ಬೆಂಗಳೂರು : ರಾಜ್ಯದಲ್ಲಿಂದು 2,792 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,89,804 ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 12,520ಕ್ಕೆ ಏರಿದೆ. 1,964 ಮಂದಿ ಗುಣಮುಖರಾಗಿದ್ದು, ಈವರೆಗೆ 9,53,416 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
ಇನ್ನೊಂದೆಡೆ ಸಕ್ರಿಯ ಪ್ರಕರಣಗಳು 23,849ಕ್ಕೆ ಏರಿದ್ದು, 227 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡವಾರು 3.20%ರಷ್ಟಿದ್ದರೆ, ಮೃತ ಪಟ್ಟವರ ಪ್ರಮಾಣ ಶೇ. 0.57%ರಷ್ಟಿದೆ.
ವಿಮಾನ ನಿಲ್ದಾಣದಿಂದ 1,326 ಮಂದಿ ಪ್ರಯಾಣಿಕರು ಬಂದಿದ್ದು, ಅವರೆಲ್ಲ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ ಈವರೆಗೆ 498 ಪ್ರಯಾಣಿಕರು ಆಗಮಿಸಿದ್ದಾರೆ.
ಇದನ್ನೂ ಓದಿ.. ಸಿಡಿ ಲೇಡಿಗೆ 8ನೇ ಬಾರಿ ನೋಟಿಸ್: ನಾಳೆ ವಿಚಾರಣೆಗೆ ಹಾಜರಾಗಲು ಎಸ್ಐಟಿ ಸೂಚನೆ