ಬೆಂಗಳೂರು : ವ್ಹೀಲಿಂಗ್, ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುವವರ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 40 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಹೀಲಿಂಗ್ ನಿಷಿದ್ಧವಾಗಿದ್ದು, ವ್ಹೀಲಿಂಗ್ ಹಾಗೂ ದೋಷಪೂರಿತ ಸೈಲೆನ್ಸರ್ ಅಳವಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.
ಕಾರ್ಯಾಚರಣೆ ವೇಳೆ ವ್ಹೀಲಿಂಗ್‌ನಲ್ಲಿ ತೊಡಗಿದ್ದ 18 ದ್ವಿಚಕ್ರ ವಾಹನ, ಡ್ರ್ಯಾಗ್ ರೇಸಿಂಗ್‌ನಲ್ಲಿ ತೊಡಗಿದ್ದ 1 ಕಾರು, ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿದ್ದ 6 ಕಾರು ಹಾಗೂ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಐಪಿಸಿ ಸೆಕ್ಷನ್ 279ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೂರ್ವ ವಲಯ ವ್ಹೀಲಿಂಗ್ 1, ದೋಷಪೂರಿತ ಸೈಲೆನ್ಸರ್ ಅಳವಡಿಕೆ ಪ್ರಕರಣ-1 ಹಾಗೂ ಡ್ರ್ಯಾಗ್ ರೇಸಿಂಗ್ 5 ಪ್ರಕರಣ ಬೆಳಕಿಗೆ, ಪಶ್ಚಿಮ ವಲಯ ವ್ಹೀಲಿಂಗ್-8, ದೋಷಪೂರಿತ ಸೈಲೆನ್ಸರ್-1 ಹಾಗೂ ಡ್ರ್ಯಾಗ್‌ರೇಸಿಂಗ್ 7 ಪ್ರಕರಣ. ಉತ್ತರ ವಲಯ ವೀಲಿಂಗ್-9 ಹಾಗೂ ಡ್ರ್ಯಾಗ್‌ರೇಸಿಂಗ್-1 ಪ್ರರಕಣ ದಾಖಲಾಗಿದೆ.
ಇದನ್ನೂ ಓದಿ: ಅಯ್ಯಯ್ಯೋ.. ಜ್ಯೋತಿಷಿ ಮಾತು ನಂಬಿ ಮನೆಗೆ ಬೀಗ.. ಕನ್ನ ಹಾಕಿ 8 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ ಕಳ್ಳರು..