ETV Bharat / state

ರಾಜ್ಯದಲ್ಲಿಂದು 1,990 ಮಂದಿಗೆ ಕೋವಿಡ್; 2,537 ಸೋಂಕಿತರು ಗುಣಮುಖ

author img

By

Published : Jul 14, 2021, 7:31 PM IST

Updated : Jul 14, 2021, 7:40 PM IST

ರಾಜ್ಯದಲ್ಲಿ ಜಾಗತಿಕ ಪಿಡುಗು ಕೋವಿಡ್ ಪ್ರಭಾವ ದಿನೇ ದಿನೇ ಕಡಿಮೆಯಾಗುತ್ತಿದೆ. ಆದ್ರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುವಂತಿಲ್ಲ. ಕೋವಿಡ್‌ ಹೊಸ ರೂಪಾಂತರಿಗಳು ಇನ್ನೂ ಜನರನ್ನು ದುಸ್ವಪ್ನದಂತೆ ಕಾಡುತ್ತಿದೆ. ನೆರೆಯ ರಾಜ್ಯ ಕೇರಳದಲ್ಲಿ ಮಾರಕ ರೋಗ ಮತ್ತೆ ಅಲ್ಲಿನ ಜನರ ನಿದ್ದೆಗೆಡಿಸಿದೆ. ಈ ಮಧ್ಯೆ ನಮ್ಮ ರಾಜ್ಯದಲ್ಲಿ ಇಂದು ಪತ್ತೆಯಾದ ಕೋವಿಡ್ ಪ್ರಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ರಾಜ್ಯದಲ್ಲಿಂದು ಕೊರೊನಾ ಇಳಿಮುಖ
ರಾಜ್ಯದಲ್ಲಿಂದು ಕೊರೊನಾ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು 1,990 ಮಂದಿಗೆ ಹೊಸದಾಗಿ ಕೋವಿಡ್‌-19 ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,76,587ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.1.59ರಷ್ಟಿದೆ.

ಇನ್ನು, 2,537 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳಿಗೆ ಹೋಲಿಕೆ ಮಾಡಿದ್ರೆ, ಸೋಂಕಿತರ ಸಂಖ್ಯೆ ಕಡಿಮೆ ಇದೆ. ಈತನಕ‌ 28,06,933 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ಸದ್ಯ 33,642 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ. ಮಾರಕ ರೋಗಕ್ಕೆ ಇಂದು 45 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗಿನ ಸಾವಿನ ಸಂಖ್ಯೆ 35,989 ತಲುಪಿದೆ. ಸಾವಿನ‌ ಶೇಕಡಾವಾರು ಪ್ರಮಾಣ ಮತ್ತೆ ಶೇ.2.26ರಷ್ಟಿದೆ. ಯುಕೆಯಿಂದ ಮೂವರು ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ.‌

ಇಂದು 1,24,494 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದೆ.

ರಾಜ್ಯದಲ್ಲಿ 3,543 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು

ರಾಜ್ಯದಲ್ಲಿ ಇಲ್ಲಿಯವರೆಗೆ 3,543 ಜನರಿಗೆ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದ್ದು, ಈ ಪೈಕಿ 307 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 1,129 ಸೋಂಕು ಪತ್ತೆಯಾಗಿದ್ದು, 107 ಜನರು ಮೃತರಾಗಿದ್ದಾರೆ.‌ ನಗರದ ವಿಕ್ಟೋರಿಯಾ 208 , ಬೌರಿಂಗ್ 362, ಕೆ.ಸಿ‌ ಜನರಲ್ 4, ಇಂದಿರಾಗಾಂಧಿ 1 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.‌

Last Updated : Jul 14, 2021, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.