಮೇಳ ಬದುಕಿಗೆ ಹೊಸ ಮೆರಗು ಮತ್ತು ಘನತೆ ತಂದುಕೊಡುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ದೇಶದ ಎಲ್ಲ ಅತ್ಯುತ್ತಮ ಆಭರಣಗಳು ಒಂದೇ ಸೂರಿನಡಿ ಪ್ರದರ್ಶನವಾಗುತ್ತಿದೆ ಎಂದರು.

ಇದನ್ನೂ ಓದಿ: ಪ್ರತಿ ವರ್ಷದಂತೆ ಈ ವರ್ಷವೂ ಶುಭ ಸುದ್ದಿ : ಅಂಬಾರಿ ಅರಮನೆ ಸೇರುತ್ತಿದ್ದಂತೆ ಧರೆಗಿಳಿದ ವರುಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.